ದೇಶದ ಸಂವಿಧಾನ ಪಾಲನೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ

It is the duty of every citizen to uphold the Constitution of the country

ದೇಶದ ಸಂವಿಧಾನ ಪಾಲನೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ 

ಬೈಲಹೊಂಗಲ 26: ದೇಶದ ಸಂವಿಧಾನ ಪಾಲನೆ ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ ಎಂದು ನಯಾನಗರ ಸರ್ಕಾರಿ ಪ್ರೌಢ ಶಾಲಾ ಎಸ್ಡಿಎಂಸಿ ಅಧ್ಯಕ್ಷ ನಾರಾಯಣ ನಲವಡೆ ನುಡಿದರು. 

ಅವರು ನಯಾನಗರ ಸರ್ಕಾರಿ ಪ್ರೌಢ ಶಾಲೆಯಲ್ಲಿ 76ನೇಯ ಗಣರಾಜ್ಯೋತ್ಸವ ನಿಮಿತ್ಯ ರಾಷ್ಟ್ರ ದ್ವಜಾರೋಹನ ನೆರವೇರಿಸಿ ಮಾತನಾಡಿ ದೇಶದ ನಾಗರಿಕರಿಗಾಗಿ ನಮ್ಮ ಸಂವಿಧಾನದಲ್ಲಿಯೇ ಉಲ್ಲೇಖವಾಗಿರುವ ಕರ್ತವ್ಯಗಳನ್ನು ಮರೆತು ಕೇವಲ ಸಂವಿಧಾನ ನೀಡಿದ ಹಕ್ಕುಗಳಿಗೆ ಮಾತ್ರ ಹೋರಾಟ ಮಾಡುತ್ತಿರುವುದು ಖೇದಕರ ಸಂಗತಿಯಾಗಿದೆ. ಕಾರಣ ಭವಿಷ್ಯತ್ತಿನ ಪ್ರಜೆಗಳಾದ ತಾವುಗಳು ಸಂವಿಧಾನ ಆಶಯದಂತೆ ಕರ್ತವ್ಯಗಳನ್ನು ಮಾಡಿದ ನಂತರ ಹಕ್ಕಿಗಾಗಿ ಹೋರಾಟ ಮಾಡುವುದು ಉತ್ತಮ ಎಂದರು. 

ಸ್ವತಂತ್ರದ ಸಂಕೇತವಾಗಿ ಪಾರಿವಾಳಗಳನ್ನು ಬಂದನದಿಂದ ಮುಕ್ತಮಾಡಿ ಹಾರಿ ಬಿಡಲಾಯಿತು. ಜಿಲ್ಲಾ ಮಟ್ಟದ ಪ್ರಭಂದ ಸ್ಪರ್ದೇಯಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಕು. ವೈಷ್ಣವಿ ಅಳಗೋಡಿ ಇವಳಿಗೆ ಜಿಲ್ಲಾಡಳಿತ ನೀಡಿದ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಲಾಯಿತು.  ಗಣರಾಜ್ಯೋತ್ಸವ ನಿಮಿತ್ಯ ಪರೇಡನಲ್ಲಿ ಗ್ರಾಮದ ಶಾಲಾ ಸಮಿತಿ ಅಧ್ಯಕ್ಷ ಮತ್ತು ಸದಸ್ಯರಿಗೆ ಗೌರವ ವಂದನೆ ಸಲ್ಲಿಸಿದರು. ಮಕ್ಕಳು ದೇಶ ಮಹಾನ ನಾಯಕರಾದ ಅಂಬೇಡ್ಕರ, ಒನಕೆ ಓಬವ್ವ, ಕಿತ್ತೂರು ಚನ್ನಮ್ಮ, ವೀರ ಮಾತೆ ಜೀಜಾಬಾಯಿ, ಜಾನ್ಸಿರಾಣಿ ಲಕ್ಷ್ಮೀಬಾಯಿ ಮುಂತಾದ ಮಹನೀಯರ ವೇಷ ಭೂಷಣದಲ್ಲಿ ಕಂಗೊಳಿಸಿದರು. ಮಕ್ಕಳು ಗಣರಾಜ್ಯದ ಕುರಿತು ಕನ್ನಡ. ಹಿಂದಿ, ಆಂಗ್ಲ ಬಾಷೆಯಲ್ಲಿ ಭಾಷಣ ಮಾಡಿ ದೇಶ ಭಕ್ತಿ ಗೀತೆಗಳನ್ನು ಹಾಡಿದರು. 

