ಕಾಗವಾಡ 29:
ಉಗಾರ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮೋಹನರಾವ ಶಹಾ ಇವರ ನಿವಾಸದಲ್ಲಿ ರೈತರು
ಸಭೆ ಸೇರಿ ಅಥಣಿ ತಾಲೂಕಿನ ಹಲ್ಯಾಳದ ಕೃಷ್ಣಾ ಸಕ್ಕರೆ ಕಾಖರ್ಾನೆ ಹೊರತು ಪಡಿಸಿ ಬೇರೆ ಯಾವುದೇ ಸಕ್ಕರೆ
ಕಾಖರ್ಾನೆಗಳಿಗೆ ರೈತರು ಕಬ್ಬು ಕಟಾವಣಿ ಮಾಡಬಾರದು ಎಂದು ಎಲ್ಲೆಡೆ ಧ್ವನಿವರ್ಧಕ ಮುಖಾಂತರ ರೈತರಿಗೆ
ವಿನಂತಿ ಮೂಡಿಸುವ ನಿರ್ಣಯ ತಗೆದುಕೊಂಡರು.
ರವಿವಾರ ಸಂಜೆ
ಉಗಾರ ಬಿಕೆ ಗ್ರಾಮದ ಮಾಜಿ ಶಾಸಕ ಮೋಹನರಾವ ಶಹಾ ಇವರ ನಿವಾಸದಲ್ಲಿ ಕಬ್ಬು ಬೆಳೆಗಾರರ ಸಂಘದ ಸದಸ್ಯರ
ಸಭೆ ಜರುಗಿತು. ಸಭೆಯಲ್ಲಿ ರೈತರಿಗೆ ಸಮರ್ಪಕ ದರ ನೀಡುವವರೆಗೆ ಸಕ್ಕರೆ ಕಾಖರ್ಾನೆಗಳಿಗೆ ಕಬ್ಬು ಪೂರೈಸಬಾರದು
ಎಂಬ ನಿರ್ಣಯ ಕೈಗೊಂಡರು.
ಅಧ್ಯಕ್ಷ ಮೋಹನರಾವ
ಶಹಾ ಇವರು ಸಭೆ ಬಳಿಕ ಹೇಳುವಾಗ ರೈತರಿಗೆ ಕಳೆದ ವರ್ಷದ ಕಬ್ಬು ನುರಿಸುವ ಹಂಗಾಮಿನಲ್ಲಿ ಸಕ್ಕರೆ ಕಾಖರ್ಾನೆ
ವತಿಯಿಂದ ಘೋಷಣೆ ಮಾಡಿದ ಪ್ರತಿಟನ್ 2900 ರುಪಾಯಿ ನೀಡಲೆಬೇಕು.
ಪ್ರಸಕ್ತ ಹಂಗಾಮಿಗೆ
ಕೇಂದ್ರ ಸರಕಾರ ನಿಗದಿಪಡಿಸಿದ ಎಫ್.ಆರ್.ಪಿ. ದರ ಘೋಷಣೆ ಮಾಡಿ, ಕಾಖರ್ಾನೆ ಪ್ರಾರಂಭಿಸಬೇಕು. ಅಥಣಿ
ತಾಲೂಕಿನ ಹಲ್ಯಾಳ ಕೃಷ್ಣಾ ಸಕ್ಕರೆ ಕಾಖರ್ಾನೆದವರು ಕಳೆದ ವರ್ಷದ ಕಬ್ಬಿಗೆ 2900 ದರ ನೀಡಿದ್ದಾರೆ.
