ಏ.6 ರಂದು ಅಂತರರಾಷ್ಟ್ರೀಯ ಯೋಗ ಗುರು ಭವರಲಾಲ್ ಆರ್ಯ ಆಗಮನ
ಸಿರಗುಪ್ಪ 04: ದಿನಾಂಕ 6 ಏಪ್ರಿಲ್ ರವಿವಾರ ದಂದು ಸಿರುಗುಪ್ಪ ನಗರಕ್ಕೆ ಪತಂಜಲಿ ಯೋಗ ಪೀಠ, ಕರ್ನಾಟಕದ ವರಿಷ್ಠ ರಾಜ್ಯ ಪ್ರಭಾರಿ, ದಕ್ಷಿಣ ಭಾರತದ ಪತಂಜಲಿ ಉಸ್ತುವಾರಿಗಳು, ಅಂತರರಾಷ್ಟ್ರೀಯ ಯೋಗ ಗುರು ಯೋಗಾಚಾರ್ಯ ಭವರಲಾಲ್ ಆರ್ಯ ಅವರು ಆಗಮಿಸುತ್ತಿದ್ದು, ನಗರದ ಅಮೃತೇಶ್ವರ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ 5.30 ಕ್ಕೆ ಯೋಗ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗ ಮಾರ್ಗದರ್ಶನ ಮಾಡಲಿದ್ದಾರೆ.
ಭವರಲಾಲ್ ಆರ್ಯ ಅವರು ಬಹಳ ಸಮಯದ ನಂತರದಲ್ಲಿ ಸಿರುಗುಪ್ಪ ನಗರಕ್ಕೆ ಆಗಮಿಸುತ್ತಿದ್ದು, ಈ ಯೋಗ ಮಹೋತ್ಸವ ಕಾರ್ಯಕ್ರಮದಲ್ಲಿ ವಿಶೇಷವಾಗಿ ರೋಗಾನುಸಾರ ಯೋಗ, ಧ್ಯಾನ, ಪ್ರಾಣಾಯಾಮದ ಅಭ್ಯಾಸವನ್ನು ವೈಜ್ಞಾನಿಕ ರೀತಿಯಲ್ಲಿ ಕಲಿಸಿ ಕೊಡುತ್ತಾರೆ. ಆದ್ದರಿಂದ ಸಿರುಗುಪ್ಪ ಮತ್ತು ಸುತ್ತಮುತ್ತಲಿನ ತಾಲೂಕಿನ ಎಲ್ಲರೂ ಈ ವಿಶೇಷ ಯೋಗ ಶಿಬಿರದಲ್ಲಿ ಭಾಗವಹಿಸಬೇಕೆಂದು ಪತಂಜಲಿ ಯೋಗ ಸಮಿತಿ, ಸಿರುಗುಪ್ಪ - ಬಳ್ಳಾರಿ ವತಿಯಿಂದ ವಿನಂತಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : 9448217884 , 9448584290 , 9980863512, 8971478532 .