ಹಡಗಲಿ ಗಡಿಗಳು ಹಾಗೂ ಮಲ್ಲಿಗೆನಾಡು ಪುಸ್ತಕಗಳ ಲೋಕಾರೆ್ಣ ಕಾರ್ಯಕ್ರಮ
ಹೂವಿನ ಹಡಗಲಿ 29: ಪುಸ್ತಕಗಳು ಜ್ಞಾನ ಹೆಚ್ಚಿಸುತ್ತವೆ ಬದುಕಿಗೆ ಶ್ರೀಗಂಧ ಇದ್ದ ಹಾಗೆ.ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಅವರು ಅಖಂಡ ಬಳ್ಳಾರಿ ವಿಜಯನಗರ ಜಿಲ್ಲೆಯಲ್ಲಿ ಹೂವಿನ ಹಡಗಲಿ ತನ್ನದೇ ಆದ ವಿಶಿಷ್ಟತೆ ಇತಿಹಾಸ ಹೊಂದಿದೆ ಎಂದು ಮುಂಡರಗಿ ಸಾಹಿತಿ ಆರ್ ಎಲ್ ಪೋಲೀಸ್ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಜಿ ಬಿ ಆರ್ ಕಾಲೇಜಿನ ಹಾನಗಲ್ ಕುಮಾರಸ್ವಾಮಿ ಸಭಾಭವನದಲ್ಲಿ ಭಾನುವಾರ ಜಿ ಬಿ ಆರ್ ಮಹಾವಿದ್ಯಾಲಯ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಸರ್ಕಾರಿ ನೌಕರರ ಸಂಘ, ನಾಡು ನುಡಿ ಸಂಸ್ಕೃತಿ ಚಿಂತನ ಬಳಗ, ಸಹನಾದ್ರಿ ಪ್ರಕಾಶನ ಹೊನ್ನಾಳಿ ಸಹಯೋಗದಲ್ಲಿ ಆಯೋಜಿಸಿದ್ದ ಹಡಗಲಿ ಗಡಿಗಳು ಹಾಗೂ ಮಲ್ಲಿಗೆನಾಡು ಕೃತಿಗಳ ಲೋಕಾರೆ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಡಾ ನಾ ಕೊಟ್ರೇಶ್ ಉತ್ತಂಗಿ ರವರ "ಹಡಗಲಿ ಗಡಿಗಳು"ಚರಿತ್ರೆ ದಾಖಲಿಸುವ ಮಹತ್ವದ ಕೃತಿ ಎಂದು ಬಣ್ಣಿಸಿದರು. ಡಾ ನಾ ಕೊಟ್ರೇಶ್ ಉತ್ತಂಗಿ ಇವರ "ಹಡಗಲಿ ಗಡಿಗಳು" ಹಾಗೂ ನಾಗಪ್ಪ ತಳಕಲ್ಲು ರವರ "ಮಲ್ಲಿಗೆನಾಡು" ಕೃತಿಗಳನ್ನು ಶಾಸನ ತಜ್ಞ ಡಾ ಬಿ ರಾಜಶೇಖರ್ಪ ಲೋಕಾರೆ್ಣ ಮಾಡಿ ಮಾತನಾಡಿದರು. ಹಡಗಲಿ ಗಡಿಗಳು ಕುರಿತು ಪ್ರೊ ಎಚ್ ಜಿ ಕೃಷ್ಣಪ್ಪ ಮಾತನಾಡಿ ಹಡಗಲಿಯ ಪ್ರಾಚೀನ ಇತಿಹಾಸ, ಶಾಸನಗಳು, ಧಾರ್ಮಿಕ ಸ್ಥಳಗಳು, ಕೃಷಿ ನೀರಾವರಿ,ಹೀಗೆ ವೈವಿಧ್ಯಮಯ ವಿಷಯಗಳ ಬೃಹತ್ ಗ್ರಂಥವನ್ನು ಪ್ರತಿಯೊಬ್ಬರೂ ಓದಬೇಕು ಎಂದರು.
ಮಲ್ಲಿಗೆನಾಡು ಪುಸ್ತಕ ಬಗ್ಗೆಲೇಖಕ ಆರ್ ಬಿ ಗುರುಬಸವರಾಜ ಉಪಯುಕ್ತ ಮಾಹಿತಿ ಒದಗಿಸಿದರು.ಹಿರೆಮಲ್ಲನಕೆರೆ ಅಭಿನವ ಚನ್ನಬಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಜಿ ಬಿ ಆರ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ ಚಂದ್ರಬಾಬು ನಾಯ್ಡು ಅಧ್ಯಕ್ಷತೆ ವಹಿಸಿದ್ದರು.ಲೇಖಕರಾದ ಡಾ ನಾ ಕೊಟ್ರೇಶ್, ನಾಗಪ್ಪ ತಳಕಲ್ಲು ಕ ಸಾ ಪ ಅಧ್ಯಕ್ಷ ಟಿ ಪಿ ವೀರೇಂದ್ರ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾ ಎಂ ಎಂ ಶಿವಪ್ರಕಾಶ್ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಅಯ್ಯನಗೌಡರ ಕೊಟ್ರಗೌಡ ಮಾತನಾಡಿದರು.ತೋಟಪ್ಪ ಉತ್ತಂಗಿ, ಯುವರಾಜ ಗೌಡ, ಕೃಷ್ಣ ಕುವೆಂಪು ರವರ ನೇಗಿಲಯೋಗಿ, ಕನ್ನಡ ಗೀತೆಗಳನ್ನು ಹಾಡಿದರು.ಕವಿ ಶಂಕರ್ ಬೆಟಗೇರಿ ಶಿಕ್ಷಕ ಎಚ್ ಜಿ ಪಾಟೀಲ್, ಶೈಲಜಾ ತಳಕಲ್ಲು ನಿರ್ವಹಿಸಿದರು.