ಶಿವಾನಂದ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಕೃತಕ ಬುದ್ಧಿಮತ್ತೆ (ಎಐ) ಎಐ ವಿಚಾರ ಸಂಕಿರಣ..!

ಶಿವಾನಂದ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಕೃತಕ ಬುದ್ಧಿಮತ್ತೆ (ಎಐ) ಎಐ ವಿಚಾರ ಸಂಕಿರಣ..! Student Artificial Intelligence (AI) Seminar at Sivananda College..!

ಲೋಕದರ್ಶನ ವರದಿ 

ಕಾಗವಾಡ 12 : ಕೃತಕ ಬುದ್ಧಿಮತ್ತೆ (ಎಐ) ಎನ್ನುವುದು ಕಲಿಕೆ, ತಾಂತ್ರಿಕತೆ, ಸಮಸ್ಯೆ ಪರಿಹರಣೆ, ಗ್ರಹಿಕೆ ಮತ್ತು ನಿರ್ಧಾರ ಮಾಡುವಿಕೆಯಂತಹ ಮಾನವ ಬುದ್ಧಿಮತ್ತೆಯೊಂದಿಗೆ ಸಾಮಾನ್ಯವಾಗಿ ಸಂಬಂಧಿಸಿದ ಕೆಲಸಗಳನ್ನು ಮಾಡುವ ಸಿಸ್ಟಮ ಆಗಿದೆ ಎಂದು ಪ್ರಾಚಾರ್ಯ ಡಾ.ಎಸ್‌.ಪಿ. ತಳವಾರ ತಿಳಿಸಿದ್ದಾರೆ. ಅವರು ಬುಧವಾರ ದಿ. 11 ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ-ಗಣಕಯಂತ್ರ ವಿಭಾಗ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘ ಇವುಗಳ ಸಹಯೋಗದಲ್ಲಿ ಆಯೋಜಿಸಿದ್ದ ಒಂದು ದಿನದ ರಾಜ್ಯ ಮಟ್ಟದ ವಿದ್ಯಾರ್ಥಿ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಿದ್ದರು. 

ಇವತ್ತು ಜಗತ್ತು ವಿಜ್ಞಾನದ ಭರಾಟೆಯಲ್ಲಿ ಸಾಗುತ್ತಿದೆ. ಹೀಗಾಗಿ ವಿಜ್ಞಾನದ ಜೊತೆಗೆ ನಾವುಗಳು ಸಾಗಬೇಕು. ಇತ್ತೀಚಿಗೆ ರಾಷ್ಟ್ರದ ರಾಜಧಾನಿಯಲ್ಲಿ ಆಯೋಜಿಸಿದ್ದ ಎಐ ಸಮ್ಮಿತ್‌-2026 ಕುರಿತು ನಾವುಗಳು ತಿಳಿದುಕೊಳ್ಳಲು ಇವತ್ತಿನ ಈ ಸ್ಪರ್ಧೆಯು ಸಹಕಾರಿಯಾಲಿದೆ. ಭಾರತ ದೇಶವನ್ನು ಕೇವಲ ಎಐ ಬಳಕೆದಾರರ ದೇಶವನ್ನಾಗಿಸಿದೇ ಜಾಗತಿಕ ಎಐ ನಾಯಕನಾಗಿ ಹೊರಹೊಮ್ಮುವ ಗುರಿಯನ್ನು ಈ ಎಐ ಸಮ್ಮಿತ್ ಹೊಂದಿದೆ ಎಂದರು. 

ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರೊ. ಜೆ.ಕೆ. ಪಾಟೀಲ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಬೇರೆ ಬೇರೆ ಮಹಾವಿದ್ಯಾಲಯದಿಂದ ಒಟ್ಟು 25 ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಅದರಲ್ಲಿ ಚಿಕ್ಕೋಡಿ ಬಿ.ಕೆ. ಮಹಾವಿದ್ಯಾಲಯದ ರಕ್ಷನಜಹಾನ ವಡ್ರಾಳೆ ಪ್ರಥಮ ಸ್ಥಾನ, ಶಿವಾನಂದ ಮಹಾವಿದ್ಯಾಲಯದ ಮಹೇಕ ಅಪರಾಜ ದ್ವೀತಿಯ ಸ್ಥಾನ ಮತ್ತು ಅಥಣಿಯ ಎಸ್‌ಎಂಎಸ್ ಮಹಾವಿದ್ಯಾಲಯದ ಭವಾನಿ ಪಾಟೀಲ, ತೃತೀಯ ಸ್ಥಾನ ಪಡೆದುಕೊಂಡರು.  

ಈ ವೇಳೆ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರೊ. ಬಿ.ಎ. ಪಾಟೀಲ, ಐಕ್ಯೂಎಸಿ ಸಂಯೋಜಕ ಪ್ರೊ. ಬಿ.ಡಿ. ಧಾಮಣ್ಣವರ, ಪ್ರೊ. ಎಸ್‌.ಎ. ಇನಾಮದಾರ ಸೇರಿದಂತೆ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಅನನ್ಯಾ ಕುಲಕರ್ಣಿ ಪ್ರಾರ್ಥನಾ ಗೀತೆ ಹಾಡಿದರು. ಪ್ರೊ. ವಿ.ಬಿ. ಬುರ್ಲೆ ಸ್ವಾಗತಿಸಿದರು. ಪ್ರೊ. ಎಸ್‌.ಎಸ್‌. ಫಡತರೆ ನಿರೂಪಿಸಿದರು. ಪ್ರೊ. ಎಸ್‌.ಡಿ. ಅಲಗೌಡರ ವಂದಿಸಿದರು.