ಬೀಳಗಿ, 26; ಬೇಸಿಗೆ ಬರುತ್ತಿರುವ ಹಿನ್ನೆಲೆ ಕುಡಿಯುವ ನೀರಿನ ಅಭಾವ ತಪ್ಪಿಸಲು ಪಟ್ಟಣದ ಜನತೆ ನೀರನ್ನು ಪೋಲ್ ಮಾಡದೆ ಅವಶ್ಯ ಇದ್ದಷ್ಟು ಬಳಕೆ ಮಾಡಬೇಕೆಂದು ಪಪಂ ಅಧ್ಯಕ್ಷ ಮುತ್ತು ಬೋರ್ಜಿ ಹೇಳಿದರು.
ಇಲ್ಲಿಯ ಪಪಂ ಸಭಾ ಭವನದಲ್ಲಿ ಸೋಮವಾರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲ ವಾರ್ಡಗಳ ಪಪಂ ಸದಸ್ಯರು ಅವರವರ ವಾರ್ಡಗಳಲ್ಲಿ ನೀರು, ಸ್ವಚ್ಚತೆ ಕುರಿತು ಜಾಗೃತಿ ಮೂಡಿಸಬೇಕು. ಪಟ್ಟಣದಲ್ಲಿ ಸ್ವಚ್ಚತೆ, ನೀರು, ಚರಂಡಿ ಸೇರಿ ಮೂಲಭೂತ ಸೌಲಭ್ಯಗಳಿಗೆ ಮಹತ್ವ ನೀಡಲಾಗುವುದು ಎಂದರು.
ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ್ ಮಾತನಾಡಿ ಪಟ್ಟಣದ ಜನತೆಗೆ ಮುಂಬರುವ ದಿನಗಳಲ್ಲಿ ನೀರಿನ ಅಭಾವ ನೀಗಿಸಲು 24*7 ಕಾಮಗಾರಿ ಈಗಾಗಲೇ ಶೇ.70ರಷ್ಟು ಮುಗಿದಿದೆ. ಉಳಿದ ಕಾಮಗಾರಿ ಪೂರ್ಣಗೊಳಿಸಿ ಎಪ್ರೀಲ್ ತಿಂಗಳಲ್ಲಿ ಪಟ್ಟಣಕ್ಕೆ 24*7 ನೀರು ಸರಬರಾಜು ಮಾಡುವುದಾಗಿ ಭರವಸೆ ನೀಡಿದರು. ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಉಳಿತಾಯದ ಬಡ್ಡಿ ಸೇರಿ ಒಟ್ಟು ರೂ.47ಲಕ್ಷಕ್ಕಿಂತ ಅಧಿಕ ಮೊತ್ತವನ್ನು ಎಸ್ಸಿ ಎಎಸ್ಟಿ ಕಾಲೋನಿಗಳಿಗೆ ಮೂಲ ಸೌಲಭ್ಯಕ್ಕೆ ಬಳಸಲಾಗುವುದು ಎಂದ ಅವರು ಸರಕಾರದ ನೋಂದಣಿ ಪ್ರಕಾರ ಎಲ್ಲ ತರಹದ ಆಸ್ತಿಗಳಿಗೆ ಮಾರುಕಟ್ಟೆ ಬೆಲೆಯನ್ನು ಪರಿಷ್ಕರಿಸಿ ಆಸ್ತಿ ತೆರಿಗೆಯಲ್ಲಿ ಹೆಚ್ಚಳ ಮಾಡುವುದು ಎಂದರು.
ಕೇಂದ್ರ-ರಾಜ್ಯ ಸರಕಾರಗಳು 15ನೇ ಹಣಕಾಸಿನ ಅನುದಾನ ಪಡೆಯಬೇಕಾದರೆ ಅದಕ್ಕೆ ಮಾನದಂಡಗಳನ್ನು ರೂಪಿಸಿದೆ. ಇದರಲ್ಲಿ ಪಟ್ಟಣದ ತೆರಿಗೆ ವಸೂಲಾತಿ ಹೆಚ್ಚಳ ಮಾಡುವುದು ಸೇರಿದಂತೆ ಇತರೆ ಮಾನದಂಡಗಳನ್ನು ಅನುಸರಿಸಬೇಕೆಂದು ಆದೇಶಿಸಿದೆ. ಅದಕ್ಕಾಗಿ ಪಟ್ಟಣದಲ್ಲಿ ಸಂಗ್ರಹಿಸುವ ಎಲ್ಲ ಮೂಕದ ಆದಾಯ ತೆರಿಗೆಯನ್ನು ಶೇ.3ರಷ್ಟು ಹೆಚ್ಚಿಸಲು ಪಪಂ ಅಧ್ಯಕ್ಷರಾಧಿಯಾಗಿ ಎಲ್ಲ ಸದಸ್ಯರು ತಿರ್ಮಾನ ತೆಗೆದುಕೊಂಡರು.
ಉಪಾಧ್ಯಕ್ಷೆ ಕೆ.ವಿ.ಗಡ್ಡದ, ಸದಸ್ಯರಾದ ಪಡಿಯಪ್ಪ ಕರಿಗಾರ, ಸಿದ್ಲಿಂಗ ನಾಗರಾಳ, ಸಿದ್ದು ಮಾದರ, ರಾಜು ಬೋರ್ಜಿ, ಸಂತೋಷ ನಿಂಬಾಳ್ಕರ್, ಅಜ್ಜು ಬಾಯಸರಕಾರ, ಪರಶುರಾಮ ಮಮದಾಪೂರ ಸೇರಿದಂತೆ ಎಲ್ಲ ಸದಸ್ಯರು ಉಪಸ್ಥಿತರಿದ್ದರು.