ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಗದಗ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ
ಗದಗ 29: ತಾಲೂಕಿನ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಚಂದ್ರಶೇಖರ್ ಜೆ. ಅವರು ಉದ್ಘಾಟನೆ ಮಾಡಿ ಜ್ಞಾನವಿಕಾಸ ಕೇಂದ್ರದ ಸರ್ವ ಸದಸ್ಯರಿಗೂ ಜ್ಞಾನವಿಕಾಸ ಕಾರ್ಯಕ್ರಮಗಳ ಬಗ್ಗೆ ಮತ್ತು ಯೋಜನೆ ಬಗ್ಗೆ ಮತ್ತು ಗ್ರಾಮ ಅಭಿವೃದ್ಧಿ ಯೋಜನೆಯಲ್ಲಿ ಸದಸ್ಯರಿಗೆ ಸಿಗುವ ಪ್ರತಿಯೊಂದು ಸೌಲಭ್ಯಗಳು ಕುರಿತು ಎಲ್ಲಾ ಸದಸ್ಯರಿಗೂ ಮಾಹಿತಿ ಮಾರ್ಗದರ್ಶನ ನೀಡಿದರು.
ಜಿಲ್ಲಾ ನಿರ್ದೇಶಕರಾದ ಯೋಗೇಶ ಅವರು ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕ್ರಮಗಳು, ಕೇಂದ್ರದ ಕಾರ್ಯಕ್ರಮಗಳು ಹಾಗೂ ತಂಡಗಳ ಗುಣಮಟ್ಟದ ಬಗ್ಗೆ ಮತ್ತು ಶಿಸ್ತಿನ ಕಾರ್ಯಕ್ರಮಗಳ ಮಾಡಿಕೊಂಡು ಹೋಗುವುದರ ಬಗ್ಗೆ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಯಾದ ಕವಿತಾ ದಂಡಿನ ಅವರು ಮಕ್ಕಳ ಶಿಕ್ಷಣದ ತಂತ್ರಜ್ಞಾನ ಬಳಕೆಯಲ್ಲಿ ಪೋಷಕರ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ವಿಜಯಲಕ್ಷಿ-್ಮ ಹೂಗಾರ ಅವರು ನೀರಿನ ಸದ್ಬಳಕೆಯಲ್ಲಿ ನಮ್ಮೆಲ್ಲರ ಪಾತ್ರದ ಬಗ್ಗೆ ಎಲ್ಲಾ ಸದಸ್ಯರಿಗೂ ಅರಿವು ಮೂಡಿಸಿದರು. ಜೊತೆಗೆ ಸಂಬಂಧಿಸಿದ ವಿಡಿಯೋಗಳನ್ನು ಹಾಕಿ ಸದಸ್ಯರಿಗೆ ನೀರು ಉಳಿಸುವ ಕುರಿತು ಜಾಗೃತಿ ಮೂಡಿಸಿದರು.
ಈ ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ನಾಯಕ, ಜ್ಞಾನವಿಕಾಸ ಕೇಂದ್ರದ ಸದಸ್ಯರು ಹಾಗೂ ಒಕ್ಕೂಟದ ಅಧ್ಯಕ್ಷೆ ಲತಾ ಪತ್ತಾರ, ಜ್ಞಾನವಿಕಾಸ ಸಮನ್ವಯಧಿಕಾರಿ ಗಂಗಮ್ಮ, ಮೇಲ್ವಿಚಾರಕರು. ಜ್ಞಾನವಿಕಾಸ ಸಂಯೋಜಕೀಯರು ಹಾಗೂ ಕೇಂದ್ರದ ಸರ್ವ ಸದಸ್ಯರು ಉಪಸ್ಥಿತರಿದ್ದರು.