ಗದಗ 11: ಗ್ರಾಮ ಮಾನವನ ನಾಗರಿಕತೆಯ ತಾಯಿ. ಅದರ ಅಭಿವೃದ್ಧಿ ದೇಶದ ಅಭಿವೃದ್ಧಿ ಎಂದು ಮಹಾತ್ಮಾ ಗಾಂಧೀಜಿ ಗಟ್ಟಿಯಾಗಿ ಹೇಳಿದ್ದರು. ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ 13 ವರ್ಷಗಳ ಹಿಂದೆ ಮುಖ್ಯಮಂತ್ರಿಗಳಾಗಿದ್ದಾಗ ಪ್ರಾರಂಭಿಸಿದ ಗ್ರಾಮ ವಾಸ್ತವ್ಯ ಹಾಗೂ ಅದರ ಉದ್ದೇಶಕ್ಕೆ ಮತ್ತೆ ಈಗ ಜೀವ ಬಂದಿದೆ.
ರಾಜ್ಯಾದ್ಯಂತ ಅಂದು ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ಗ್ರಾಮದ ಅಭಿವೃದ್ಧಿ ಹಾಗೂ ಜನಸಾಮಾನ್ಯರ ಬಳಿಗೆ ಹೋಗಿ ಅವರ ಕಷ್ಟ ಕಾರ್ಪಣ್ಯ ಕೇಳುವುದಕ್ಕೆ ಒಂದು ಹೊಸ ಆಯಾಮವನ್ನೇ ಕಲ್ಪಿಸಿತ್ತು. ಆ ಕಾರ್ಯದಿಂದ ತೃಪ್ತರಾಗದ ಮುಖ್ಯಮಂತ್ರಿಗಳಿಂದ ತಾವು ವಾಸ್ತವ್ಯ ಹೂಡಿದ್ದ ಗ್ರಾಮಗಳ ವಸ್ತುಸ್ಥಿತಿ ಹಾಗೂ ಇಂದಿನ ಅವಶ್ಯಕತೆಗಳ ಕುರಿತು ತಮ್ಮ ರಾಜಕೀಯ ಕಾರ್ಯದಶರ್ಿಗಳನ್ನು ನಿಯೋಜಿಸಿ ಗ್ರಾಮದ ಬೇಡಿಕೆ, ಅಭಿವೃದ್ಧಿಗೆ ಗಮನ ಕೊಡಲು ಆರಂಭಿಸಿರುವುದು ಜನರಲ್ಲಿ ಹೊಸ ಆಶಾ ಭಾವನೆ ಮೂಡಿಸಿದೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗನಹಳ್ಳಿಗೆ 2007 ರ ಫೆ. 28 ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಸ್ತವ್ಯ ಮಾಡಿದ್ದರು. ಅಂದು ಜನರ ಕಷ್ಟಗಳನ್ನು ಆಲಿಸಿ ಜನಸಾಮಾನ್ಯರ ವೈಯಕ್ತಿಕ ಸಮಸ್ಯೆಗಳಿಗೆ ಗ್ರಾಮದ ಸಮುದಾಯದ ಅಭಿವೃದ್ಧಿ ಬೇಡಿಕೆಗಳಿಗೆ ಸ್ಪಂದಿಸಿದ್ದರು. ಅಂದಿನ ನೀರಿನ ಬೇಡಿಕೆ ಈಡೇರಿಕೆಗೆ ತಕ್ಷಣ ನಾಲ್ಕು ಕೊಳವೆ ಭಾವಿ, ರೈತರ ಹೊಲಗಳಿಗೆ ವಿದ್ಯುತ್ ಪೂರೈಕೆಗಾಗಿ ಕಂಬ ಹಾಕಿಸುವಿಕೆ, ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ, ವಿಧವಾ, ವೃದ್ಧಾಪ್ಯ, ಅಂಗವಿಕಲ ಮಾಸಾಶನ ವಿತರಣೆ, ಸಿಸಿ ರಸ್ತೆ, ಅರ್ಹರಿಗೆ ವಸತಿ ಸೌಲಭ್ಯಗಳಿಗೆ ಮಂಜೂರಾತಿ ನೀಡಿದ್ದರು. ಅರ್ಹರಿಗೆ ವಸತಿ ಸೌಲಭ್ಯಗಳಿಗೆ ಮಂಜೂರಾತಿ ನೀಡಿದ್ದರು. ವೃದ್ದಾಪ್ಯ ವೇತನ ಹೆಚ್ಚಿಸಬೇಕೆಂಬ ವಿಚಾರ ಹುಟ್ಟಿದ್ದೇ ಸುಗನಹಳ್ಳಿ ಗ್ರಾಮ ವಾಸ್ತವ್ಯದಲ್ಲಿ. ಅದು ರಾಜ್ಯಾದ್ಯಂತ ಹೆಚ್ಚಳಕ್ಕೆ ಕಾರಣವಾಯಿತು ಎಂಬುದು ವಿಶೇಷ. ಇದಿಷ್ಟು ಅಂದಿನ ಸಂಗತಿಯಾಗಿತ್ತು.
