ಪ್ರಪ್ರಥಮ ಬಾರಿಗೆ ಬೆಳಗಾವಿಯಲ್ಲಿ ಐತಿಹಾಸಿಕ 'ಕನರ್ಾಟಕ ಕುಸ್ತಿ ಹಬ್ಬ

ಬೆಳಗಾವಿ: 11 : ಬೆಳಗಾವಿಯಲ್ಲಿ ಪ್ರಪ್ರಥಮ ಬಾರಿಗೆ ಐತಿಹಾಸಿಕ "ಕನರ್ಾಟಕ ಕುಸ್ತಿ ಹಬ್ಬ ವನ್ನು 2019ರ ಫೆಬ್ರುವರಿ 8, 9 ಹಾಗೂ 10 ರಂದು ಬೆಳಗಾವಿಯಲ್ಲಿ ವಿಜೃಂಭನೆಯಿಂದ ಸಂಘಟಿಸಲಾಗುವುದು ಎಂದು ಬೆಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿದರ್ೆಶಕರಾದ ಬಸವರಾಜ ಹೆಚ್ ಅವರು ಹೇಳಿದರು.

ನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಒಳಾಂಗಣ ಕ್ರೀಡಾಂಗಣದಲ್ಲಿ (ಜ.11) ರಂದು ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

"ಕನರ್ಾಟಕ ಕುಸ್ತಿ ಹಬ್ಬ ಯಶಸ್ವಿ ಸಂಘಟನೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚಚರ್ಿಸಿ ತೀಮರ್ಾನಿಸಲಾಯಿತು. 

ಸಭೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿಯ ಉಪ ನಿದರ್ೇಶಕರಾದ ಸೀಬಿರಂಗಯ್ಯ, ಅಂತರರಾಷ್ಟ್ರೀಯ ಕುಸ್ತಿಪಟು, ಕನರ್ಾಟಕ ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘದ ಅಧ್ಯಕ್ಷರಾದ ರತನ ಮಠಪತಿ, ಮುಕುಂದ ಕಿಲ್ಲೇಕರ (ಅಜರ್ುನ ಪ್ರಶಸ್ತಿ ವಿಜೇತ ಬಾಕ್ಸಿಂಗ್ ಕ್ರೀಡಾಪಟು), ಎಂ.ಆರ್. ಪಾಟೀಲ (ಒಲಂಪಿಯನ್) ಮಾಜಿ ಕುಸ್ತಿಪಟು, ಶಿವಾಜಿ ಚಿಂಗಳೆ (ಕಾಮನವೆಲ್ತ್ ಮೆಡಲಿಸ್ಟ್), ಮಹೇಶ ಡುಕ್ರೆ (ಅಂತರರಾಷ್ಟ್ರ ಕುಸ್ತಿಪಟು), ಹೆಸರಾಂತ ಕಬಡ್ಡಿ ಕ್ರೀಡಾಪಟು ಹಾಗೂ ಎ.ಸಿ.ಪಿ ಗ್ರಾಮೀಣರವರಾದ ಬಾಲಚಂದ್ರ ಬಿ.ಎಸ್, ಮಾಜಿ ಕುಸ್ತಿಪಟು ಮಹಾಂತೇಶ್ ಜಿದ್ದಿ (ಬೆಳಗಾವಿ ಕ್ರೈ ಎ.ಸಿ.ಪಿ) ಹಾಗೂ ಭಾರತೀಯ ಕ್ರೀಡಾ ಪ್ರಾಧೀಕಾರದ ಹಿರಿಯ ಕುಸ್ತಿ ತರಬೇತಿದಾರರಾದ ಶ್ರೀನಿವಾಸಗೌಡ, ಶಂಕರಪ್ಪ, ಕನರ್ಾಟಕ ಕ್ರೀಡಾ ಪ್ರಾಧೀಕಾರದ ಎಲ್ಲ ಕುಸ್ತಿ ತರಬೇತಿದಾರರು ಸೇರಿದಂತೆ ವಿವಿಧ ಕುಸ್ತಿ ಸಂಘಟಣೆ ಪಧಾಧಿಕಾರಿಗಳು ಒಳಗೊಂಡಂತೆ ಅಂದಾಜು 400 ಜನ ಹಿರಿಯ ಕುಸ್ತಿಪಟುಗಳು, ಕುಸ್ತಿ ಪಾಲಕ/ಪೋಷಕರು 

ಭಾಗವಹಿಸಿದ್ದರು.