5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಅಶೊಕ ಮಣಿ ಅವರಿಗೆ ಸನ್ಮಾನ ಪತ್ರ ವಿತರಣೆ
ಮುದ್ದೇಬಿಹಾಳ, 06; ಇದೇ ದಿ, 15 ರಂದು ಪಟ್ಟಣದ ವಿಬಿಸಿ ಹೈಸ್ಕೂಲ ಆವರಣದಲ್ಲಿನ ಶ್ರೀ ಸಿದ್ದೇಶ್ವರ ವೇದಿಕೆಯಲ್ಲಿ ನಡೆಯಲಿರುವ 5 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ವಿದ್ಯಾನಗದ ಬಡಾವಣೆಯ ಹಿರಿಯ ಸಾಹಿತಿ, ನಾಟಕಕಾರ, ಕಲಾವಿಧ ನಿವೃತ್ತ ಶಿಕ್ಷಕ ಅಶೊಕ ಮಣಿ ಯವರು ಸರ್ವಾನಿಮತದಿಂದ ಆಯ್ಕೆಗೊಂಡ ಹಿನ್ನೇಲೆಯಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ ಹಾಗೂ ವಿವಿದ ಸಾಹಿತಿಗಳು ಅಭಿನಂದನಾ ಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಹಿರಿಯ ಸಾಹಿತಿ ಬಿ ಎಂ ಹಿರೇಮಠ ಅವರು ಮಾತನಾಡಿ ಈ ಹಿಂದೆ ತಾಲೂಕಿನಲ್ಲಿ ದಿವಂಗತ ಶೃಂಗಾರಗೌಡ ಪಾಟೀಲ, ದಿವಂಗತ ಅಡಿವೇಪ್ಪ ಕಡಿ, ಹಾಗೂ ಎಂಬಿ ನಾವದಗಿಯವರ ನೇತೃತ್ವದಲ್ಲಿ ಜಿಲ್ಲಾ ಹಾಗೂ ನಾಲ್ಕು ತಾಲೂಕು ಸಾಹಿತ್ಯ ಸಮ್ಮೇಳನವೂ ಅತ್ಯಂತ ಸಂಭ್ರಮ ಸಡಗರದಿಂದ ವೈಭವಪೂರಿತವಾಗಿ ನಡೆಸುವ ಮೂಲಕ ಎಲ್ಲ ಸಾಹಿತಿಗಳ ಮೆಚ್ಚಿ ಕೋಂಡಾಡಿದ್ದಲ್ಲದೇ ಇತಿಹಾಸಕ್ಕೆ ಸಾಕ್ಷೀಯಾಗಿದ್ದವೂ. ಸಧ್ಯ ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಅವರು ಯುವಕರು ಆದರೂ ಸಹಿತ ಎಲ್ಲರನ್ನು ಒಗ್ಗೂಡಿಸಿ ಭ್ರಹತ್ ಯುವ ಸಾಹಿತಿಗಳ, ಹಿರಿಯ ಸಾಹಿತಿಗಳ ಯುವಪಡೆಯೊಂದಿಗೆ ಹಿರಿಯ ಸಾಹಿತಿ ಅನುಭವಿ ಅಶೊಕ ಮಣಿಯವರನ್ನು ಸರ್ವಾಧ್ಯಕ್ಷರನ್ನಾಗಿ ಘೋಷಣೆ ಮಾಡಿರುವ ಕಾರ್ಯ ನಿಜಕ್ಕೂ ಶ್ಲಾಘನಿಯ ಜತೆಗೆ ಈ ಹಿಂದೆ ಸಮ್ಮೇಳ ಯಶಸ್ವಿಗೊಳಿಸಿದ ಎಲ್ಲ ಹಿರಿಯ ಹೆಸರಿಗಿಂತಲೂ ಒಂದು ಕೈ ಮೇಲೆನ್ನುವಂತೆ ಸಾಧನೆ ಮಾಡಿ ತೋರಿಸಿದ್ದಾರೆ ಎಂದರೆ ತಪ್ಪಾಗಲಾರದು. ಸಧ್ಯ ಎಲ್ಲರೂ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಬಾಗವಹಿಸಿ ಯಾವೂದೇ ಗೊಂದಲಕ್ಕೆ ಎಡಮಾಡಿಕೊಡದಂತೆ ಅದ್ದೂರಿ ಸಮ್ಮೇಳನಕ್ಕೆ ಸಿದ್ಧತೆ ಕೈಗೊಂಡು 5ನೇ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದರು.
