ಧಾರವಾಡ : ಕನರ್ಾಟಕ ವಿದ್ಯಾವರ್ಧಕ ಸಂಘವು, ಕನ್ನಡ ಮತ್ತು ಮರಾಠಿ ಭಾಷಾ ಬಾಂಧವ್ಯ ಬಲಪಡಿಸಲೆಂದು ಡಾ. ಪಂಡಿತ ಅವಳೀಕರ ಅವರು ಕೊಡಮಾಡಿದ ದತ್ತಿ ಅಂಗವಾಗಿ ಏ.16ರಂದು ಸಂಜೆ 6 ಗಂಟೆಗೆ, ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ``ಆನಂದ ಕಂದ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಿದೆ.
ಪ್ರಶಸ್ತಿಗೆ ಭಾಜನರಾದ ನವಿ ಮುಂಬಯಿಯ ಸಾಹಿತಿ ಡಾ. ಮೇಧಾ ಎಂ. ಕುಲಕಣರ್ಿ ಅವರಿಗೆ, ಸಾಹಿತಿ ಧಾರವಾಡದ ಡಾ. ಜಿ. ಎಂ. ಹೆಗಡೆ ಅವರು ``ಆನಂದ ಕಂದ ಪ್ರಶಸ್ತಿ-2019'' ಪ್ರದಾನ ಮಾಡುವರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಎಸ್.ಬಿ. ಗಾಮನಗಟ್ಟಿ ಅವರು ವಹಿಸುವರು.
ಕಲಾವಿದ ಅನಿಲ ಮೇತ್ರಿ ಹಾಗೂ ಸಂಗಡಿಗರು `ಆನಂದಕಂದರ ಗೀತಗಾಯನ' ನಡೆಸಿಕೊಡುವರು.
ಸಾಹಿತಿಗಳು, ಲೇಖಕರು, ಬುದ್ದಿಜೀವಿಗಳು, ಚಿಂತಕರು, ಕಲಾವಿದರು, ತಾಯಂದಿರು, ವಿದ್ಯಾಥರ್ಿಗಳು, ಸಂಘದ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಏಪ್ರಿಲ್ ತಿಂಗಳ ದತ್ತಿ ಕಾರ್ಯಕ್ರಮ ಸಂಯೋಜಕರಾದ ಚೈತ್ರಾ ಮೋಹನ ನಾಗಮ್ಮನವರ ಅವರು ಜಂಟಿಯಾಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.