ಆಫ್ರಿಕಾದ ಸಂತ ಕಾಪ್ರಿ ಜಾತ್ರೆಗೆ ಬಂದ ಭಕ್ತರು: ಸಾರಾಯಿ ಸಿಗರೇಟು ಹರಕೆ
ಕಾರವಾರ, 23 : ಕಾಳಿ ನದಿ ದಡದಲ್ಲಿನ ಕಾಪ್ರಿ ದೇವರ ಜಾತ್ರೆ ರವಿವಾರ ಭಕ್ತಿ ಸಡಗರ ದಿಂದ ನಡೆಯಿತು.ಯುಗಾದಿಗೆ ಮುನ್ನ ನಡೆಯುವ ಜಾತ್ರೆಗೆ ಬಂದ ಜನ ಕಾಪ್ರಿ ಸಂತನ ದೈವಕ್ಕೆ ಕಟ್ಟಿದ ಹರಕೆ ತೀರಿಸಿದರು. ಬಯಸಿದ ಬಯಕೆ ಹಾಗೂ ಇಚ್ಚೆಗಳು ಹರಕೆ ಕಟ್ಟಿ ನಡೆದುಕೊಂಡಲ್ಲಿ ಈಡೇರುತ್ತವೆ ಎಂಬ ನಂಬಿಕೆ ಇಲ್ಲಿನ ಜನಕ್ಕೆ ಇದೆ. ಹಾಗೆ ಜನರು ಈ ದೈವಕ್ಕೆ ಶ್ರದ್ಧೆಯಿಂದ ನಡೆದುಕೊಂಡು ಬರುವುದು ವಾಡಿಕೆ . ಹಾಗೆ ಜಾತ್ರೆಯ ದಿನ ಹರಕೆ ತೀರಿಸಿ ಸಂತೃಪ್ತರಾಗುವುದು ನಡೆದು ಬಂದಿದೆ. ಬ್ರಿಟಿಷ್ ಕಾಲದಲ್ಲಿ ಸ್ಥಾಪಿತವಾದ ಈ ದೇವಾಲಯಕ್ಕೆ ಹಲವು ಐತಿಹ್ಯಗಳಿವೆ. ಹಾಗೆ 350 ವರ್ಷಗಳಿಂದ ಕಾಪ್ರಿ ದೇವಸ್ಥಾನದ ದೈವ ಕಾಳಿ ನದಿಯ ದಡದಲ್ಲಿ ಯಾವುದೇ ಅಪಘಾತ ಆಗದಂತೆ ರಕ್ಷಣೆ ಕಾಪಾಡಿದ್ದಾನೆ ಎಂಬ ನಂಬಿಕೆ ಬಲವಾಗಿ ಇದೆ. ಅಂತೆಯೇ ಕಳೆದ ವರ್ಷದ ಅಗಸ್ಟ ನಲ್ಲಿ ಕಾಳಿ ನದಿಯ ಹಳೇ ಸೇತುವೆಯು ಕುಸಿದಾಗ ಒಂದೇ ಒಂದು ಜೀವ ಬಲಿಯಾಗಲಿಲ್ಲ. ಅದಕ್ಕೆ ಕಾಪ್ರಿ ದೇವರ ಕೃಪೆ ಕಾರಣ ಎಂದು ದೇವಾಲಯದ ಅರ್ಚಕ ವಿನಾಯಕ ನುಡಿದರು.
ದೈವದ ಇತಿಹಾಸ ಹಾಗೂ ಐತಿಹ್ಯ : ಕಾಪ್ರಿ ಎಂಬ ದೈವ ಮೂಲತಃ ಅಫ್ರಿಕಾದ ಸಂತ. ಈ ದೈವ ಮನುಷ್ಯ ಬ್ರಿಟಿಷರ ಜೊತೆ ಕಾರವಾರದಲ್ಲಿ ನೆಲೆ ನಿಂತ. ಸುತ್ತಲ ಜನರ ಕಷ್ಟಗಳಿಗೆ ನೆರವಾದ. ಪ್ರಸಿದ್ಧಿಯನ್ನು ಪಡೆದ. ಸಂತನಾದ. ಈಗಿರುವಾಗ ಒಂದು ದಿನ ಕಣ್ಮರೆಯಾದ. ಸ್ಥಳೀಯರೊಬ್ಬರ ಕನಸಲ್ಲಿ ಬಂದು ದೇವಸ್ಥಾನ ನಿರ್ಮಿಸಿಲು ಸೂಚಿಸಿದ. ಅಂದಿನಿಂದ ಜನರು ,ಭಕ್ತರು ಕಾಪ್ರಿಯನ್ನು ಪೂಜಿಸುತ್ತಾರೆ. ಕ್ರಿಶ್ಚಿಯನ್ನರು ಕ್ಯಾಂಡಲ್ ಹಚ್ಚಿದರೆ, ಹಿಂದೂಗಳು ಹೂ ಹಣ್ಣು ಕಾಯಿ ಹಚ್ಚಿ ದೀಪ ಬೆಳಗುತ್ತಾರೆ. ವಿಶೇಷ ಅಂದರೆ ಈ ದೈವಕ್ಕೆ ಮದ್ಯ ಅರೆ್ಣ ಹಾಗೂ ಕೋಳಿ ಬಲಿ, ಸಿಗರೇಟು ಆರತಿ ಸಹ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ನಡೆಯುತ್ತದೆ. ಈ ಸಂಪ್ರದಾಯ ಎರದು ಶತಕಗಳಿಂದ ನಡೆದು ಬಂದಿದೆ. ನಾಲ್ಕು ತಲೆ ಮಾರಿನ ಜನ ಕಾಪ್ರಿ ಸಂತನ ಬಗ್ಗೆ ಹಲವು ಜನಪದ ಕತೆಗಳನ್ನು ಕಟ್ಟಿದ್ದಾರೆ. ಆ ಕತೆಗಳು ಜನಜನಿತವಾಗಿವೆ. ಕಾಪ್ರಿ ಎಂಬ ಸಂತ ಈಗಲೂ ಜನರ ಮನದಲ್ಲಿ ಪ್ರಬಲ ದೈವವಾಗಿ ಉಳಿದುಕೊಂಡಿದ್ದಾನೆ. ಕೋಡಿಭಾಗ ಅಳ್ವೆವಾಡದ ಜನರ ಜೊತೆಗೆ ಕಾರವಾರ, ಸುತ್ತಲ ಹಳ್ಳಿ ಜನರು ಹಾಗೂ ಮುಂಬಯಿ, ಗೋವಾದಿಂದ ಸಹ ಕಾಪ್ರಿ ದೈವದ ಭಕ್ತರು ಜಾತ್ರೆ ಸಮಯದಲ್ಲಿ ಅಗಮಿಸಿ ಹರಕೆ ತೀರಿಸಿದರು.ದೈವದ ನಂಬಿಕೆ ನಿಜ:ರವಿವಾರ ನಡೆದ ಜಾತ್ರೆಯಲ್ಲಿ ಹರಕೆ ಅರ್ಿಸಿದ ಸ್ನೆಹಲ್ ಕೊಪ್ಪಿಕರ್ ಗೋವಾ ದಿಂದ ಆಗಮಿಸಿ ಜಾತ್ರೆಯಲ್ಲಿ ಭಾಗವಹಿಸಿದ್ದರು . ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕುಟುಂಬದ ಕಷ್ಟ ಪರಿಹಾರಕ್ಕೆ ಹರಕೆ ಹೊತ್ತಿದೆ. ದೈವದಲ್ಲಿ ನಂಬಿಕೆ ಇಟ್ಟಿದ್ದೆ .ಕಾಪ್ರಿ ದೇವರು ಕುಟುಂಬದ ಕಷ್ಟ ಬಗೆ ಹರಿಸಿದ. ತಪ್ಪದೆ ಜಾತ್ರೆಗೆ ಬಂದು ಹರಕೆ ತೀರಿಸಿದೆ ಎಂದರು.ರವಿವಾರ ಬೆಳಗಿನಿಂದ ಜನರು ಕಾಪ್ರಿ ದೇವರ ಆರಾಧನೆಯಲ್ಲಿ ತೊಡಗಿದ್ದರು. ನಾಳೆ ದೇವರ ಊಟ ಸಹ ಇದ್ದು, ಹಲವು ಭಕ್ತರು ಪ್ರಸಾದ ದಾಸೋಹದಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ವರ್ಷದಂತೆ ಕಾಪ್ರಿ ಎಂಬ ಆಫ್ರಿಕಾ ಸಂತನ ಜಾತ್ರೆ ಕಳೆಗಟ್ಟಿತ್ತು. ಸಾವಿರಾರು ಜನರು ಜಾತ್ರೆಯಲ್ಲಿ ಭಾಗವಹಿಸಿದ್ದರು.ಬಾಕ್ಸ ....*ಜಾತ್ರೆಯ ಸಂದರ್ಭಗಳಲ್ಲಿ ಬಹುತೇಕ ದೈವಗಳಿಗೆ ಹಣ್ಣು, ಹಂಪಲು ಅರೆ್ಣ ಸಹಜ.ಜೊತೆಗೆ ದೈವಕ್ಕೆ ಇಷ್ಟದ ತಿಂಡಿ, ತಿನಿಸುಗಳನ್ನು ಇಡುತ್ತಾರೆ. ದೈವಕ್ಕೆ ಹೆಚ್ಚಾಗಿ ಹಾಲು ತುಪ್ಪದಿಂದ ಅಭಿಷೇಕವನ್ನು ಮಾಡಿ, ತುಪ್ಪದ ದೀಪ ದಿಂದ ಆರತಿ ಮಾಡಲಾಗುತ್ತದೆ. ಆದರೆ ಕಾಪ್ರಿ ಎಂಬ ಸಂತನಿಗೆ ,ದೈವಕ್ಕೆ ಮತ್ತೇರಿಸುವ ಮದ್ಯದಿಂದಲೇ ಅಭಿಷೇಕ, ಬೀಡಿ-ಸಿಗರೇಟ್‌ನಿಂದಲೇ ಆರತಿಯನ್ನು ಮಾಡ್ತಾರೆ. ಕಾರಣ ಸಂತ ಕಾಪ್ರಿ ಮಧ್ಯರಾಧನೆ ಮಾಡುತ್ತಿದ್ದರಂತೆ.*