ಈ ವೇಳೆ ತಾಲೂಕಾ ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಅವರು ಮಾತನಾಡಿ ಮುದ್ದೇಬಿಹಾಳ ಪಟ್ಟಣದಲ್ಲಿ ಸಾಹಿತ್ಯ ಸಮ್ಮೇಳನ ನಡೆಸಬೇಕು ಎಂದು ತಾಲೂಕಿನ ಎಲ್ಲ ಸಾಹಿತ್ಯಾಸಕ್ತರ ಕನಸಾಗಿತ್ತು ಒತ್ತಾಯವೂ ಕೂಡ ಮಾಡಿದ್ದರೂ ಈ ಹಿನ್ನೇಲೆಯಲ್ಲಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅವರ ಅಪ್ಪಣೆ ಮೇರೆಗೆ ಕೇಲವೇ ದಿನಗಳ ಹಿಂದೆ ಫೆ, 15 ರಂದು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು, ಈ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಮಾಡುವುದು ಅಷ್ಟು ಸುಲಭದ ಮಾತಾಗಿರಲಿಲ್ಲ ಬಹುದೊಡ್ಡ ಸಮಸ್ಯೆಯಾಗಿತ್ತು ಈ ಕುರಿತು ಸಾಕಷ್ಟು ಜನ ಅವರವರ ಅಭಿಪ್ರಾಯದ ಪಾತುಗಳು ಹೇಳಿದ್ದರು. ಆದರೇ ಕೊನೆಗೆ ಸಾಹಿತ್ಯದಲ್ಲಿ ಕೃಷಿ ಮಾಡಿದವರು ಜತೆಗೆ ಕನ್ನಡಕ್ಕಾಗಿ ಹಗಲಿರುಳು ಶ್ರಮಿಸಿದ ಹಿರಿಯ ಸಾಹಿತಿ ಅಶೊಕ ಮಣಿಯವರನ್ನು ಆಯ್ಕೆ ಮಾಡಬೇಕು ಎಂದು ಎಲ್ಲ ಹಿರಿಯರ, ಸಾಹಿತಿಗಳ ಅಭಿಪ್ರಾಯ ಪಡೆದು ಅಂತಿಮ ಆಯ್ಕೆ ಮಾಡಿ ಘೊಷಿಸಲಾಗಿದೆ. ಕಾರಣ ಪಟ್ಟಣದ ತಾಲೂಕಿನ ಎಲ್ಲ ಹಿರಿಯರು, ಗಣ್ಯರು, ಸಾಹಿತಿಗಳು, ಕನ್ನಡಾಭಿಮಾನಿಗಳು ಸಮ್ಮೇಳನದ ಯಶಸ್ವಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ತಾಲೂಕಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಹಿರಿಯರಾದ ವಾಯ್ ಎಚ್ ವಿಜಯಕರ, ನೇತಾಜಿ ನಲವಡೆ, ಸಿದ್ದನಗೌಡ ಬಿಜ್ಜೂರ, ಶಂಕರ ಬೇವಿನಗಿಡದ, ಜಾಹಿಂಗೀರ ಮುಲ್ಲಾ, ರಹಿಮಾನ ಬಿದರಕುಂದಿ, ಬಸವರಾಜ ನಾಲತವಾಡ, ಪ್ರಕಾಶ ನರಗುಂದ, ಶ್ರೀಶೈಲ ಹೂಗಾರ, ರುದ್ದೇಶ ಕಿತ್ತೂರ, ಎಂ ಎಂ ಬೆಳಗಲ್ಲ, ಶಿವಪುತ್ರ ಅಜಮನಿ, ಚಂದ್ರಶೇಖರ ನಾಗರಾಳ, ಬಸವರಾಜ ಕೋರಿ, ಎಚ್ ಆರ್ ಬಾಗವಾನ, ಬಸವರಾಜ ನಾಗೂರ, ಐ ಬಿ ಹಿರೇಮಠ, ಎಸ್ ಬಿ ಕನ್ನೂರ, ಬಿ ಪಿ ಪಾಟೀಲ,ಎಸ್ ಎಸ್ ಗಡೇದ, ಚಂದ್ರಶೇಖರ ಕಲಾಲ, ಹುಸೇನ ಮುಲ್ಲಾ, ಸಂಗಪ್ಪ ಮೇಲಿನಮನಿ,ಟಿ ಎನ್ ಹುನಗುಂದ, ಬಸಲಿಂಗಪ್ಪ ರಕ್ಕಸಗಿ, ಮಾಣಿಕ ದಂಡಾವತಿ, ಸೇರಿದಂತೆ ಹಲವರು ಇದ್ದರು,
ಬಾಕ್ಸ್
ಈ ಹಿಂದೆ ನಡೆದ ಎಲ್ಲ ಸಾಹಿತ್ಯ ಸಮ್ಮೇಳನದಲ್ಲಿ ನಾನು ಬಾಗವಹಿಸಿ ಯಶಸ್ವಿಗೆ ಶ್ರಮಿಸುವುದರ ಜೊತೆಗೆ ಕನ್ನಡ ತಾಯಿಯ ಸೇವೆ ಮಾಡಿ ಸೌಭಾಗ್ಯದಿಂದ ಇಂದು ನನ್ನನ್ನು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಿರಿ. ನನ್ನನ್ನು ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಅವರಿಗೆ ಪರಿಷತ್ತಿನ ಸರ್ವಪದಾಧಿಕಾರಿಗಳಿಗೆ, ತಾಲೂಕಿನ ಗಣ್ಯರಿಗೆ, ಮಹಾಮನೆಬಳಗದ ಹಿರಿಯರಿಗೆ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ.
ನಿವೃತ್ತ ಶಿಕ್ಷಕ ಹಾಗೂ ಹಿರಿಯ ಸಾಹಿತಿ, ನಾಟಕಕಾರ ಕಲಾವಿಧ ಅಶೋಕ ಮಣಿ,