ಕೊಪ್ಪಳ 23: ಖುಷಿಯಿಂದ ಕೃಷಿ ಮಾಡುವ ಶೂನ್ಯ ಬಂಡವಾಳದ ಕೃಷಿ ಕಾಮಧೇನು ಶೂನ್ಯ ಬಂಡವಾಳದ ನೈಸಗರ್ಿಕ ಕೃಷಿ ಪದ್ಧತಿಯಾಗಿದ್ದು, ಗವಿಸಿದೇಶ್ವರ ಜಾತ್ರೆಯಲ್ಲಿ ಕೃಷಿ ಇಲಾಖೆಯ ಪ್ರಾತ್ಯಕ್ಷಿಕೆಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಶೂನ್ಯ ಬಂಡವಾಳದ ನೈಸಗರ್ಿಕ ಕೃಷಿ ಪದ್ಧತಿಯನ್ನು ಮೊದಲ ಭಾರಿಗೆ ಸುಭಾಸ್ ಪಾಳೆಕರವರು ಅಭಿವೃದ್ಧಿಪಡಿಸಿದರು. 36*36 ಚದುರ ಅಡಿಗಳಲ್ಲಿ ಮಾದರಿಯ ಯೋಜನೆಯನ್ನು ಅಭಿವೃದ್ಧಿಪಡಿಸಿದರು. ಇದರಲ್ಲಿ ಐದು ಸಾಲಿನ ತೋಟವನ್ನು ಚಿಕ್ಕ ಮಾದರಿಯಾಗಿ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಕೃಷಿ ಇಲಾಖೆಯಿಂದ ಪ್ರದಶರ್ಿಸಲಾಗಿದೆ. ನಾಲ್ಕು ಗಿಡಗಳಾದ ಮಾವು, ಹುಣಸೆ, ಗೋಡಂಬಿ, ನೇರಳೆ ಇವುಗಳನ್ನು ಹಾಗೂ ಮದ್ಯ ಭಾಗದಲ್ಲಿ 1 ಲಿಂಬೆ, ಇಪ್ಪತ್ತು ಪಪ್ಪಾಯಿ ಸಸಿಗಳು, 8 ಸೀತಾಫಲ, 12 ನುಗ್ಗೆ, 12 ಅಂಜೂರ, 72 ತರಕಾರಿ ಸಸಿಗಳಾದ ಕ್ಯಾಬೀಜ, ಟೊಮೆಟೊ, ಬದನೆ, ಮೆಣಸಿನ ಕಾಯಿ ಹಾಗೂ 20 ಸಜ್ಜೆ ಮುಸುಕಿನ ಜೋಳ, 144 ಅಲಸಂದಿ, ತೊಗರಿ, ಕಡಲೆ, 648 ಅರಿಷಿಣ ಶುಂಠಿ ಈ ಎಲ್ಲ ಸಸಿಗಳನ್ನು ಅಳವಡಿಸಿಕೊಂಡು ಸುತ್ತ ಅರಣ್ಯ ಸಸಿಗಳಾದ ಸಿಲ್ವರೋಕ್, ಬೇವು, ಒಂದು ಬದುವಿನಲ್ಲಿ ಕರಿಬೇವು ಇವುಗಳನ್ನು 50 ಸಸಿಗಳನ್ನು ಬದುವಿನ ಸುತ್ತ ಹಾಕಲಾಗಿದೆ.
ಈ ಪದ್ಧತಿಯನ್ನು ಈಗಾಗಲೆ ಲಿಂಗಸೂರು ತಾಲೂಕಿನ ಶರಣೇಗೌಡರು ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಕನಕಗಿರಿಯ ಚಂದ್ರಶೇಖರ ಬೆಳ್ಳೊಳ್ಳಿಯವರು ಸಹ ಈ ಪ್ರಯೋಗ ಮಾಡಿ ಯಶಸ್ವಿಯಾಗಿದ್ದು, ಇವರ ಅನುಭವದಂತೆ 1063 ಸಸಿಗಳು ಶೂನ್ಯ ಬಂಡವಾಳದ ನೈಸಗರ್ಿಕ ಕೃಷಿ ಪದ್ಧತಿಯಲ್ಲಿ ಅಳವಡಿಕೆಯಾಗುತ್ತವೆ. ಇದನ್ನೇ ಸಾವಯವ ಪ್ರಮಾಣ ಪತ್ರವನ್ನು ಪಡೆದು ಮಾರಾಟ ಮಾಡಿದರೆ ಅಧಿಕ ಲಾಭವನ್ನು ಗಳಿಸಬಹುದು. ಇಲ್ಲಿ ಹೆಚ್ಚು ವ್ಯವಸಾಯಕ್ಕೆ ಕಚರ್ು ಮಾಡದೆ ಇದನ್ನು ಕೃಷಿಹೊಂಡದ ನೀರನ್ನು ಸಹಾ ಬಳಸಿ ಮಳೆ ಆಧಾರಿತ ಕೃಷಿಯಲ್ಲು ಮಾಡಬಹುದು.
