ಲೋಕದರ್ಶನ ವರದಿ
ಕುರುಗೋಡು 25: ಪಟ್ಟಣ ಸಮೀಪದ ಗೆಣಿಕೆಹಾಳ್ ಗ್ರಾಮದ ಸಕರ್ಾರಿ ಪ್ರೌಢ ಶಾಲೆಯ ಪ್ರಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶಾಲೆಯ ಎಸ್ಡಿಎಮ್ಸಿ ಅದ್ಯಕ್ಷ ಎನ್ವೈ.ಗೋವಿಂದಪ್ಪ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾಥರ್ಿಗಳಿಗೆ ಸರ್ಕಾರವು ಅನೇಕ ರೀತಿಯ ಯೋಜನೆಗಳನ್ನು ನೀಡಿದೆ, ಈ ಯೋಜನೆಗಳನ್ನು ವಿದ್ಯಾಥರ್ಿಗಳು ಉಪಯೋಗಿಸಿಕೊಂಡು ಶಾಲೆಯ ಕೀರ್ತಿ ತರುವ ಪ್ರಯತ್ನ ಮಾಡಬೇಕು ಎಂದರು.
ಗ್ರಾಪಂ. ಪಿಡಿಒ ಎ.ಮಂಜುನಾಥ ಮಾತನಾಡಿ, ವಿದ್ಯಾಥರ್ಿಗಳು ಸರ್ಕಾರ ನೀಡಿರುವ ಉಚಿತ ಸೈಕಲ್ಗಳನ್ನು ಶಾಲೆಗೆ ಮಾತ್ರ ಉಪಯೋಗಿಸಿ, ಆಲ್ಲದೆ ಖಾಸಗೀ ಕಾರ್ಯಗಳಿಗೆ ಎಂದೂ ಬಳಸಬಾರದು ಎಂದು ಸಲಹೆ ನೀಡಿದರು.
ನಂತರ 8ನೇ ತರಗತಿಯ 80 ವಿದ್ಯಾಥರ್ಿಗಳಿಗೆ ಉಚಿತ ಸೈಕಲ್ ವಿತರಿಸಿದರು.
ಗ್ರಾಪಂ. ಅಧ್ಯಕ್ಷ ಶಾಂತನಗೌಡ, ಶಾಲೆಯ ಪ್ರಭಾರಿ ಮುಖ್ಯಗುರು ಮಣ್ಣೂರು ಬಸವರಾಜ, ಎಸ್ಡಿಎಂಸಿ ಸದಸ್ಯರು, ಶಿಕ್ಷಣ ಪ್ರೇಮಿಗಳು, ಶಿಕ್ಷಕರು, ಗ್ರಾಮದ ಮುಖಂಡರು ಹಾಗೂ ಮತ್ತಿತರರು ಇದ್ದರು.