ಮೆಲ್ಬೊರ್ನ್, ಡಿ- ನ್ಯೂಜಿಲೆಂಡ್ ವಿರುದ್ಧ ಗುರುವಾರ ನಡೆಯಲಿರುವ ಬಾಕ್ಸಿಂಗ್ ಡೆ ಟೆಸ್ಟ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ಐವರು ನುರಿತ ಬೌಲರ್ ಗಳೊಂದಿಗೆ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ.
ಬುಧವಾರ ಪಂದ್ಯಕ್ಕೂ ಮುನ್ನ ಮಾತನಾಡಿದ ಪ್ಯಾಟ್ ಕಮಿನ್ಸ್, ತಂಡ 20 ವಿಕೆಟ್ ಗಳನ್ನು ಪಡೆಯುವುದರ ಮೇಲೆ ಚಿತ್ತ ನೆಟ್ಟಿದೆ. ಪಿಚ್ ವೀಕ್ಷಿಸೊದ ಬಳಿಕವೇ ಅಂತಿಮ ನಿರ್ಧಾರವನ್ನು ಪ್ರಕಟಿಸಲಾಗುವುದು. ಅಲ್ಲದೆ ಪಂದ್ಯದಲ್ಲಿ ಅನುಭವಿ ಹಾಗೂ ನುರಿತ ಬೌಲರ್ ಗಳಿಗೆ ಸ್ಥಾನ ನೀಡುವ ಬಗ್ಗೆ ಚಿಂತನೆ ನಡೆದಿದೆ.
ಬ್ಯಾಟಿಂಗ್ ನಲ್ಲೂ ಸಹಾಯವಾಗಬಲ್ಲ ಬೌಲರ್ ಗಳಿಗೆ ಮಣೆ ಹಾಕಲಾಗುವುದು. ಇದರಿಂದ ತಂಡದ ಬ್ಯಾಟಿಂಗ್ ಲ್ಯಾನ್ ಅಪ್ ಸುಧಾರಿಸುತ್ತದೆ ಎಂದು ಪೇನ್ ತಿಳಿಸಿದ್ದಾರೆ.
ಮೊದಲ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ 296 ರನ್ ಗಳ ಗೆಲುವು ದಾಖಲಿಸಿತ್ತು. ಎರಡನೇ ಪಂದ್ಯ ಗೆದ್ದು ಸರಣಿ ಕೈ ವಶ ಮಾಡಿಕೊಳ್ಳುವ ಕನಸು ಕಾಣುತ್ತಿದೆ.