ಫೆ. 10 ರಂದು ಕಾಯಕ ಶರಣರ ಜಯಂತಿ ಆಚರಣೆ

Feb. Kayak Sharan's Jayanti celebration on 10th

 ಫೆ. 10 ರಂದು ಕಾಯಕ ಶರಣರ ಜಯಂತಿ ಆಚರಣೆ

ಧಾರವಾಡ 24:  ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರ ಅಧ್ಯಕ್ಷತೆಯಲ್ಲಿ ಇಂದು (ಜ.24) ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ವಿವಿಧ ಜಯಂತಿಗಳ ಆಚರಣೆ ಕುರಿತು ಪೂರ್ವಭಾವಿ ಸಭೆ ಜರುಗಿತು.  

ಸಭೆ ಉದ್ದೇಶಿಸಿ ಅಪರ ಜಿಲ್ಲಾಧಿಕಾರಿಗಳು ಮಾತನಾಡಿ, ಬರುವ ಫೆ. 1 ರಂದು ಶ್ರೀ ಮಡಿವಾಳ ಮಾಚಿದೇವ ಜಯಂತಿಯನ್ನು ಮತ್ತು ಫೆ. 5 ರಂದು ಶ್ರೀ ಸವಿತಾ ಮಹರ್ಷಿ ಜಯಂತಿಯನ್ನು  ಹಾಗೂ  ಫೆ.10 ರಂದು ಕಾಯಕ ಶರಣರ ಜಯಂತಿಯನ್ನು ಎಲ್ಲ ಸಮಾಜದ ಮುಖಂಡರ, ಸಾರ್ವಜನಿಕರ ಸಹಕಾರದಲ್ಲಿ ಆಚರಿಸಲಾಗುತ್ತದೆ ಎಂದು ಅವರು ಹೇಳಿದರು.  

ಜಯಂತಿಯ ದಿನಗಳಂದು ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಮಹಾತ್ಮರ ಭಾವಚಿತ್ರಕ್ಕೆ ಪೂಜೆ, ಪುಷ​‍್ಾರೆ್ಪಣ ಸಲ್ಲಿಸಲಾಗುತ್ತದೆ. ವಿಶೇಷ ಉಪನ್ಯಾಸ, ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಸಮಾಜದ ಮುಖಂಡರ ಕೋರಿಕೆ ಹಾಗೂ ಸಹಕಾರದಲ್ಲಿ ಮಹಾತ್ಮರ ಭಾವಚಿತ್ರದ ಭವ್ಯ ಮೆರವಣೆಗೆಯನ್ನು ನಗರದಲ್ಲಿ ಜಯಂತಿ ದಿನಗಳಂದು ಆಯೋಜಿಸಲಾಗುತ್ತದೆ. ಇದರಲ್ಲಿ ಕಲಾ ತಂಡಗಳು ಭಾಗವಹಿಸುತ್ತವೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.  

ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಿ.ಎಸ್‌.ಮೂಗನೂರಮಠ ಅವರು ಮಾತನಾಡಿ, ಮಹಾತ್ಮ ಮತ್ತು ಶರಣರ ವಿಚಾರಧಾರೆಗಳು, ಜೀವನ ಸಿದ್ದಾಂತಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಸಲುವಾಗಿ ಮಹಾತ್ಮರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಮಹಾತ್ಮರನ್ನು ಜಾತಿ, ಸಮುದಾಯಗಳಿಗೆ ಸೀಮಿತಗೊಳಿಸಬಾರದು ಎಂದು ಹೇಳಿದರು.  

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸಮಾಜಗಳ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.