ಕವಟೆಮಂಕಾಳ ತಾಲೂಕಿನ ಕೊಗನೋಳಿ: ನಾಳೆ ಅಜೀತಸೇನ, ಪದ್ಮಕೀತರ್ಿ ಮಹಾರಾಜರ ಮುನಿದೀಕ್ಷೆ

ಕಾಗವಾಡ 14: ಕಾಗವಾಡ ತಾಲೂಕಿನ ನೆರೆಯ ಮಹಾರಾಷ್ಟ್ರದ ಕವಟೆಮಂಕಾಳ ತಾಲೂಕಿನ ಕೊಗನೋಳಿ ಗ್ರಾಮದ ಭಗವಾನ್ ಪಾಶ್ರ್ವನಾಥ ದಿಗಂಬರ್ ಜೈನ ಮಂದಿರದಲ್ಲಿ ಬುಧವಾರ ದಿ. 13 ರಿಂದ ಗುರುವಾರ ದಿ. 21ರ ವರೆಗೆ ಸಿದ್ಧಚಕ್ರ ಮಹಾಮಂಡಲ ವಿಧಾನ ಕಾರ್ಯಕ್ರಮ ಪ್ರಾರಂಭಗೊಂಡಿದೆ. ಜಿನಸೇನ ಭಟ್ಟಾರಕ ಮಹಾಸ್ವಾಮೀಜಿ ನಾಂದಣಿ, ಅಜೀತಸೇನ ಮಹಾರಾಜರು, ಕ್ಷುಲ್ಲಕ ಪದ್ಮಕೀತರ್ಿ ಮಹಾರಾಜರು ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗುತ್ತಿದೆ. ಶನಿವಾರ ದಿ. 16 ರಂದು ಗಣಧರ ವಲಯವಿಧಾನ, ಭವ್ಯ ದಿಗಂಬರ್ ಮುನಿ ದೀಕ್ಷೆ ಕ್ಷುಲ್ಲಕ ಮುನಿಗಳಾದ ಅಜೀತಸೇನ ಮ

ಕವಟೆಮಂಕಾಳ ತಾಲೂಕಿನ ಕೊಗನೋಳಿ ಗ್ರಾಮದ ಭಗವಾನ್ ಪಾಶ್ರ್ವನಾಥ ದಿಗಂಬರ್ ಜೈನ ಮಂದಿರದಲ್ಲಿ ಬುಧವಾರ ದಿ. 13 ರಿಂದ ಗುರುವಾರ ದಿ. 21ರ ವರೆಗೆ ಸಿದ್ಧಚಕ್ರ ಮಹಾಮಂಡಲ ವಿಧಾನ ಕಾರ್ಯಕ್ರಮ ಪ್ರಾರಂಭಗೊಂಡಿದೆ.

ಜಿನಸೇನ ಭಟ್ಟಾರಕ ಮಹಾಸ್ವಾಮೀಜಿ ನಾಂದಣಿ, ಅಜೀತಸೇನ ಮಹಾರಾಜರು, ಕ್ಷುಲ್ಲಕ ಪದ್ಮಕೀತರ್ಿ ಮಹಾರಾಜರು ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗುತ್ತಿದೆ.

ಶನಿವಾರ ದಿ. 16 ರಂದು ಗಣಧರ ವಲಯವಿಧಾನ, ಭವ್ಯ ದಿಗಂಬರ್ ಮುನಿ ದೀಕ್ಷೆ ಕ್ಷುಲ್ಲಕ ಮುನಿಗಳಾದ ಅಜೀತಸೇನ ಮತ್ತು ಪದ್ಮಕೀತರ್ಿ ಈ ಕ್ಷುಲ್ಲಕ ಮುನಿಗಳಿಗೆ ಮುನಿದೀಕ್ಷೆ ನೀಡಲಿದ್ದಾರೆ.

ಇದರ ಸಾನಿಧ್ಯ ಧರ್ಮಸೇನ, ಜೀನಸೇನ, ಚಂದ್ರಪ್ರಭು, ಚಿನ್ಮಯಸಾಗರ, ವಿದ್ಯಾಭೂಷಣ ಮುನಿಮಹಾರಾಜರು ವಹಿಸಲಿದ್ದಾರೆ.

ದಿ. 17 ಮೌಜಿ ಬಂಧನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಕಾಗವಾಡ, ಅಥಣಿ, ರಾಯಬಾಗ, ಚಿಕ್ಕೋಡಿ ತಾಲೂಕಿನ ಶ್ರಾವಕ, ಶ್ರಾವಿಕೆಯರು ಹೆಚ್ಚಿನ ಸಂಖ್ಯೆಯಿಂದ ಪಾಲ್ಗೊಳ್ಳಬೇಕೆಂದು ಕೋಗ್ನೋಳಿ ಪೂಜಾ ಮಹೋತ್ಸವ ಸಮೀತಿ ವತಿಯಿಂದ ಅಹ್ವಾನಿಸಿದ್ದಾರೆ.