ಕ್ಯಾನ್ಸರ್ ಭಯ ಬೇಡ, ಅರಿವಿರಲಿ; ಆಯುಷ್ಯ ವೈದ್ಯ ಡಾ.ಅಶ್ವಿನಿ
ಸಿಂದಗಿ 29: ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಯಾಗಿದ್ದು, ಈ ರೋಗದ ಬಗ್ಗೆ ಭಯಪಡುವುದಕ್ಕಿಂತ ಅರಿವು ಮುಖ್ಯ ಎಂದು ಆಯುಷ್ಯ ವೈದ್ಯ ಡಾ.ಅಶ್ವಿನಿ ಹೇಳಿದರು.
ಮೋರಟಗಿ ಗ್ರಾಮದ ಕಲ್ಪವೃಕ್ಷ ಪದವಿ ಮಹಾವಿದ್ಯಾಲಯದಲ್ಲಿ (ಋಂಅ) ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗರ್ಭ ಕೊರಳಿನ ಕ್ಯಾನ್ಸರ್ ಕುರಿತ ಅರಿವು ಮೂಡಿಸುವ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಲವು ಸೆಲ್ಸ್ ಗಳು ನಮ್ಮ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚು ಬೆಳೆಯುವುದೇ ಕ್ಯಾನ್ಸರ್ ಎನ್ನಲಾಗುತ್ತದೆ. ಕ್ಯಾನ್ಸರ್ ನಲ್ಲಿ ಹಲವು ಪ್ರಕಾರಗಳಿವೆ. ಇತ್ತೀಚೆಗೆ ಕ್ಯಾನ್ಸರ್ ಹೆಚ್ಚುತ್ತಿದ್ದು, ಇದರ ಕಾರಣಗಳು ಮತ್ತು ಕ್ಯಾನ್ಸರ್ ತಡೆಯುವ ಮುಂಜಾಗ್ರತೆ ಕ್ರಮಗಳ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.
ಮಹಿಳೆಯರ ಗರ್ಭಕೋಶಕ್ಕೆ ಸಂಬಂಧಿಸಿದಂತೆ ಗರ್ಭ ಕೊರಳಿನ ಕ್ಯಾನ್ಸರ್ ಕೂಡ ಹೆಚ್ಚುತ್ತಿದೆ. ಈ ಸಮಸ್ಯೆಗೆ ಮೊದಲು ಯಾವುದೇ ಚಿಕಿತ್ಸೆ ಇರಲಿಲ್ಲ. ಸದ್ಯ ಅದನ್ನು ತಡೆಗಟ್ಟಲು ವಾಕ್ಸಿನ್ ಗಳು ಲಭ್ಯವಿದ್ದು, ಈ ಬಗ್ಗೆ ಮಹಿಖೆಯರಲ್ಲಿ ಅರಿವು ಮೂಡಿಸುವುದೇ ನಮ್ಮ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಸುರಕ್ಷಿತ ಲೈಂಗಿಕತೆ, ಆರೋಗ್ಯಕರ ಆಹಾರ ಸೇವನೆ, ರಾಸಾಯನಿಕಯುಕ್ತ ಆಹಾರ ತ್ಯಜಿಸುವುದರಿಂದ ಗರ್ಭ ಕೊರಳಿನ ಕ್ಯಾನ್ಸರ್ ತಡೆಯಲು ಸಾಧ್ಯ ಎಂದರು.ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಲವು ಪ್ರಶ್ನೆಗಳನ್ನು ಕೇಳಿ ಸಂದೇಹ ಪರಿಹರಿಸಿಕೊಂಡರು.
ಕಾರ್ಯಕ್ರಮದಲ್ಲಿ ಸಂಸ್ಥಾಪಕ ಶಿವಶರಣಗೌಡ ಬಿರಾದಾರ, ಆಡಳಿತ ಅಧಿಕಾರಿ ಎಸ್, ಎಚ್, ದುಳಬಾ, ಡಾ, ಸೋಮನಗೌಡ ಪಾಟೀಲ್, ಪ್ರಾಚಾರ್ಯ ಎ, ಬಿ, ಸಿಂದಗಿ, ಸಂಯೋಜಕರುಗಳಾದ ಪ್ರೊ, ಎಸ್, ಎಸ್, ನಿಗಡಿ, ಎಸ್, ಎಂ, ನಿಗಡಿ, ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಕಲ್ಪವೃಕ್ಷ ಸಂಸ್ಥೆ ಸಿಬ್ಬಂದಿಗಳು ಇದ್ದರು.
.