ರಾಜ್ಯದ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ತಮಗೆ ಜನರ ಸಾಮೀಪ್ಯ ದೊರಕಿಸಿಕೊಟ್ಟ ಗ್ರಾಮ ವಾಸ್ತವ್ಯ ಮರೆಯದೇ ಕೆಲವು ಬದಲಾವಣೆಗಳೊಂದಿಗೆ ಹೊಸದಾಗಿ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿರುವ ಜೊತೆಗೆ ಹಿಂದೆ ವಾಸ್ತವ್ಯ ಮಾಡಿದ ಗ್ರಾಮಗಳ ಇಂದಿನ ಸ್ಥಿತಿಗತಿ ಹಾಗೂ ವರ್ತಮಾನದ ಅವಶ್ಯಕತೆಗಳಿಗೆ ಗಮನ ನೀಡಲು ಮುಂದಾಗಿದ್ದಾರೆ.
ಅದರ ಫಲಶ್ರುತಿಯಗಿ ಗದುಗಿನ ಸುಗನಹಳ್ಳಿಗೆ ಶಾಶ್ವತ ನೀರು ಪೂರೈಕೆ ಕುರಿತಂತೆ ಆಲದಮ್ಮನ ಕೆರೆ ನೀರು ತುಂಬಿಸಲು ಅಭಿವೃದ್ಧಿಪಡಿಸಲು 10ಕೋಟಿ ರೂ.ಗಳನ್ನು ಬಜೆಟ್ನಲ್ಲಿ ಪ್ರಕಟಿಸಿದ್ದು ಇನ್ನೊಂದು ಮುಕ್ಕುಡದ ಕೆರೆ ಅಭಿವೃದ್ಧಿಗೆ 11 ಕೋಟಿ ರೂ. ಪ್ರಸ್ತಾವನೆ ಅನುಮೋದನೆಗಾಗಿ ಮಂಡನೆಯಾಗಿದೆ ಎಂದು ಮುಖ್ಯಮಂತ್ರಿಗಳ ನಿದರ್ೇಶನದಂತೆ ಆಗಮಿಸಿದ್ದ ಅವರ ರಾಜಕೀಯ ಕಾರ್ಯದಶರ್ಿ ಎನ್.ಎಚ್. ಕೋನರೆಡ್ಡಿಯವರು ಜೂನ್ 9 ರಂದು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿರುವುದು ವಿಶೇಷ. ಅದಲ್ಲದೇ ಇಂದಿನ ಅವಶ್ಯಕತೆಗನುಗುಣವಾಗಿ ಜಿಲ್ಲಾಡಳಿತಕ್ಕೆ 62 ಸಮಸ್ಯೆ ಅಹವಾಲುಗಳು ಸಲ್ಲಿಕೆಯಾಗಿದ್ದು, ಗ್ರಾಮ, ತಾಲೂಕಾ ಹಾಗೂ ಜಿಲ್ಲಾ ಮಟ್ಟದ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಡಳಿತಕ್ಕೆ ತಿಳಿಸಲಾಗಿದ್ದು ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಹಲವು ಸಮಸ್ಯೆಗಳನ್ನು ತಾವು ಮುಖ್ಯಮಂತ್ರಿಗಳ ಅವಗಾಹನೆಗೆ ತಂದು ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಎನ್.ಎಚ್. ಕೋನರೆಡ್ಡಿ ತಿಳಿಸಿದರು.
