ಕಿಡ್ನಿ ದಾನ ಮಾಡುವುದರಿಂದ ರೋಗಿಗಳಿಗೆ ಪುನರ್ಜನ್ಮ : ಕುಲಪತಿ ಡಾ.. ಇನಾಮದಾರ

ಕಿಡ್ನಿ ದಾನ ಮಾಡುವುದರಿಂದ ರೋಗಿಗಳಿಗೆ ಪುನರ್ಜನ್ಮ : ಕುಲಪತಿ ಡಾ.. ಇನಾಮದಾರ Kidney donation brings rebirth to patients: Vice Chancellor Dr. Inamdara

ವಿಜಯಪುರ 12 :  ಕಿಡ್ನಿ ದಾನ ಮಾಡುವುದರಿಂದ ರೋಗಿಗಳಿಗೆ ಪುನರ್ಜನ್ಮ ನೀಡಬಹುದು ಎಂದು  ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯದ ಕುಲಪತಿ ಡಾ. ಅರುಣ ಚಂ. ಇನಾಮದಾರ ಹೇಳಿದ್ದಾರೆ. ಇಂದು ಗುರುವಾರ ನಗರದ ಬಿ.ಎಲ್‌.ಡಿ.ಇ ಆಸ್ಪತ್ರೆಯಲ್ಲಿ ನಡೆದ ವಿಶ್ವ ಕಿಡ್ನಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳಿಗೆ ಕಿಡ್ನಿ ದಾನ ಮಾಡಿರುವ ತಾಯಂದಿರು ಅವರಿಗೆ ಎರಡನೇ ಬಾರಿಗೆ ಜನ್ಮ ನೀಡಿದ್ದಾರೆ.

ಕಿಡ್ನಿ ದಾನ ಮಾಡುವವರಲ್ಲಿ ಮಹಿಳೆಯರೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ಹೇಳಿದ ಅವರು ತಾಯಂದಿರ ಈ ತ್ಯಾಗ ಮತ್ತು ಸಮರೆ​‍್ಣ ಮನೋಬಾವ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು. ಅಲ್ಲದೇ, ಮೂತ್ರಪಿಂಡ ಕಾಯಿಲೆ ತಡೆಗಟ್ಟಲು ಅನುಸರಿಸೇಬೇಕಾದ ಜೀವನಶೈಲಿ ಮತ್ತು ಕೈಗೊಳ್ಳಬೇಕಿರುವ ಮುನ್ನೇಚರಿಕೆ ಕ್ರಮಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು.  

ಯೂರಾಲಜಿ ವಿಭಾಗದ ಮುಖ್ಯಸ್ಥ ಡಾ. ಎಸ್‌. ಬಿ. ಪಾಟೀಲ ಪ್ರಾಸ್ತವಿಕವಾಗಿ ಮಾತನಾಡಿ,  ಬಿ.ಎಲ್‌.ಡಿ.ಇ ಡೀಮ್ಡ್‌ ವಿವಿಯ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈವರೆಗೆ ನಡೆಸಲಾಗಿರುವ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗಳ ಕುರಿತು ವಿವರಿಸಿದರು. ಅಲ್ಲದೇ,  ಡಯಾಲಯಿಸಿಸ್ ಪ್ರಯೋಜನಗಳು ಮತ್ತು ಅದರ ಅನಾನುಕೂಲಗಳ ಬಗ್ಗೆ ತಿಳಿಸಿದರು. ಜೀವಂತ ಅಂಗದಾನ ಮತ್ತು ಮೃತರ ಅಂಗಾಂಗ ದಾನ ಕುರಿತು ಅವರು ಜಾಗೃತಿ ಮೂಡಿಸಿದರು. ಇದೆ ವೇಳೆ ಅಂಗಾಂಲಂಗ ದಾನ ಮಾಡಿದ ದಾನಿಗಳು ಮತ್ತು ಕಿಡ್ನಿ ಕಸಿ ಮಾಡಿಸಿಕೊಂಡ  ರೋಗಿಗಳನ್ನು ಸನ್ಮಾನಿಸಲಾಯಿತು. ಅಲ್ಲದೇ,  ಯೂರಾಲಜಿ ಮತ್ತು ನೆಫ್ರಾಲಜಿ ವಿಭಾಗಗಳ ವತಿಯಿಂದ ಕಿಡ್ನಿ ದಾನಿಗಳಿಗೆ ಹಾಗೂ ಕಿಡ್ನಿ ಕಸಿ ಮಾಡಿಸಿಕೊಂಡವರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.  

