ಕುಡಿಯುವ ನೀರಿನ ಪೂರೈಕೆ ತ್ವರಿತವಾಗಿ ಪೂರ್ಣಗೊಳಿಸಿ: ಬಳಿಗಾರ

ಗದಗ 15:   ಅಪಾರ ಹಣ ವೆಚ್ಚ ಮಾಡಿ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಹಾಗೂ ಮುಂಡರಗಿ ಪಟ್ಟಣಕ್ಕೆ ನದಿ ನೀರು ಪೂರೈಕೆ ಯೋಜನೆಯಡಿ ಅಲ್ಲಲ್ಲಿ ಪೈಪು ಸೋರಿಕೆ ನೀರು ಪೋಲು ಸಂಗತಿ, ಹಾಗೂ ಕೆಲವೆಡೆ ನೀರಿಗಾಗಿ ಕೆಲವರು ಈ ಕೃತ್ಯ ಎಸಗುವ ಪ್ರಕರಣಗಳು ವರದಿಯಾಗುತ್ತಿರುವುದು ನಿಜಕ್ಕೂ ಖೇದಕರ ಸಂಗತಿಯಾಗಿದೆ.  ಇವುಗಳ ತಡೆಗೆ ಸೂಕ್ತ ಕ್ರಮ ಜರುಗಿಸಿ  ಜನರಿಗೆ ಸಮರ್ಪಕ ನೀರು ಪೂರೈಕೆಗೆ ಕ್ರಮ ಜರುಗಿಸಲು ಜಿ.ಪಂ. ಅಧ್ಯಕ್ಷ ಎಸ್.ಪಿ. ಬಳಿಗಾರ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜರುಗಿದ ಮಾಸಿಕ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆ ಬರಗಾಲ ದವಡೆಯಲ್ಲಿದ್ದು ಜನರಿಗೆ ಕುಡಿಯುವ ನೀರು, ರೈತರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಕೃಷಿ ಕೂಲಿಕಾರರಿಗೆ ಉದ್ಯೋಗ ನೀಡಲು ಸಂಬಂಧಿತ ಇಲಾಖೆಗಳು ಅಗತ್ಯ ಕ್ರಮ ಕೈಗೊಳ್ಳಲು ಬಳಿಗಾರ ತಿಳಿಸಿದರು.

ಗದಗ ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಮಂಜುನಾಥ ಚವ್ಹಾಣ ಮಾತನಾಡಿ ಈಗಾಗಲೇ ಹಿಂದಿನ ವರ್ಷಗಳಲ್ಲಿ ಸಮಸ್ಯಾತ್ಮಕ ಗ್ರಾಮಗಳಲ್ಲಿ ಕೆಲವೆಡೆ ಶಾಶ್ವತ ನೀರಿನ ಪೂರೈಕೆ ಆಗುತ್ತಿದ್ದರೂ ಇನ್ನೂ ಕೆಲವೆಡೆ ಕಾಮಗಾರಿ ಪೂರ್ಣಗೊಳ್ಳಬೇಕಿದೆ.  ಅಲ್ಲದೇ ತಾಂತ್ರಿಕ ಕಾರಣಗಳಿಂದ ಗ್ರಾಮಗಳಿಗೆ ನೀರು ಪೂರೈಕೆಗೆ ತಡೆಯಾದಲ್ಲಿ ತಕ್ಷಣ ಬೇರೆ  ಮೂಲದಿಂದ ನೀರು ಪೂರೈಕೆಗೆ ಇಲಾಖೆ ಅಗತ್ಯದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಿದರು. ಗ್ರಾಮಗಳಿಗೆ ನದಿ ನೀರು ಪೂರೈಕೆ  ಯೋಜನೆಯಡಿ ನಿಮರ್ಿಸಲಾಗುತ್ತಿರುವ ಜಲಸಂಗ್ರಹ, ಟ್ಯಾಂಕರ್ ತುಂಬಿ ನೀರು ಪೋಲಾಗದಂತೆ ಅಗತ್ಯದ ನಿಯಂತ್ರಣ ವಾಲ್ವಗಳನ್ನು ಅಳವಡಿಸಲು ಹಾಗೂ ಪೈಪ್ ಲೈನ್ ಸೋರಿಕೆಗೆ ತಡೆಗೆ ಕ್ರಮ ಜರುಗಿಸಲು ತಿಳಿಸಿದರು.

