ಡಿ.17ಕ್ಕೆ ಹೊನ್ನಮ್ಮದೇವಿ ಕಾರ್ತಿಕ ಮಹೋತ್ಸವ
ರಾಣೆಬೆನ್ನೂರ 16: ಸುಕ್ಷೇತ್ರ ತಾಲೂಕಿನ ಗುಡಿಹೊನ್ನತ್ತಿಯ ಹೊನ್ನಮ್ಮದೇವಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ವತಿಯಿಂದ ಡಿ.17ರಂದು ಸಂಜೆ 6.30 ಘಂಟೆಗೆ ಹೊನ್ನಮ್ಮದೇವಿ ಕಾರ್ತಿಕ ಮಹೋತ್ಸವವು ಜರುಗಲಿದೆ.
ಅಂದು ಮುಂಜಾನೆಯಿಂದ ಸಂಜೆಯವರೆಗೂ ದೇವಿಗೆ ಪುಷ್ಪಾಲಂಕಾರ, ಅಭಿಷೇಕ, ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ ಎಂದು ದೇವಸ್ಥಾನ ಸಮಿತಿಯು ತಿಳಿಸಿದೆ.