ಹಿರೇಬಿದರಿಯಲ್ಲಿ ಕಣ್ಣಿನ ತಪಾಸಣಾ ಶಿಬಿರ: 35 ಜನರು ಶಸ್ತ್ರ ಚಿಕಿತ್ಸೆಗೆ ಆಯ್ಕೆ
ರಾಣೇಬೆನ್ನೂರು : ಡಿ 29 ಮನುಷ್ಯನ ಬದುಕಿನಲ್ಲಿ ಕಣ್ಣು ಬಹು ಮುಖ್ಯ ಅಂಗವಾಗಿದೆ. ಕಣ್ಣಿಲ್ಲದಿದ್ದರೆ ಅನಾಥ ಪ್ರಜ್ಞೆಯಲ್ಲಿ ಜೀವನ ಸಾಗಿಸಬೇಕಾಗುತ್ತದೆ ಇಂತಹ ಸಂದರ್ಭದಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆಯು, ತನ್ನ ಉಚಿತ ಯೋಜನೆಯಲ್ಲಿ, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಇಂತಹ ಶಿಬಿರಗಳ ಮೂಲಕ ಜನಸಾಮಾನ್ಯರ ಬದುಕಿಗೆ ಬೆಳಕಾಗುತ್ತಲಿದೆ ಎಂದು ಶಂಕರ್ ಕಣ್ಣಿನ ಆಸ್ಪತ್ರೆ ವೈದ್ಯ ಡಾ, ಸುನಿಲ್ ಹೇಳಿದರು. ಅವರು ತಾಲೂಕಿನ ಹಿರೇಬಿದರಿ ಗ್ರಾಮದಲ್ಲಿ ಇಲ್ಲಿನ ಸ್ನೇಹ ದೀಪ ಅಂಧ ಅಂಗವಿಕಲರ ಸಂಸ್ಥೆ ಗ್ರಾಮ ಪಂಚಾಯತ್ ಆಯೋಜಿಸಿದ್ದ, ನೇತೃ ತಪಾಸಣೆ ಹಾಗೂ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ, ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಕಣ್ಣಿನ ಸಮಸ್ಯೆಯಿಂದ ಬಳಲುವವರು ಶೇ,60ರಷ್ಟು ಜನರಿದ್ದಾರೆ. ಇಂದಿನ ದುಬಾರಿ ಕಾಲದಲ್ಲಿ ಚಿಕಿತ್ಸೆಗೆ ಒಳಪಡುವುದು ತುಂಬಾ ಕಷ್ಟದ ಕೆಲಸ. ಅದಕ್ಕಾಗಿ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಇಂತಹ ಶಿಭಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರ್ಪ ಓಲೇಕಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಆಸ್ಪತ್ರೆಯ ಇನ್ನೊರ್ವ ವೈದ್ಯ ಸುರೇಶ್, ನ್ಯಾಯವಾದಿ ನಾಗರಾಜ ಸಂಗಾನವರ, ವಿರುಪಾಕ್ಷಪ್ಪ ಹರಪನಹಳ್ಳಿ, ಕೆಂಚನಗೌಡ ಪಾಟೀಲ, ವಿರುಪಾಕ್ಷಪ್ಪ ಸಾವಕ್ಕಳ್ಳವರ, ಆಡಳಿತಾಧಿಕಾರಿ ವಿನಾಯಕ ಕೆಂಚನಗೌಡ ರ ಸೇರಿದಂತೆ ಸ್ನೇಹ ದೀಪ ಸಂಸ್ಥೆಯ ಶಿಕ್ಷಕರು, ಸಿಬ್ಬಂದಿಗಳು, ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮದ ಅನೇಕ ಮುಖಂಡರು, ಉಪಸ್ಥಿತರಿದ್ದರು. ಮುಂಜಾನೆಯಿಂದ ಸಂಜೆವರೆಗೂ ನಡೆದ ಉಚಿತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶೀಬೀರದಲ್ಲಿ 150ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.ಅದರಲ್ಲಿ 35 ಜನರು ಶಸ್ತ್ರ ಚಿಕಿತ್ಸೆಗೆ ಆಯ್ಕೆಗೊಂಡರು. ಅಗತ್ಯವಿದ್ದ ಫಲಾನುಭವಿಗಳಿಗೆ ಸ್ನೇಹ ದೀಪ ಸಂಸ್ಥೆಯು ಉಚಿತ ಕನ್ನಡಕಗಳನ್ನು ವಿತರಿಸಿದರು.