ಖಜಾನೆ-2 ಪದ್ಧತಿ ಅಳವಡಿಕೆಯಿಂದ ಉಂಟಾಗುತ್ತಿರುವ ಯಾವುದೇ ಸಮಸ್ಯೆಗಳಿದ್ದರೂ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ ಅವರ ಗಮನಕ್ಕೆ ತರಲು,  ಕೃಷಿ ತೋಟಗಾರಿಕೆ ಇಲಾಖೆಗಳಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೈಕೊಳ್ಳಲಾದ ಕಾಮಗಾರಿಗಳ ಹಣ ಪಾವತಿ ವಿಳಂಬ ಕುರಿತಂತೆ ಇರುವ ಪ್ರಕರಣವಾರು ಪರಿಶೀಲಿಸಿ ಶೀಘ್ರ ಪಾವತಿಗೆ ಕ್ರಮ ಜರುಗಿಸಲು ಮಂಜುನಾಥ ಚವ್ಹಾಣ ಸೂಚಿಸಿದರು.  

ಜಿಲ್ಲೆಯಲ್ಲಿ 2018 ರ ಮುಂಗಾರು ಬೆಳೆ ಹಾನಿ ಜಂಟಿ ಸಮೀಕ್ಷೆಯನ್ನು ಜರುಗಿಸಲಾಗಿದೆ.  1,82,401 ಹೆ.ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.  ಇದಕ್ಕಾಗಿ 123.52 ಕೋಟಿ ರೂ ಇನ್ಪುಟ್ ಸಬ್ಸಿಡಿ ಪ್ರಸ್ತಾವನೆಯನ್ನು ಸಕರ್ಾರಕ್ಕೆ ಸಲ್ಲಿಸಲಾಗಿದೆ.  ರವಿವಾರ ದಿ. 18 ರಂದು ಜಿಲ್ಲೆಯ ಬರ ಅಧ್ಯಯನಕ್ಕೆ ಕೇಂದ್ರ ತಂಡ ಭೇಟಿ ನೀಡಲಿದೆ ಎಂದು ಜಂಟಿ ಕೃಷಿ ನಿದರ್ೇಶಕ ಬಾಲರೆಡ್ಡಿ ಸಭೆಗೆ ತಿಳಿಸಿದರು.

ಜಿ.ಪಂ. ಅಧ್ಯಕ್ಷ ಬಳಿಗಾರ ಅವರು ಮಾತನಾಡಿ ಬೆಳೆ ವಿಮೆ ಹಿಂದಿನ ವರ್ಷಗಳ ಕ್ಲೇಮ ಕುರಿತಂತೆ ಇನ್ನು ಕೆಲ ರೈತರಿಗೆ ಪರಿಹಾರ ದೊರೆಯದ ಪ್ರಕರಣಗಳ ಇತ್ಯರ್ಥಕ್ಕೆ ಅಗತ್ಯದ ಕ್ರಮ ಬೇಕು.  ತೋಟಗಾರಿಕೆ ಇಲಾಖೆ ರೈತರಿಗೆ ನೀಡುವ ಸಹಾಯಧನ ಸೌಲಭ್ಯ ನೀಡಿಕೆಯಲ್ಲಿ ವಿಳಂಬವಾಗುತ್ತಿರುವ ದೂರುಗಳ ನಿವಾರಣೆಗೆ ತುತರ್ು ಕ್ರಮ ಜರುಗಿಸಬೇಕು ಎಂದರು.

