ದಾಂಡೇಲಿ 17: ನಗರದ ಕುಳಗಿ ರಸ್ತೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ರವಿವಾರ ಮಹಾಪೂಜೆ ವಿಜೃಂಭಣೆಯಿಂದ ನಡೆಯಿತು. 130 ಕ್ಕೂ ಹೆಚ್ಚು ಅಯ್ಯಪ್ಪ ಮಾಲಾಧಾರಿಗಳು ಹಾಗೂ ಭಕ್ತರ ಸಮ್ಮುಖದಲ್ಲಿ ಗುರುಸ್ವಾಮಿ ಮೋಹನ ಸನಾಧಿ ಪೂಜಾ ಕಾರ್ಯ ನೆರವೆರಿಸಿದರು. ಶನಿವಾರ ಸಂಜೆಯಿಂದಲೆ ಮಹಾಪೂಜೆಗಾಗಿ ವಿಶೇಷ ತಯಾರಿ ನಡೆಸಲಾಗಿತ್ತು. ನಂತರ ರವಿವಾರ ಮುಂಜಾನೆ ಪೂಜಾ ಕಾರ್ಯದ ಅನೇಕ ವಿದಿವಿಧಾನಗಳು ನಡೆದವು. ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಪೂಜೆಯಲ್ಲಿ ಭಾಗವಹಿಸಿದ್ದರು. ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ಮಹಾಪೂಜೆಗಾಗಿ ಒಂದು ವಾರದಿಂದ ವಿಶೇಷ ಅಲಂಕಾರಗಳನ್ನು ಮಾಡಲಾಗಿತ್ತು. ಅಯ್ಯಪ್ಪ ಮಾಲಾಧಾರಿಗಳು ಪೂಜೆಯ ಯಶಸ್ಸಿಗೆ ಅವಿರತವಾಗಿ ಶ್ರಮಿಸಿದ್ದರು.
ಭಕ್ತಾಧಿಗಳಿಂದ ಅನ್ನ ಪ್ರಸಾದ ಸ್ವೀಕರಣೆ
ದಾಂಡೇಲಿ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಮಹಾಪೂಜೆ ಜರುಗಿದ ನಂತರ ಭಕ್ತಾಧಿಗಳಿಗೆ ಅನ್ನ ಪ್ರಸಾದ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ 12.00 ಘಂಟೆಗೆ ಅನ್ನ ಪ್ರಸಾದ ವಿತರಣಾ ಕಾರ್ಯಕ್ರಮ ಆರಂಭವಾಗಿ ಸಾಯಂಕಾಲ 5.00 ಘಂಟೆವರೆಗೆ ಹತ್ತು ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಮಹಾಪ್ರಸಾದವನ್ನು ಸ್ವೀಕರಿಸಿದರು. ನಗರದ ವೆಸ್ಟ ಕೋಸ್ಟ ಪೇಪರ್ ಮಿಲ್ ಆಡಳಿತ ಮಂಡಳಿ ಅನ್ನ ಪ್ರಸಾದಕ್ಕೆ ಬೇಕಾದ ಎಲ್ಲ ಉಪಕರಣಗಳ ವ್ಯವಸ್ಥೆ ಮಾಡಿತ್ತು ಹಾಗೂ ಹಲವಾರು ಭಕ್ತಾಧಿಗಳು ವಿವಿಧ ರೀತಿಯಲ್ಲಿ ಅನ್ನ ಸಂತರ್ಪಣೆಗೆ ತಮ್ಮ ಕಾಣಿಕೆಯನ್ನು ನೀಡಿದ್ದರು.
ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಕಾಗದ ಕಾಖರ್ಾನೆಯ ಕಾರ್ಯ ನಿವರ್ಾಹಕ ನಿದರ್ೇಶಕ ಶ್ರೀ ರಾಜೇಂದ್ರ ಜೈನ ಹಾಗೂ ನಗರದ ಹಲವಾರು ಗಣ್ಯರು ಭಾಗವಹಿಸಿದ್ದರು. ಮಹಾಪೂಜೆ ಹಾಗೂ ಅನ್ನ ಪ್ರಸಾದ ವಿತರಣಾ ಕಾರ್ಯಕ್ರಮ ಯಶಸ್ವಿಗೊಳ್ಳಲು ಶ್ರೀ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಟಿ.ಆರ್. ಚಂದ್ರಶೇಖರ, ಉಪಾಧ್ಯಕ್ಷ ಕೃಷ್ಣಾ ಪೂಜಾರಿ, ಕಾರ್ಯದಶರ್ಿ ಹರಿದಾಸನ, ಖಜಾಂಚಿ ವಿಶ್ವನಾಥ ಶೆಟ್ಟಿ, ಸಹ ಕಾರ್ಯದಶರ್ಿ ಅನಿಲ್ ದಂಡಗಲ್ ಸೇವಾ ಸಮಿತಿ ಪದಾಧಿಕಾರಿಗಳು ಹಾಗು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಶ್ರಮಿಸಿದ್ದರು.