ಗ್ರಾಮದ ಭೌತಿಕ ಅಭಿವೃದ್ಧಿ ಅಷ್ಟೇ ಅಲ್ಲದೇ ಅದು ಸರ್ವ ರೂಪದಲ್ಲಿ ಚೈತನ್ಯದಾಯಿ ಆಗಬೆಕೆಂಬುದು ಮುಖ್ಯಮಂತ್ರಿಗಳ ಆಪೇಕ್ಷೆ ಆಗಿದೆ ಎಂದ ಕೋನರೆಡ್ಡಿ ಅವರು ಗ್ರಾಮದ ಮುಖ್ಯ ರಸ್ತೆ ಅತೀಕ್ರಮಣದ ಕುರಿತು ಮಾತನಾಡಿದ್ದು ವಿಶೇಷವಾಗಿತ್ತು. ರಸ್ತೆ ಎಷ್ಟು ಅಗಲವಿರುತ್ತೋ ಅದರ ಮೇಲೆ ಹಕ್ಕನ್ನು ಸ್ಥಾಪಿಸುವುದು ರಸ್ತೆ ನಿವಾಸಿಗಳ ಸಹಜ ಅಭ್ಯಾಸ. ಇದನ್ನು ತಎರವುಗೊಳಿಸುವುದು ಆಡಳಿತಾತ್ಮಕ ಕ್ರಮಕ್ಕಿಂತಲೂ ಊರಿನ ಜನ ಒಗ್ಗಟ್ಟಾಗಿ ಗ್ರಾಮ ಸಭೆಯಲ್ಲಿ ನಿರ್ಧರಿಸಿ ರಸ್ತೆ ಅತಿಕ್ರಮಣ ತೆರವು ಮಾಡಿಸಿದರೆ ರಸ್ತೆ ಅಭಿವೃದ್ಧಿಗೆ ನಾಲ್ಕು ಕೋಟಿ ರೂ. ಅನುದಾನವನ್ನು ಸಕರ್ಾರದಿಂದ ಒದಗಿಸಲು ತಾವು ಸಿದ್ಧ ಎಂದು ಅವರು ಘೋಷಿಸಿದ್ದು ವಿಶೇಷವಾಗಿತ್ತು. ಅಲ್ಲದೇ ಗ್ರ್ರಾಮದ ಜನರಿಗೆ ಮನೆಯಿಲ್ಲದವರಿಗೆ ವಸತಿಗಾಗಿ ಗ್ರಾಮದ ಪಕ್ಕದ ರೈತರು ಜಮೀನು ನೀಡಲು ಮುಂದಾದಲ್ಲಿ ಸಕರ್ಾರ ಸಕಾರಾತ್ಮಕ ಬೆಲೆಯಲ್ಲಿ ಖರೀದಿಸಲು ಸಿದ್ಧ ಎಂದ ಅವರು ಗ್ರಾಮದ ಅಭಿವೃದ್ಧಿ ಬರೀ ರಸ್ತೆ , ಜಮೀನಿನಿಂದಲ್ಲ ಯುವಜನಾಂಗವು ಉತ್ತಮ ಮಾನವ ಸಂಪತ್ತಾಗಿ ಅಭಿವೃದ್ಧಿ ಹೊಂದಲು ಶಾಲೆ, ಕಾಲೇಜು, ವಸತಿ ನಿಲಯ ಗ್ರಂಥಾಲಯಗಳ ಅವಶ್ಯಕತೆ ಕುರಿತು ಯೋಚಿಸಬೇಕು ಎಂದರು. ಕಿರಿಯರಲ್ಲಿ ಹಿರಿಯರ ಕುರಿತು ಗೌರವ, ಶ್ರದ್ಧೆ, ಮಮತೆ, ವಿಶ್ವಾಸಗಳು ಕ್ಷೀಣವಾಗುತ್ತಿದ್ದು ಇದು ಅಪರೋಕ್ಷವಾಗಿ ಆರೋಗ್ಯಕರ ಕುಟುಂಬ ಜೀವನವನ್ನು ಹಾಲಹಲವನ್ನಾಗಿಸುತ್ತವೆ. ಇದರಿಂದ ಗ್ರಾಮದ ಸ್ವಾಸ್ಥವೂ ಹಾಳಾಗುತ್ತದೆ ಎಂದು ಕೋನೆರಡ್ಡಿಯವರು ಜನರೊಂದಿಗೆ ಮಾತನಾಡುತ್ತಾ ಸಂದಭರ್ೋಚಿತವಾಗಿ ಹೇಳಿದ್ದು ವಿಶೇಷವಾಗಿದೆ.