ಗದಗ 14: ಕೇಂದ್ರ ಸಕರ್ಾರದ ನೆರವಿನೊಂದಿಗೆ ಸ್ವಯಂ ಉದ್ಯೋಗ ಮತ್ತು ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಪ್ರೋತ್ಸಾಹಿಸಿ ಸಾಲ ಸೌಲಭ್ಯ ಒದಗಿಸಿ ಉದ್ಯೋಗ ಸೃಷ್ಟಿಗೆ ರಾಜ್ಯ ಸಕರ್ಾರವು ಹಲವಾರು ಯೋಜನೆಗಳನ್ನು ಜಾರಿಗೊಳಿಸಲು ಈ ವಿಶೇಷ ಆಂದೋಲನವನ್ನು ಕೈಗಾರಿಕೆ ಇಲಾಖೆ ಹಮ್ಮಿಕೊಂಡಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.
ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದಿ. 13ರಂದು ಜರುಗಿದ ಈ ವಿಶೇಷ ಆಂದೋಲನದ ಕುರಿತ ಬ್ಯಾಂಕ್ರಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗದಗ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು ಶೇ. 75 ರಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಆದರೆ ಕಳೆದ ಹಲವಾರು ವರ್ಷಗಳಿಂದ ಸಕಾಲದಲ್ಲಿ ಮಳೆಯಾಗದೆ ಸತತ ಬರಗಾಲದಿಂದ ಬಳಲುತ್ತಿದ್ದು ಕೃಷಿ ಅವಲಂಬಿತರಿಗೆ ಉದ್ಯೋಗ ಅವಕಾಶ ಒದಗಿಸುವುದು ಇಂದಿನ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಉದ್ಯಮ ಚಟುವಟಿಕೆಗಳಿಗೆ ಸಾಲ ಒದಗಿಸಿ ಪ್ರೋತಾಹಿಸಲು ಕೈಗಾರಿಕೆ, ಕಾಮರ್ಿಕ ಇಲಾಖೆ ಹಾಗೂ ಬ್ಯಾಂಕ್ ನವರು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕೆಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ತಿಳಿಸಿದರು.
ಸಣ್ಣ, ಅತೀ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಸೌಲಭ್ಯ ಕಲ್ಪಿಸುವ ವಿಶೇಷ ಆಂದೋಲನವು ಡಿಸೆಂಬರ್ 1 ರಿಂದ ಫೆಬ್ರುವರಿ 28 ರವರೆಗೆ ಇರಲಿದೆ. ನಿರುದ್ಯೋಗ ನಿವಾರಣೆ, ಸ್ವಯಂ ಉದ್ಯೋಗಕ್ಕೆ ಸಹಾಯ ಮಾಡುವುದು, ಮನೆಗೊಂದು ಆಥರ್ಿಕ ಚಟುವಟಿಕೆ ಒದಗಿಸುವುದು ಆಂದೋಲನದ ಉದ್ದೇಶವಾಗಿದೆ. ಸಂಬಂಧಿತ ಎಲ್ಲರೂ ಇದಕ್ಕೆ ಸಹಕಾರ ನೀಡಬೇಕು. ಇದಕ್ಕಾಗಿ ಮಾನ್ಯ ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳು ಸೇರಿದಂತೆ ಸಂಬಂಧಿತ ಇಲಾಖೆ, ಬ್ಯಾಂಕುಗಳ ಜಿಲ್ಲಾ ಮುಖ್ಯಸ್ಥರ ಪರಿಶೀಲನಾ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿದರ್ೇಶಕ ಟಿ. ದಿನೇಶ ಸಭೆಗೆ ತಿಳಿಸಿದರು.