ಈ ಸಂದರ್ಭದಲ್ಲಿ ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ, ಸಹಾಯಕ ಆರೋಗ್ಯ ವಿಜ್ಞಾನಗಳ ಡೀನ್ ಡಾ. ಎಸ್‌. ವಿ. ಪಾಟೀಲ, ಹಿರಿಯ ಉಪಪ್ರಾಚಾರ್ಯ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ವೈದ್ಯಕೀಯ ಅಧೀಕ್ಷಕ ಡಾ. ಎಸ್‌. ವಿ. ಬೆಂಟೂರ ಮುಂತಾದವರು ಉಪಸ್ಥಿತರಿದ್ದರು. ಸಂಜೆ ಬಿ.ಎಲ್‌.ಡಿ.ಇ. ವಿಶ್ವವಿದ್ಯಾಲಯದಿಂದ ಪ್ರಾರಂಭವಾದ ಅಂಗಾಂಗ ದಾನ ಜಾಗೃತಿ ಜಾಥಾವನ್ನು ಜಿಲ್ಲಾಧಿಕಾರಿ ಡಾ. ಆನಂದ ಕೆ. ಉದ್ಘಾಟಿಸಿದರು. ಈ ಜಾಥಾ ಆಶ್ರಮ ರಸ್ತೆ, ಶ್ರೀ ಸಿದ್ದೇಶ್ವರ ದೇವಸ್ಥಾನ ಮೂಲಕ ಗಾಂಧಿ ಚೌಕ್ ವರೆಗೆ ನಡೆಯಿತು.  

ಈ ಸಂದರ್ಭದಲ್ಲಿ ಕಿಡ್ನಿ ರೋಗಗಳ ಬಗ್ಗೆ ಅರಿವು, ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಧಾನಗಳು, ನಿಯಮಿತ ಆರೋಗ್ಯ ತಪಾಸಣೆಗಳ ಮಹತ್ವ ಹಾಗೂ ಆರೋಗ್ಯಕರ ಜೀವನ ಶೈಲಿಯನ್ನು ಪಾಲಿಸುವ ಅಗತ್ಯತೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಈ ಜಾಥಾದಲ್ಲಿ ವೈದ್ಯರು, ವೈದ್ಯಕೀಯ ವಿಧ್ಶಾರ್ಥಿಗಳು, ಪಿಜಿಯೋಥೆರಪಿಸ್ಟ, ನರ್ಸಿಂಗ್ ಶಾಲಾ ವಿದ್ಯಾರ್ಥಿಗಳು ಮತ್ತು ಬೋದಕರ ಹೊರತಾದ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಗಾಂಧಿ ಚೌಕಿನಲ್ಲಿ ಅಂಗಾಂಗ ದಾನದ ಕುರಿತು ವೈಧ್ಶಕೀಯ ವಿದ್ಯಾರ್ಥಿಗಳಿಂದ ಕಿರುನಾಟಕ ಪ್ರದರ್ಶನ ನೀಡಿದರು.ಈ ಸಂದರ್ಭದಲ್ಲಿ ಬಿ.ಎಲ್‌.ಡಿ.ಇ. ಡೀಮ್ಡ್‌ ವಿವಿ ಸಮಕುಲಾಧಿಪತಿ, ಡಾ. ವೈ. ಎಂ. ಜಯರಾಜ, ಕುಲಸಚಿವ ಡಾ. ಆರ್‌. ವಿ. ಕುಲಕರ್ಣಿ, ಡಾ. ತೇಜಸ್ವಿನಿ ವಲ್ಲಭ, ಡಾ. ವಿನಯ ಕುಂದರಗಿ, ಡಾ. ಸಂತೋಷ ಪಾಟೀಲ? ನೆಪ್ರೊಲಾಜಿಷ್ಟ ಡಾ. ಸಂದೀಪ ಪಾಟೀಲ, ಡಾ. ಬಸವರಾಜ ಸಜ್ಜನ? ಕಿಡ್ನಿ ಕಸಿ ಆಪ್ತ ಸಮಾಲೋಚಕ ಶಾಂತೇಶ ಸಲಗರೆ ಮುಂತಾದವರು ಉಪಸ್ಥಿತರಿದ್ದರು.