ಗದಗ : ಗದಗ ಮಾರುಕಟ್ಟೆಯಲ್ಲಿ ಮತದಾನ ಜಾಗೃತಿ

ಗದಗ  18: 2019 ಲೋಕಸಭಾ ಸಾರ್ವತ್ರಿಕ  ಚುನಾವಣೆಯ ಹಿನ್ನಲೆಯಲ್ಲಿ  ಅರ್ಹ ಎಲ್ಲಾ ಮತದಾರರು ತಪ್ಪದೇ ಮತದಾನ ಮಾಡುವಂತೆ ಜಾಗೃತಿ ಮೂಡಿಸಲು  ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಇದರ ಪ್ರಯುಕ್ತ ಗದಗ ತರಕಾರಿ ಮಾರುಕಟ್ಟೆಗೆ ಜಿ.ಪಂ ಮುಖ್ಯಕಾರ್ಯನಿವರ್ಾಹಣಾಧಿಕಾರಿ ಮಂಜುನಾಥ ಚವ್ಹಾಣ ಭೇಟಿ ನೀಡಿ ತರಕಾರಿ ವ್ಯಾಪಾರಸ್ಥರಿಗೆ ಮತದಾನ ಜಾಗೃತಿಯನ್ನು ಮೂಡಿಸಿದರು. ಮಾರುಕಟ್ಟೆಯ ವ್ಯಾಪಾರಸ್ಥರಿಗೆ ಮತದಾನ ನಮ್ಮ ಹಕ್ಕು, ಕಡ್ಡಾಯವಾಗಿ ಮತ ಚಲಾಯಿಸೋಣ ಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಗೆಲ್ಲಿಸೋಣ ಎಂಬ ದ್ಯೇಯಗಳೊಂದಿಗೆ ಇವಿಎಂ, ಮತ್ತು ವಿವಿಪ್ಯಾಟ್ ಉಪಯೋಗಿಸಿ ಮತ ಚಲಾಯಿಸುವ ವಿಧಾನದ ಕುರಿತು ವ್ಯಾಪಾರಸ್ಥರಿಗೆ ಅರಿವನ್ನು ಮೂಡಿಸಲಾಯಿತು. ಜಿಲ್ಲಾ ಸ್ವೀಪ್ ಸಮಿತಿಯ ಸದಸ್ಯ ಕಾರ್ಯದಶರ್ಿ ಟಿ.ದಿನೇಶ, ಗದಗ ತಾಲೂಕು ಪಂಚಾಯತ ಕಾರ್ಯನಿವರ್ಾಹಣಾಧಿಕಾರಿ ಡಾ. ಜಿನಗಿ  ಇತತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.