ರೈತರಿಗೆ ಇದು ಒಂದು ಖುಷಿ ನೀಡುವ ಕೃಷಿ ಆಗಿದೆ ಒಂದು ಕುಟುಂಬವನ್ನು ಸಲುಹುವ ವರಮಾನವನ್ನು ನೀಡುವ ಆರೋಗ್ಯವನ್ನು ಕಾಪಾಡುವ ಸಂಜೀವಿನಿಯಾಗಿದೆ. ಕೇವಲ ಇಲ್ಲಿ ನೈಸಗರ್ಿಕ ಪದ್ಧತಿಯಲ್ಲಿ ಜೀವಾಮೃತವನ್ನು ಬಳಸಿ ಬೆಳೆ ತೆಗೆಯುವದು, ಕೃಷಿ ತ್ಯಾಜ್ಯವನ್ನೇ, ಕಸವನ್ನೇ ಇಲ್ಲಿ ಹೊದಿಕೆಯಾಗಿ ಬಳಸುವದು, ಶೂನ್ಯ ಬಂಡವಾಳದಲ್ಲಿ ವರಮಾನವನ್ನು ನೀಡುವ ರೈತರ ಕೃಷಿ ಕಾಮಧೇನು. ಈ ವರ್ಷದ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಕೊಪ್ಪಳ ಕೃಷಿ ಇಲಾಖೆಯು ಸಾವಯವ ಭಾಗ್ಯ ಯೋಜನೆಯಡಿಯಲ್ಲಿ ಕಾಂಪೊಸ್ಟ್ ತಯಾರಿಕೆ, ಎರೆಗೊಬ್ಬರ ತಯಾರಿಕೆ, ಜೀವಾಮೃತಗಳ ಕುರಿತು ಪ್ರಾತ್ಯಕ್ಷೀಕೆಯನ್ನು ಕೈಗೊಳ್ಳಲಾಗಿದೆ. ರಾಯಚೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಕೃಷಿ ಬೆಳೆಗಳಲ್ಲಿ ತಳಿಗಳನ್ನು ಹಾಗೂ ಜೈವಿಕ ಗೊಬ್ಬರಗಳನ್ನು ಕೃಷಿ ಯಾಂತ್ರಿಕರಣದ ಮಾಹಿತಿಯನ್ನು ರೈತರಿಗೆ ನೀಡಲಾಯಿತು. ಮೀನುಗಾರಿಕೆ ಇಲಾಖೆಯವರು ಮೀನುಗಳ ತಳಿಗಳ ಪ್ರದರ್ಶನವನ್ನು ಮಾಡಲಾಯಿತು. ಅರಣ್ಯ ಇಲಾಖೆಯವರು ಜೈವಿಕ ಇಂದನ ಸಸ್ಯಗಳ ಕುರಿತು ಮಾಹಿತಿ ನೀಡಿದರು. ಅಲ್ಲದೇ ಸಾವಯವ ವಸ್ತುಗಳು ಹಾಗೂ ಸಿರಿದಾನ್ಯಗಳನ್ನು ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಇದರಿಂದ ಜಿಲ್ಲೆಯ ಕೃಷಿಕರಿಗೆ ತುಂಬಾ ಸಹಕಾರಿಯಾಗಿದೆ.
ಸಾಂಪ್ರದಾಯಿಕ ರೈತರ ಜೀವನ ಪದ್ಧತಿ ಸಿರಿಧಾನ್ಯಗಳ ಸುಗ್ಗಿಯ ಹಬ್ಬ ರೈತರ ಸುಗ್ಗಿಯ ಸೊಗಡನ್ನು ಪ್ರದಶರ್ಿಸಲಾಯಿತು. ಮಣ್ಣು ಮತ್ತು ನೀರಿನ ಸಂರಕ್ಷಣೆಯ ಜಲಾನಯನದ ಮಾದರಿ ಕಿರು ಜಲಾನಯನ ಹಾಗೂ ಸುಜಲಾ ಕಿರು ಜಲಾನಯನದ ಮಾದರಿಯನ್ನು ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಪ್ರದಶರ್ಿಸಲಾಗಿದ್ದು, ಕೃಷಿ ಇಲಾಖೆಯ ಮಾದರಿಯ ಕಿರು ಪ್ರಾತ್ಯಕ್ಷಿಕೆಗಳ ಪ್ರಯೋಗ ತಾಕುಗಳ ರಚನೆಯಾಗಿವೆ.
ಜಂಟಿ ಕೃಷಿ ನಿದರ್ೇಶಕರಾದ ಶಬಾನಾ ಶೇಖ, ಉಪ ಕೃಷಿ ನಿದರ್ೇಶಕ ವೀರೇಶ ಹುನುಗುಂದ ಸೇರಿದಂತೆ ವಿವಿಧ ತಾಲೂಕುಗಳ ಸಹಾಯಕ ಕೃಷಿ ನಿದರ್ೇಶಕರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ರೈತ ಅನುಗಾರರು, ರಾಷ್ಟ್ರೀಯ ಆಹಾರ ಬಧ್ರತಾ ಅಭಿಯಾನ ಯೋಜನೆಯ ಸಿಬ್ಬಂದಿಗಳು ಕಾರ್ಯವನ್ನು ನಿರ್ವಹಿಸಿ ಕೃಷಿ ಪ್ರಾತ್ಯಕ್ಷಿಕೆಗಳ ಪ್ರದರ್ಶನವನ್ನು ಯಶಸ್ವಿಗೊಳಿಸಿದರು.