ಈ ಕಾಖರ್ಾನೆಗೆ ರೈತರು ಕಬ್ಬು ಪೂರೈಸಿರಿ ಎಂದು ಹೇಳಿ ಇದೇ ತಾಲೂಕಿನ ಕೊಕಟನೂರ, ಕೆಂಪವಾಡ, ಉಗಾರ,
ಕಾಗವಾಡ ಈ ಕಾಖರ್ಾನೆಗಳಿಂದ ಪ್ರಾರಂಭದಲ್ಲಿ 2900 ದರ ನೀಡುವ ಬಗ್ಗೆ ಘೋಷಣೆ ಮಾಡಿದ್ದಾರೆ. ಆದರೆ,
ಕೇವಲ ರೂ. 2300 ಮತ್ತು ಕೆಲವರು ರೂ. 2500 ದರ ನೀಡಿದ್ದಾರೆ. ಈ ಕಾಖರ್ಾನೆಗಳಿಂದ 2900 ರೂಪಾಯಿ ದರ
ನೀಡುವವರೆಗೆ ರೈತರು ಕಬ್ಬು ಪೂರೈಸಬಾರದು ಎಂಬ ನಿರ್ಣಯ ಕೈಗೊಂಡರು.
ನ್ಯಾಯಾಲಯ ಮೋರೆ
ಹೋಗುವ ನಿರ್ಣಯ: ಸಕ್ಕರೆ ಕಾಖರ್ಾನೆಗಳು ತಾವೇ ಘೋಷಣೆ ಮಾಡಿದ 2900 ರೂಪಾಯಿ ದರ ನೀಡದೆ ಇದ್ದಿದ್ದರಿಂದ
ರೈತ ಸಂಘಟನೆವತಿಯಿಂದ ಮತ್ತು ಖುದ್ದಾಗಿ ರೈತರು ವ್ಯತ್ಯಾಸದ ಹಣ ತಗೆದುಕೊಳ್ಳಲು ನ್ಯಾಯಾಲಯ ಮೋರೆ ಹೋಗಲು
ನಿರ್ಣಯ ಕೈಗೊಂಡರು.
ಧ್ವನಿವರ್ಧಕ
ಮುಖಾಂತರ ರೈತರಿಗೆ ಎಚ್ಚರಿಕೆ:
ಸೋಮವಾರ ದಿ.
29ರಿಂದ ಅಥಣಿ ಮತ್ತು ರಾಯಬಾಗ ತಾಲೂಕಿನ ಪ್ರತಿಯೊಂದು ಗ್ರಾಮಕ್ಕೆ ಧ್ವನಿವರ್ಧಕ ಮುಖಾಂತರ ಕಬ್ಬು ಕಠಾವಣಿ
ಮಾಡಬಾರದು ಎಂಬ ವಿನಂತಿ ರೈತರಿಗೆ ಮಾಡುವ ನಿರ್ಣಯ ಕೈಗೊಂಡರು.
ಸಭೆಯಲ್ಲಿ ಉಗಾರ
ಕಬ್ಬು ಬೆಳೆಗಾರ ಸಂಘದ ಸಂಚಾಲಕರಾದ ಶಿವಗೌಡಾ ಕಾಗೆ, ಶೀತಲ ಪಾಟೀಲ, ಹಾಲಪ್ಪಾ ಘಾಳಿ, ಕುಮಾರ ಪಾಟೀಲ,
ಕುಮಾರ ಬ್ಯಾಡಗಿ, ಅಲ್ಲಾಉದ್ದೀನ ರೋಹಿಲೆ, ರಾಜೇಂದ್ರ ಪೋತದಾರ, ರವೀಂದ್ರ ಗಾಣಿಗೇರ, ಕುಡಚಿ ಜಿಪಂ
ಸದಸ್ಯ ಅಕಬರ ಮಾರುಫ್, ಇಸಾಕ್ ಪಿರಜಾದೆ, ಉದಯ ಮಾನೆ, ಸೇರಿದಂತೆ ಉಗಾರ, ಐನಾಪುರ, ಕಾಗವಾಡ, ಕುಡಚಿ
ಗುಂಡವಾಡ, ಮೋಳವಾಡ ಸೇರಿದಂತೆ ಅನೇಕ ಗ್ರಾಮಗಳ ರೈತ ಮುಖಂಡರು ಪಾಲ್ಗೊಂಡಿದ್ದರು.