ಹೊಸಪೇಟೆ: ಬನಶಂಕರಿ ಸೇವಾ ಸಮಿತಿವತಿಯಿಂದ ಅನ್ನಸಂತರ್ಪಣೆ

ಲೋಕದರ್ಶನ ವರದಿ

ಹೊಸಪೇಟೆ 19: ನಗರದ ದೇವಾಂಗಪೇಟೆ ಬನಶಂಕರಿ ಸೇವಾ ಸಮಿತಿ ವತಿಯಿಂದ ತಿಂಗಳು ತಿರುಳು-2 ಕಾರ್ಯಕ್ರಮದ ಅಂಗವಾಗಿ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಪ್ರತಿ ಹುಣ್ಣಿಮೆಯಂದು ದೇವಾಲಯದ ಶ್ರೀ ಬನಶಂಕರಿ ದೇವಿ ಮೂರ್ತಿಗೆ  ಅಭಿಷೇಕ, ಅಲಂಕಾರ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಜರುಗಿದ ಅನ್ನಸಂಪತರ್ಪಣೆ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪ್ರಸಾದ ಸ್ವೀಕಾರ ಮಾಡಿದರು. ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಸಮಿತಿ ಕೋಶಾಧಿಕಾರಿ ಗೌಳಿ ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿ, ಸಮಾಜದ ಗುರು-ಹಿರಿಯರ ಮಾರ್ಗದರ್ಶನದಲ್ಲಿ ಭಕ್ತರಿಂದ ದೇಣಿಗೆ ಪಡೆದು, ಪ್ರತಿ ಹುಣ್ಣಿಮೆಯಂದು ಅನ್ನಸಂತರ್ಪಣೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾರ್ಯಕ್ರಮದ ಯಶ್ವಸಿಗಾಗಿ ಸಾರ್ವಜನಿಕರು ತನು, ಮನ, ಧನ ಅರ್ಪಿಸಬೇಕೆಂದು ಮನವಿ ಮಾಡಿದರು. ವೈದ್ಯಾಧಿಕಾರಿ ಡಾ.ನಾಗೇಂದ್ರ, ಕೊಳಗದ ಗಣಪತಿ, ಗೌಳಿ ಶಂಕರ್, ಕೆ.ಶಿವರಾಮ್, ಕೆ.ಎಂ. ಪ್ರಕಾಶ್, ಗುಜ್ಜಲ ಲಕ್ಷ್ಮಪ್ಪ, ಕಾಳ್ಗಿ ಸುದರ್ಶನ್, ಗೋಸಿ, ಶ್ರೀನಿವಾಸ, ಗುಜ್ಜಲ ಕೃಷ್ಣ, ವೆಂಕೋಬಣ್ಣ, ಸಾಯಿನಂದನ್, ಜಿ.ಬಸವರಾಜ್, ಗೌಳಿ ಪೀರಣ್ಣ, ಜಂಬಣ್ಣ, ಕೆ.ಅನಂತ್, ಕೆ.ಗಂಗಾಧರ, ಗೌಳಿ ಪಂಪಾಪತಿ, ಗೌಳಿ ರಜೀತ್ ಕುಮಾರ್, ಗೌಳಿ ಮನೋಜ್ ಕುಮಾರ್, ಟಿ.ವಿನಾಯಕ, ಪ್ರಿಯಾಂಕ, ರೋಜಾ ಹಾಗೂ ಅಶ್ವತಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.