ವಡವಡಗಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

Unopposed Election of Vadavadagi Gram President-Vice President

ತಾಳಿಕೋಟಿ, 25; ದೇವರ ಹಿಪ್ಪರಗಿ ಮತ ಕ್ಷೇತ್ರ ವ್ಯಾಪ್ತಿಯ ವಡವಡಗಿ ಗ್ರಾಮ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿಂದುಳಿದ ವರ್ಗ ಅ ಮಹಿಳೆ ಮೀಸಲು ಸ್ಥಾನಕ್ಕೆ ಅಧ್ಯಕ್ಷರಾಗಿ ನಂದಿಹಾಳ ಗ್ರಾಮದ ಪಾರ್ವತಿ ಶಂಕರ ಗೌಡ ಹಳ್ಳಿ ಹಾಗೂ ಅನುಸೂಚಿತ ಜಾತಿ ಮಹಿಳೆ ಮೀಸಲು ಸ್ಥಾನಕ್ಕೆ ಉಪಾಧ್ಯಕ್ಷರಾಗಿ ಸಿಂಧಗೇರಿ ಗ್ರಾಮದ ಮಾದೇವಿ ರಾಜು ಹರಿಜನ ಅವಿರೋಧವಾಗಿ ಆಯ್ಕೆಯಾದರು.  

ವಡವಡಗಿ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಮಂಗಳವಾರ ನಡೆದ ಈ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಾರ್ವತಿ ಶಂಕರಗೌಡ ಹಳ್ಳಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಾದೇವಿ ರಾಜು ಹರಿಜನ ಇವರಿಬ್ಬರೇ ನಾಮಪತ್ರ ಸಲ್ಲಿಸಿ ಬೇರಾರು ನಾಮಪತ್ರ ಸಲ್ಲಿಸದೆ ಇರುವುದರಿಂದ ಚುನಾವಣಾಧಿಕಾರಿಯೂ ಆದ ತಾಪಂ ಇಒ ದೇಸಾಯಿ ಅವರು ಇವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು. ಒಟ್ಟು 23 ಸದಸ್ಯ ಬಲ ಹೊಂದಿರುವ ಈ ಪಂಚಾಯತ್ ನ ಅಧ್ಯಕ್ಷ-ಉಪಾದ್ಯಕ್ಷರ ಚುನಾವಣೆಯಲ್ಲಿ 20 ಜನ ಸದಸ್ಯರು ಭಾಗವಹಿಸಿದ್ದರು.     

ಈ ಸಮಯದಲ್ಲಿ ಸದಸ್ಯರಾದ ಈರಣ್ಣ ಚಂ.ಯಲಗೋಡ, ಬಸಪ್ಪ ಸಂ. ಭಜಂತ್ರಿ, ಆಫರೀನ ಬ.ಅತ್ತಾರ, ಗಂಗಮ್ಮ ಶಂ.ನರಸಲಗಿ, ದಯಾನಂದ ತಳವಾರ, ಶಿವಮ್ಮ ಮ. ಮಾಸ್ತಿ, ಮಂಜುನಾಥ್ ಸಿ.ಬಿರಾದಾರ, ಪೂರ್ಣಿಮಾ ದೇ.ಹೆಬ್ಬಾಳ, ರೇಣುಕಾ ಬ. ನಾಯ್ಕೋಡಿ, ರೇಖಾ ಪ್ರಕಾಶ್ ಕಮ್ಮಾರ, ಪಾರುಬಾಯಿ ರ. ಚೌವಾಣ, ನಾನಗೂಡ ಸಂ. ನಾಡಗೌಡ್ರ, ಶ್ರೀಶೈಲ್ ಮ. ಸಾಸನೂರ, ಬಸಮ್ಮ ದೇ. ಪೊಲೇಶಿ, ನೀಲಮ್ಮ ಮ.ಬ್ಯಾಳಿ, ಸರೋಜಿನಿ ನಿಂ. ಹೇರಾನವರ, ಕಾಸಪ್ಪ ಪೀರ​‍್ಪ ಹೊಸಮನಿ, ರಾಮಚಂದ್ರ ಸಂ.ಸಾಸನೂರ, ಲಕ್ಷ್ಮೀಬಾಯಿ ಚಂ.ಮಾರನಾಳ, ಶಂಕರಗೌಡ ಗು. ದೊಡಮನಿ, ಶಂಕ್ರ​‍್ಪ ಮು.ಗಾಣದಕಲ್ಲ ಹಾಗೂ ವಡವಡಗಿ, ನಂದಿಹಾಳ, ಸಿಂಧಗಿರಿ, ಹುಲಿಬೆಂಚಿ, ನಾಗರಾಳ ಹುಲಿ ಗ್ರಾಮಗಳ ಗಣ್ಯರು ಹಿರಿಯರು ಇದ್ದರು