ಬೆಂಗಳೂರು 3: ಶಾಸಕರ ಬಲಾಬಲ ಅಧಿವೇಶನ ಪ್ರಾರಂಭವಾದಾಗ ಗೊತ್ತಾಗುತ್ತದೆ, ತಾಕತ್ತು ತೋರಿಸುವುದು ಸದನದ ಹೊರಗೆ ಅಲ್ಲ, ಸದನ ಒಳಗೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿ ಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಹಿಂದೆ ಕುಮಾರ ಸ್ವಾಮಿ, ದೇವೇಗೌಡ ಅವರು ಸಿದ್ದರಾ ಮಯ್ಯ ಅವರನ್ನು ಹೀನಾ ಯವಾಗಿ ನಡೆಸಿಕೊಂಡಿದ್ದರು, ರಾಜಕೀಯದಲ್ಲಿ ಮರೆಯಾಗುವ ಹತಾಶೆಯಿಂದ ಸಿದ್ದರಾಮ ಯ್ಯ ಇಂತಹ ಹೇಳಿಕೆ ನೀಡುತ್ತಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ನಿಮ್ಮ ವಿಳಾಸ ಎಲ್ಲಿದೆ ಎಂದು ಜನ ತೋರಿಸಿದ್ದಾರೆ. ಯಡಿಯೂರಪ್ಪ ಶಕ್ತಿ ಏನು ಎಂಬುದು ರಾಜ್ಯಕ್ಕೆ ಗೊತ್ತಿದೆ, ಯಡಿಯೂರಪ್ಪ ಹೊರಟರೆ ಯಾವ ಬಿರುಗಾಳಿಯೂ ಅವರನ್ನು ತಡೆಯಲು ಸಾಧ್ಯವಿಲ್ಲ, ನಿಮ್ಮ ಶಾಸಕರಿಗೆ ನಿಮ್ಮ ಬಗ್ಗೆ ವಿಶ್ವಾಸವಿಲ್ಲ ಎಂದು ಕಿಡಿಕಾರಿದರು. ರೋಷನ್ ಬೇಗ್, ರಾಮಲಿಂಗಾರೆಡ್ಡಿ ನಿಮ್ಮ ಬಗ್ಗೆ ಏನು ಮಾತಾಡಿದ್ದಾರೆ ಎಂಬುದು ಗೊತ್ತಿದೆ, ಅಧಿವೇಶನದಲ್ಲಿ ಬಲಪ್ರದರ್ಶನ ಮಾಡುತ್ತೇವೆ ಎಂದು ನಾವು ಎಲ್ಲೂ ಹೇಳಿಲ್ಲ, ಆದಷ್ಟು ಬೇಗ ಸರಕಾರ ಪತನವಾಗಲಿ ಎಂಬ ಉದ್ದೇಶದಿಂದ ಸಿದ್ದರಾಮಯ್ಯ ಹೀಗೆ ಮಾತನಾಡುತ್ತಿದ್ದಾರೆ, ಪಾಪ ಸಿದ್ದರಾಮಯ್ಯ ಅವರಿಗೆ ಕೆಲಸ ಇಲ್ಲ, ಬಿಜೆಪಿಯವರು ಸಕರ್ಾರ ಬೀಳಿಸಲಿ ಎಂದು ಸಿದ್ದರಾಮಯ್ಯ ಈ ರೀತಿ ಮಾತನಾಡುತ್ತಿದ್ದಾರೆ ಟಾಂಗ್ ನೀಡಿದ್ದಾರೆ.
ಸಿದ್ದರಾಮಯ್ಯ ಈಗ ನಿರುದ್ಯೋಗಿ, ಮಾಡಲು ಏನೂ ಕೆಲಸವಿಲ್ಲ. ಹಾಗಾಗಿಯೇ ಮನಸ್ಸಿಗೆ ಬಂದಂತೆ ಹೇಳಿಕೆ ಕೊಡುತ್ತಿದ್ದಾರೆ. ವಾಸ್ತವದಲ್ಲಿ ಮೈತ್ರಿ ಸರಕಾರ ಪತನವಾಗಬೇಕು ಎಂದು ಬಯಸುತ್ತಿರುವುದೇ ಸಿದ್ದರಾ ಮಯ್ಯ. ಅವರಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವುದು ಇಷ್ಟವಿಲ್ಲ, ನಾವು ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ. ಮೈತ್ರಿ ಸಕರ್ಾರ ತಾನಾಗಿಯೇ ಪತನವಾಗಲಿ ಎಂದು ಕಾಯುತ್ತಿದ್ದೇವೆ.
ವಿಧಾನಸಭೆಯಲ್ಲಿ ನಮ್ಮ ಬಲಾಬಲ ಏನು ಎಂಬುದನ್ನು ತೋರಿಸುತ್ತೇವೆ. ಯಡಿಯೂರಪ್ಪ ಪೂರ್ಣ ಸಾಮಥ್ರ್ಯದಿಂದ ಹೊರಟರೆ ಅವರನ್ನು ಹಿಡಿದು ನಿಲ್ಲಿಸುವ ತಾಕತ್ತು ಯಾರಿಗೂ ಇಲ್ಲ. ಅದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
"105 ಶಾಸಕರ ಬಲದಿಂದಲೇ ಸರಕಾರ ರಚಿಸುವ ವಿಶ್ವಾಸವಿದ್ದರೆ ರಾಜ್ಯಪಾಲರಿಗೆ ನಿಮ್ಮ ಬಹುಮತವನ್ನು ಸಲ್ಲಿಕೆ ಮಾಡಿ, ನಿಮ್ಮ ನಿಲುವನ್ನು ಅವರು ಒಪ್ಪಿಕೊಂಡರೆ, ನಾವು ಅಧಿಕಾರದಿಂದ ಕೆಳಗಿಳಿಯುತ್ತೇವೆ" ಎಂದು ಸಿದ್ದರಾಮಯ್ಯ ನಿನ್ನೆ ಟ್ವೀಟ್ ಮಾಡಿದ್ದರು ನನ್ನ ಪ್ರಕಾರ 113 ಶಾಸಕರ ಬಲ ಸಕರ್ಾರ ರಚಿಸಲು ಸಾಕು, ನಿಮ್ಮ "ಏಕಿ ಮಿನಿಟ್" ಕ್ಷುಲ್ಲಕ ರಾಜಕಾರಣವನ್ನು ಬಿಟ್ಟು ಪ್ರಜಾಪ್ರಭುತ್ವದ ಗಣಿತಶಾಸ್ತ್ರ ಕಲಿಯಿರಿ ಎಂದು ನಿನ್ನೆ ಸಿದ್ದರಾಮಯ್ಯ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಟ್ವಿಟ್ ಮೂಲಕ ಚುಚ್ಚಿದ್ದರು.