ನಾಡು ಕಂಡ ಶ್ರೇಷ್ಠ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಜಯಂತಿ ಆಚರಣೆ

Jakanachari Jakanachari Jayanti celebration of the greatest sculptor of the country


ನಾಡು ಕಂಡ ಶ್ರೇಷ್ಠ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಜಯಂತಿ ಆಚರಣೆ

ಹೂವಿನ ಹಡಗಲಿ 02: ಕರುನಾಡು ಕಂಡ ಶ್ರೇಷ್ಠ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಎಂದು ಮುಖ್ಯ ಗುರುಗಳಾದ ಸುರೇಶ ಅಂಗಡಿ ಹೇಳಿದರು.ಪಟ್ಟಣದ ಸರ್ಕಾರಿ ಅನುದಾನಿತ ತುಂಗಭದ್ರಾ ಪ್ರೌಢಶಾಲೆಯಲ್ಲಿ ಬುಧವಾರ ಅಮರಶಿಲ್ಪಿ ಜಕಣಾಚಾರಿ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.ತುಮಕೂರಿನ ಪುಟ್ಟ ಹಳ್ಳಿಯಲ್ಲಿ ಜನಿಸಿ ತಮ್ಮಲ್ಲಿರುವ ಶಿಲ್ಪಕಲೆ ಮೂಲಕ ಪ್ರಸಿದ್ಧ ಗಳಿಸಿದವರು. 

1964 ರಲ್ಲಿ ಕಲ್ಯಾಣ್ ಕುಮಾರ್ ಇವರ ಜೀವನ ಚರಿತ್ರೆ ಆಧರಿಸಿ "ಅಮರಶಿಲ್ಪಿ ಜಕಣಾಚಾರಿ" ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಎಂದು ಸ್ಮರಿಸಿದರು.ಚಿತ್ರಕಲಾ ಶಿಕ್ಷಕರಾದ ದ್ವಾರಕೀಶ್ ರೆಡ್ಡಿ ಎಸ್ ಕಲ್ಯಾಣಿ ಚಾಲುಕ್ಯರಿಗೆ ಹಾಗೂ ಹೊಯ್ಸಳರಿಗೆ ಅನೇಕ ದೇವಸ್ಥಾನಗಳನ್ನು ನಿರ್ಮಿಸಿದ ಹೆಗ್ಗಳಿಕೆ ಇವರದು ಎಂದು ಹೇಳಿದರು.ಶಿಕ್ಷಕರಾದ ಸ್ವಾಮಿನಾಥ ರಾಮಸ್ವಾಮಿ ಬಸಪ್ಪ ಕೆ ವೈ ಜಯಮ್ಮ ಆನಂದ್ ಜಿ ಲಂಬಾಣಿ ಗಿಡ್ಡಾನಾಯ್ಕ್‌ ಪ್ರತಿಮಾ ಎನ್ ಗೀತಾ ಪಿ ಎಂ ರೇಖಾ ಎಸ್ ಸಂಗಮೇಶ ಸುಂಕದ ಪ್ರಸಾದ್ ಸಂತೋಷ ಕುಮಾರ್ ಎಸ್ ಇತರರು ಉಪಸ್ಥಿತರಿದ್ದರು.