ಲೋಕದರ್ಶನ ವರದಿ
ಕಂಪ್ಲಿ14: ಆಧ್ಯಾತ್ಮಿಕ, ಧಾಮರ್ಿಕ ಮನೋಭಾವನೆಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಾರ್ಥಕ ಜೀವನ ಸಾಗಿಸಲು ಸಾಧ್ಯವಿದೆ. ಪ್ರತಿಯೊಬ್ಬರು ಧಮರ್ಾರ್ಥ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಹೇಳಿದರು.
ವೀರಶೈವ ಸಮಾಜದ ಮುಖಂಡ ಡಾ.ಜಗನ್ನಾಥ ಹಿರೇಮಠ ಇವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಹೆಬ್ಬಾಳದ ಬೋಳೋಡಿ ಬಸವೇಶ್ವರ ಶಿವಯೋಗಿ ಸಂಸ್ಥಾನ ಮಠದಲ್ಲಿ ಡಿ.20ರಂದು ಬೋಳೋಡಿ ಬಸವೇಶ್ವರ ಕಂತೆ ಒಡೆಯ ಶಿವಯೋಗಿಗಳ ಮಹಾರಥೋತ್ಸವ ಜರುಗುವ ನಿಮಿತ್ತ ಮಠದಲ್ಲಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ನ.19ರಂದು ಪಂಚಾಚಾರ್ಯರ ಧ್ವಜಾರೋಹಣ, ದುಗರ್ಾದೇವಿ, ಗಂಗಾದೇವಿ ಗಜಾನನ ಯುವಕ ಮಂಡಳಿಯವರಿಂದ ನದಿಯಂದ ಗಂಗೆ ಮೆರವಣಿಗೆ, ನ.20ರಂದು ಬ್ರಾಹ್ಮಿ ಮೂಹೂರ್ತದಲ್ಲಿ ಕತರ್ೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಜಂಗಮ ವಟುಗಳಿಗೆ ಅಯ್ಯಾಚಾರ ಶಿವದೀಕ್ಷೆ, ಕಗಣೇಶ, ಮೃತ್ಯುಂಜಯ, ನವಗ್ರಹ, ರುದ್ರಹೋಮ, ಚಂಡಿಹೋಮ, ಉಡಿ ತುಂಬುವ, ಮಡಿ ತೇರು ಎಳೆಯುವ ಕಾರ್ಯಕ್ರಮಗಳು, ಮಧ್ಯಾಹ್ನ 12.35ಕ್ಕೆ ಧರ್ಮ ಜಾಗೃತ ಸಭೆ ಜರುಗಲಿದೆ. ಇದೇ ಸಂದರ್ಭದಲ್ಲಿ ದಾಸನಾಳ ತಿರುಕಣ್ಣಿ ಪಾರ್ವತಮ್ಮ ಕಂತೆಪ್ಪ ಇವರಿಂದ ತುಲಾಬಾರ ಸೇವೆ ಜರುಗಲಿದೆ. ಸಂಜೆ 5ಗಂಟೆಗೆ ಮಹಾ ರಥೋತ್ಸವ ಜರುಗಲಿದೆ. ನ.21ರಂದು ಮರಿ ಕಾತರ್ಿಕೋತ್ಸವವಿದ್ದು ಸದ್ಭಕ್ತರು ಸಕಾಲದಲ್ಲಿ ಆಗಮಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಡಾ.ಜಗನ್ನಾಥ ಹಿರೇಮಠ, ಶಾರದಾ ಹಿರೇಮಠ, ಮೃತ್ಯುಂಜಯ, ಸಂಕಲ್ಪ ಹಿರೇಮಠ ಸೇರಿ ಸದ್ಭಕ್ತರು ಉಪಸ್ಥಿತರಿದ್ದರು.