ಸಭೆಯಲ್ಲಿ ಗದಗ ಲೀಡ್ ಬ್ಯಾಂಕ್ (ಎಸ್ ಬಿ ಐ) ದ ಮುಖ್ಯ ವ್ಯವಸ್ಥಾಪಕ ಬಿ. ವೈ. ಕಾಂಬಳೆ, ವಿವಿಧ ಬ್ಯಾಂಕ್ನ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಶೇಷ ಆಂದೋಲನದ ಪ್ರಯೋಜನಗಳು: ಕೇಂದ್ರ ನೆರವಿನ ಕೈಗಾರಿಕಾ ಇಲಾಖೆಯ 90 ದಿನಗಳ ಸಣ್ಣ, ಅತೀ ಸಣ್ಣ ಹಾಗೂ ಮಧ್ಯಮ ಉದ್ಯೋಗ ಘಟಕಗಳ ಈ ವಿಶೇಷ ಆಂದೋಲನದಲ್ಲಿ ಪಿ.ಎಂ.ಇ.ಜಿ.ಪಿ ಯೋಜನೆಯಡಿ ಹೊಸ ಸಾಲ, ಪಿಎಂಎಂವೈ ಯೋಜನೆಯಡಿ ದುಡಿಯುವ ಬಂಡವಾಳ ಒದಗಿಸಲು ಉದ್ದೇಶಿಸಲಾಗಿದೆ. ಹಳೆ ಸಾಲಗಳ ಮರುಪಾವತಿ ಅವಧಿ ಬದಲಾವಣೆ, ಅರ್ಹರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಸಾಲ ಮಂಜೂರಾತಿ, ಗ್ರಾಮೀಣ ಉದ್ಯೋಗ ಸೃಷ್ಟಿ, ತರಬೇತಿ ಕೇಂದ್ರದ ಅಭ್ಯಥರ್ಿಗಳಿಗೆ ಸಾಲ, ಪಿಎಂಕೆವಿವೈ ಯೋಜನೆ, ಸಣ್ಣ ಅತೀ ಸಣ್ಣ ಉದ್ಯಮಗಳಿಗೆ ಪಿಎಂಇಜಿಪಿ ಹಾಗೂ ಪಿಎಂಎಂವೈ ಯೋಜನೆಗಳಡಿ ಸುಲಭವಾಗಿ ಬಂಡವಾಳ ಹೂಡಲು ಸಾಲ ನೀಡುವಿಕೆ ಈ ವರ್ಗಗಳ ತಯಾರಿಸುವ ಸರಕುಗಳಿಗೆ ತಂತ್ರಾಂಶ ಆಧಾರಿತ ಮಾರುಕಟ್ಟೆ ಒದಗಿಸುವ ಹಾಗೂ ಖರೀದಿ ವ್ಯವಸ್ಥೆ ಒದಗಿಸುವುದು ಹಾಗೂ ಈ ಉದ್ಯೋಗಿಗಳಿಗೆ ಜನಧನ ಖಾತೆ, ಪಿಎಂ ಸುರಕ್ಷಾ ವಿಮೆ, ಜೀವನ ಜ್ಯೋತಿ ವಿಮೆ, ರೋಜಗಾರ ಪ್ರೋತ್ಸಾಹಧನ ಯೋಜನಾ ಇಪಿಎಫ್ ಹಾಗೂ ಇ ಎಸ್ ಐ ಸಿ ಅಡಿ ಆರೋಗ್ಯ ಸೇವೆ ಒದಗಿಸುವ ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ.
ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಲೀಡ್ ಬ್ಯಾಂಕ್, ಜಿ.ಪಂ. ಬ್ಯಾಂಕುಗಳು, ಕೈಗಾರಿಕಾ ಸಂಘಸಂಸ್ಥೆಗಳು ಭಾಗೀದಾರರಾಗಿದ್ದು, ಬ್ಯಾಂಕು ಶಾಖೆಗಳ ಮಟ್ಟದಲ್ಲಿ ತಾಲೂಕಾ, ಗ್ರಾಮ ಪಂಚಾಯತ್ ಹಾಗೂ ಗ್ರಾಮೀಣ ಬ್ಯಾಂಕುಗಳ ಮತ್ತು ಕೈಗಾರಿಕಾ ಸಂಘ ಸಂಸ್ಥೆಗಳ ಮೂಲಕ ಈ ವಿಶೇಷ ಆಂದೋಲನದಲ್ಲಿ ಒದಗಿಸುವ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸುವುದು ಮುಂತಾದ ವಿಷಯಗಳನ್ನು ಹೊಂದಿದ್ದ ಅರ್ಹರು ಇದರ ಲಾಭ ಪಡೆದು ಸ್ವಯಂ ಉದ್ಯೋಗಕ್ಕಾಗಿ ಇತರರಿಗೆ ಉದ್ಯೋಗ ಒದಗಿಸಲು ಇರುವ ಅವಕಾಶದ ಸದುಪಯೋಗ ಪಡಿಸಿಕೊಳ್ಳಲು ತಿಳಿಸಲಾಗಿದೆ.