ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಾಣ

House construction under Vatsalya scheme

ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಾಣ

ಹೂವಿನಹಡಗಲಿ 04: ಸಮಾಜದಲ್ಲಿರುವ ಅಶಕ್ತರಿಗೆ ಹಾಗೂ ನಿರ್ಗತಿಕರಿಗೆ ಯೋಜನೆಯವತಿಯಿಂದ ಮಾಶಾಸನ ನೀಡುತ್ತಿದ್ದು, ವಿಶೇಷವಾಗಿ ಕೆಲವು ನಿರ್ಗತಿಕರಿಗೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಸರೋಜಮ್ಮ ಎಂಬುವರಿಗೆ 114000 ರೂಪಾಯಿ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಿ ಕೊಟ್ಟಿದ್ದೇವೆ ಎಂದು ಕಲ್ಯಾಣ ಕರ್ನಾಟಕ ಪ್ರಾದೇಶಿಕ ನಿರ್ದೇಶಕರಾದ ಚಂದ್ರಶೇಖರ್ ಹೇಳಿದರು. 

ಹೂವಿನಹಡಗಲಿ ತಾಲೂಕಿನ ಹೊಳಗುಂದಿ ವಲಯದ ಕಚೇರಿ ವ್ಯಾಪ್ತಿಯ ಹಿರೇಮಲ್ಲನಕೇರಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಜತೆಗೆ ಫಲಾನುಭವಿಗೆ ಮನೆ ವಿತರಿಸಿ ನಂತರ ಮಾತನಾಡಿದರು. ಧರ್ಮಸ್ಥಳ ಸುಕ್ಷೇತ್ರ ವತಿಯಿಂದ ಹಲವಾರು ಯೋಜನೆಗಳು ಬಡವರಿಗೆ, ನಿರ್ಗತಿಕರಿಗೆ, ಅನುಕೂಲಗಳಾಗಿವೆ ಜತೆಗೆ ಬಡವರಿಗೆ ಮನೆ ನಿರ್ಮಾಣ ದಿಂದ ಆಸರೆಯಾಗಿದೆ ಎಂದರು.  

ಸರೋಜಮ್ಮ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮಗೆ ಮನೆ ನಿರ್ಮಿಸಲು ಸಾಕಾರ ಮಾಡಿದಂತಹ ಯೋಜನೆಯ ಎಲ್ಲಾ ಪದಾಧಿಕಾರಿಗಳಿಗೆ ನನ್ನ ಅನಂತ ಕೋಟಿ ನಮನಗಳು, ನಿಜಕ್ಕೂ ಈ ಸಮಾಜದಲ್ಲಿ ಧರ್ಮಸ್ಥಳ ಸಂಘದ ಯೋಜನೆಗಳು ಬಡವರು, ನಿರ್ಗತಿಕರು, ಸಾಮಾನ್ಯ ವರ್ಗದವರು ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ ಎಂದರು.  

ಗ್ರಾಮಾಭಿವೃದ್ಧಿಸದಸ್ಯರಿಂದ ಸರೋಜಮ್ಮ ಇವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಈ ವೇಳೆ ವಿಜಯನಗರ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಜ್ಞಾನ ವಿಕಾಸ ಯೋಜನೆಯ ಅಧಿಕಾರಿ ಸುಧಾ ಗಾಟ್ಕರ್, ಕ್ಷೇತ್ರ ಯೋಜನೆ ಅಧಿಕಾರಿ ಸುಬ್ರಹ್ಮಣ್ಯ, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಕೋಡಿಹಳ್ಳಿ ಕೊಟ್ರೇಶ್ ಹಾಗೂ ಒಕ್ಕೂಟದ ಪದಾಧಿಕಾರಿಗಳು ಇದ್ದರು.