ಭಕ್ತರಿಂದ ಗವಿಮಠಕ್ಕೆ 202.ಕ್ವೀ. ಅಕ್ಕಿ ರವಾನೆ

ಲೋಕದರ್ಶನ ವರದಿ

ಕಾರಟಗಿ 20: ಕೊಪ್ಪಳದ ಗವಿಸಿದ್ದೇಶ್ವರ ತಾತನವರ ಜಾತ್ರಾ ಮಹೋತ್ಸವದ ದಾಸೋಹಕ್ಕೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು,  ವಾಣಿಜ್ಯೋದ್ಧಿಮಿಗಳು, ವರ್ತಕರಿಂದ ಸಂಗ್ರಹಿಸಿದ 202.ಕ್ವೀ. 75.ಕೆಜಿ. ಅಕ್ಕಿಯನ್ನು ಭಾನುವಾರ ಲಾರಿಗಳ ಮೂಲಕ ಕೊಪ್ಪಳದ ಗವಿಮಠಕ್ಕೆ  ಕಳಿಸಿಕೊಡಲಾಯಿತು.  

ಪ್ರತಿವರ್ಷದಂತೆ ಈ ವರ್ಷವೂ ಜಾತ್ರಮಹೋತ್ಸವದ ದಾಸೋಹಕ್ಕೆ  ಪಟ್ಟಣದ ಅಕ್ಕಿಗಿರಿಣಿ ಮಾಲಕರು, ವರ್ತಕರು, ಸೇರಿದಂತೆ  ಸಿದ್ದಾಪೂರ, ಕೊಟ್ನೆಕಲ್, ಬೂದಗುಂಪ, ತಿಮ್ಮಾಪೂರ ಗ್ರಾಮಗಳ  ಭಕ್ತರಿಂದ ಹಾಗೂ ಚನ್ನಳ್ಳಿಯ ಯಂಕಾರೆಡ್ಡೆಪ್ಪ ಇವರು 400. ಕಚರ್ಿಕಾಯಿ, ಹಾಗೂ ಪುಡಿ ಚಟ್ನಿ ಗಳನ್ನು ಕೂಡ  ಗವಿಮಠದ ಜಾತ್ರಮಹೋತ್ಸವದ ಅನ್ನದಾಸೋಹಕ್ಕೆ ಕಳುಹಿಸಲಾಗಿದೆ ಎಂದು  ಸೇವಾಕರ್ತ   ಅರಳಿ ನಾಗರಾಜ ಹೇಳಿದರು. ಇದ್ಕಕೂ ಮುಂಚೆ ಸ್ಥಳೀಯ ಎಪಿಎಂಸಿ ಆವರಣದಲ್ಲಿ ಅಕ್ಕಿ ತುಂಬಿಸಿ ಲಾರಿಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಮಾತನಾಡಿದ ಅಕ್ಕಿಗಿರಣಿ ಮಾಲಕರ ಸಂಘದ ಅಧ್ಯಕ್ಷ ಶ್ರೀನಿವಾಸ  ಅಭಿನವ ಗವಿಸಿದ್ಧೇಶ್ವರ  ಸ್ವಾಮಿಗಳ ನೇತ್ರತ್ವದಲ್ಲಿ ಕೊಪ್ಪಳದಲ್ಲಿ  ನಡೆಯುವ  ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ ಕುಂಭಮೇಳ ವೇಂದೆ ಖ್ಯಾತಿ ಪಡೆದಿದೆ.  ಗವಿಸಿದ್ದೇಶ್ವರ ಜಾತ್ರಾಮಹೋತ್ಸವದಿಂದ ಕೊಪ್ಪಳ ಜಿಲ್ಲೆಯ ಹೇಸರು  ದೇಶಾದ್ಯಂತ  ಹೇಸರು ವಾಸಿಗಾಗಿದೆ. ಇದರಿಂದ ಜಿಲ್ಲೆಯ ಎಲ್ಲಾ ಸಮಸ್ಥ ನಾಗರಿಕರಿಗೂ ಹೆಮ್ಮೆಯ ಸಂಗತಿಯಾಗಿದೆ. ಅದೇ ರೀತಿ ಜಾತ್ರಾಮಹೋತ್ಸವದ ದಾಸೋಹಕ್ಕೆ ಪ್ರತಿವರ್ಷದಂತೆ ಈ ವರ್ಷವೂ ಸಮಸ್ಥ ಸಮಾಜ ಬಾಂಧವರು ತಮ್ಮ ಶಕ್ತಾನುಸಾರ  ಕಾಣಿಕೆ ನೀಡುತ್ತಿದ್ದಾರೆ. ಆ ರೀತಿ ಸಂಘ್ರಹವಾದ ಕಾಣಿಕೆಯಿಂದ ಅಕ್ಕಿಯ ರೂಪದಲ್ಲಿ ಮಠಕ್ಕೆ ಕಳಿಸಲಾಗುತ್ತಿದೆ. ಗವಿಸಿದ್ದೇಶ್ವರರು  ಭಕ್ತ ವೃಂದಕ್ಕೆ ಹಾಗೂ ದಾನಿಗಳಿಗೆ ಇನ್ನು ಹೆಚ್ಚಿನ ಶಕ್ತಿ ದಯಪಾಲಿಸಲಿ ಎಂದರು.   

ಈ ಸಂದರ್ಭದಲ್ಲಿ  ವಾಣಿಜ್ಯೋದ್ಧಿಮಿ & ವರ್ತಕರುಗಳಾದ ಸಣ್ಣ ವಿರೇಶಪ್ಪ ಚಿನಿವಾಲ್, ಯಂಕಾರಡ್ಡೆಪ್ಪ,  ಚನ್ನನಗೌಡ, ಅಯ್ಯಪ್ಪ ಉಪ್ಪಾರ, ಯಂಕನಗೌಡ, ಆರ್.ಜಿ. ಶ್ರೀನಿವಾಸ, ಅಮರೇಶ ಸಾಲಗುಂದಿ,  ಯಮನಪ್ಪ ಮೂಲಿಮನಿ,  ಗುರಾಜ ಶ್ರೇಷ್ಠಿ,  ಮಹಾಭಲೇಶ ಹುರಕಡ್ಳಿ,  ಶರಣಪ್ಪ ಸುಂಕದ,  ಆನಂದ ಒಳಗುಂದಿ, ಮಲ್ಲಪ್ಪ,  ಶರಣಪ್ಪ ಪನ್ನಾಪೂರ, ಶಶೀಧರಗೌಡ, ಸೇರಿದಂತೆ,  ವರ್ತಕರ ಸಂಘದ  ಸದಸ್ಯರು ಭಕ್ತಾಧಿಕಗಳು ಇತರರಿದ್ದರು.