ಪ್ರೌಢ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ನಾರಾಯಣ ನಲವಡೆ, ಪ್ರಾಥಮಿಕ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಏಣಗಿ, ನವಚೇತನ ಯುವಕ ಸಂಘ, ಸರ್ಕಾರಿ ಹೋಮಿಯೋಪತಿಕ್ ಚಿಕಿಸ್ಥಾಲಯ ಮತ್ತು ಕೆನರಾ ಬ್ಯಾಂಕ್ ಮುಂದೆ ಸಹಾಯಕ ಮ್ಯಾನೇಜರ ಸೂರ್ಯಪ್ರಕಾಶ ಹಾಗೂ ನವಚೇತನ ಯುವಕ ಸಂಘದ ಅಧ್ಯಕ್ಷ ನಾರಾಯಣ ನಲವಡೆ, ಹಾಲಿನ ಡೇರಿ ಮುಂದೆ ಅಧ್ಯಕ್ಷ ಲಕ್ಷ್ಮಣ ಅಸುಂಡಿ, ಪಿಕೆಪಿಎಸ್‌ನಲ್ಲಿ ಅಧ್ಯಕ್ಷ ಮುದಕಪ್ಪ ತೋಟಗಿ, ಸ್ವಾತಂತ್ರ್ಯ ಯೋಧ ದಿ.ಸಿದ್ದಪ್ಪಗೌಡ ಅವರ ಮನೆಯ ಮುಂದೆ ದೇಮನಗೌಡ ಶೀಲವಂತರ ದ್ವಜಾರೋಹನ ನೆರವೇರಿಸಿದರು.  

ಮುಖ್ಯೋಪಾಧ್ಯಾಯ ಎನ್‌.ಆರ್‌.ಮಾಳಣ್ಣವರ ದ್ವಜಾರೋಹಣ ಉದ್ದೇಶಿಸಿ ಮಾತನಾಡಿದರು. ಶಿಕ್ಷಕ ಬಸವರಾಜ ಪತ್ತಾರ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು.  

ವೇದಿಕೆಯಲ್ಲಿ ಹಿರಿಯರಾದ ಕಲ್ಲಪ್ಪ ಏಣಗಿ, ಗಂಗಯ್ಯಾ ಹಿರೇಮಠ, ಪಂಚಾಯತ ಸದಸ್ಯರಾದ ಉಮೇಶ ಹುಲಮನಿ, ಬಸವರಾಜ ಕಡಕೋಳ, ಶಾಲಾ ಎಸ್ಡಿಎಂಸಿ ಉಪಾಧ್ಯೆಕ್ಷೆ ಗೀತಾ ಚಂದರಗಿ, ಸದಸ್ಯರಾದ ನಿಂಗಪ್ಪ ಅಳಗೋಡಿ, ಸೋಮನಿಂಗ ಅಡಕಿ, ಬಾಬು ಮಾಳಗಿ, ರವಿ ಬಡಿಗೇರ, ಶ್ರೀಕಾಂತ ನಲವಡೆ, ಬಸವ್ವ ಹಲ್ಕಿ, ವೀರನಗೌಡ ಹುಲೆಪ್ಪನವರ, ಪ್ರಾಥಮಿಕ ಶಾಲಾ ಪ್ರಧಾನ ಗುರು ಎಂ.ಎಂ.ಸಂಗೊಳ್ಳಿ, ಶಾಲೆಗಳ ಎಸ್ಡಿಎಂಸಿ ಸದಸ್ಯರುಗಳು, ಗುರುಬಳಗ ಗ್ರಾಮದ ಹಿರಿಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು. 

ಅಪೂರ್ವಾ ಚಚಡಿ, ವೈಶಾಲಿ ಸೂರ್ಯವಂಶಿ ನಿರೂಪಿಸಿದರು. ರಾಧಿಕಾ ಹರಗೋಲ ಸ್ವಾಗತಿಸಿದರು. ತನುಶ್ರೀ ಹಿರೇಮಠ ವಂದಿಸಿದರು.