ಆರೋಗ್ಯ ಇಲಾಖೆಯಿಂದ ನೇಮಕಗೊಂಡ ಗುತ್ತಿಗೆ ಸಿಬ್ಬಂದಿಗಳ ಕುರಿತಂತೆ ಅಧಿಕಾರಿಗಳು ನಿಗದಿತವಾಗಿ  ಅವರ ಹಾಜರಾತಿ ಕಾರ್ಯನಿರ್ವಹಣೆ ಕುರಿತ ಅಭಿಪ್ರಾಯ ನೀಡಬೇಕು.  ಏಜನ್ಸಿಗಳಿಗೆ ನಿಗದಿತ ಅವಧಿಯಲ್ಲಿ ಹಣ ನೀಡಿದ ನಂತರ ಸಂಬಂಧಿತ ಸಿಬ್ಬಂದಿಯಿಂದ ಹಣ ಪಡೆದ ಪ್ರಮಾಣ ಪತ್ರ ಪಡೆಯುವುದು ಎಲ್ಲ ಹಣ ಸೆಳೆಯುವ ಅಧಿಕಾರಿಗಳ ಜವಾಬ್ದಾರಿ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ  ತಿಳಿಸಿದರು.

ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನವೆಂಬರ್ 17 ರವರೆಗೆ ಜಿಲ್ಲೆಯಲ್ಲಿ ನಡೆಸಲಾಗುತ್ತಿದೆ ಎಂದರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ಬಾರಾಟಕ್ಕೆ ತಿಳಿಸಿದರು.  

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಗತಿ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಆಗುವ ಆಹಾರ ಗುಣಮಟ್ಟದ ಪರೀಕ್ಷೆ ಶಿಶು ಅಬಿವೃದ್ಧಿ ಅಧಿಕಾರಿಗಳ ಹಂತದಲ್ಲಿ ಅಲ್ಲದೇ ಸಂಬಂಧಿತ ಅಂಗನವಾಡಿಗಳಲ್ಲಿಯೂ ಆಗಬೇಕು.  ಒಟ್ಟಾರೆಯಾಗಿ ಗುಣಮಟ್ಟದ ಆಹಾರ ಅಂಗನವಾಡಿಗಳಿಗೆ ಪೂರೈಕೆ ಆಗುವಂತೆ ಇಲಾಖೆ ಎಲ್ಲ ಹಂತದ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಮಂಜುನಾಥ ಚವ್ಹಾಣ ನುಡಿದರು.  

          ಸಣ್ಣ ನೀರಾವರಿ ಇಲಾಖೆಯ ಮಲಪ್ರಭಾ ನದಿ ನೀರು ಪೂರೈಕೆ ಕಾಲುವೆಗಳಲ್ಲಿ ಬೆಳೆದ ಕಸ ಕಂಟಿಗಳನ್ನು ತೆಗೆಯಲು, ಅವುಗಳ ದುರಸ್ತಿಗೆ  ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅವಕಾಶವಿದ್ದರೆ ಯಾವುದೇ ಕ್ರಮ ಜರುಗಿಸದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳು ಒಂದು ವಾರದಲ್ಲಿ ಈ ಕುರಿತು ಸಮಗ್ರ ಕ್ರಿಯಾ ಯೋಜನೆ ತಯಾರಿಸಿ ಸಲ್ಲಿಸಲು  ಹಾಗೂ ಇದುವರೆಗೆ ಇಲಾಖೆಯಿಂದ ಕೈಕೊಂಡ ಕಾಮಗಾರಿಗಳ ಭೌತಿಕ ಪರಿಶೀಲನೆ ನಡೆಸಿ ವರದಿ ನೀಡಲು  ಕಟ್ಟುನಿಟ್ಟಿನ ನಿದರ್ೇಶನ ನೀಡಿದರು. 

      ರೇಷ್ಮೆ , ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ವಿವಿಧ  ನಿಗಮಗಳು ಇಲಾಖೆಗಳು, ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆ, ಜಿ.ಪಂ. ಇಂಜನೀಯರಿಂಗ್, ಉದ್ಯೋಗ ಖಾತ್ರಿ  ಯೋಜನೆ, ಕನರ್ಾಟಕ ನೀರಾವರಿ ನಿಗಮ, ಖಾದಿ ಗ್ರಾಮೋದ್ಯೋಗ ಮಂಡಳಿಗಳ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. 

       ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ, ಯೋಜನಾಧಿಕಾರಿ ಬಿ.ಆರ್. ಪಾಟೀಲ, ವಿವಿಧ ಇಲಾಖೆ , ನಿಗಮ ಸಂಸ್ಥೆಗಳ ಅಧಿಕಾರಿಗಳು ಸಭೆಯಲ್ಲಿ  ಭಾಗವಹಿಸಿದ್ದರು.