ವಿಜಯಪುರ 08: ವಿಜಯಪುರ ಜಿಲ್ಲೆಯ 2ನೇ ಅತೀ ದೊಡ್ಡ ಕೆರೆಯಾದ ಜಂಬಗಿ, ಆಹೇರಿ ಗ್ರಾಮದ ಕೆರೆಗೆ ನೀರು ತುಂಬಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಮಹಾದೇವಪ್ಪ ಶಿ. ತೇಲಿ ಮಾತನಾಡಿ, ವಿಜಯಪುರ ಜಿಲ್ಲೆಯ ಜಂಬಗಿ-ಆಹೇರಿ ಗ್ರಾಮದ ಜಿಲ್ಲೆಯ 2ನೇ ಅತೀ ದೊಡ್ಡ ಕೆರೆಯಾಗಿದ್ದು, ಇದನ್ನು ಸಂಪೂರ್ಣ ತುಂಬಿಸಬೇಕು ಹಾಗೂ ಅಕ್ರಮವಾಗಿ ನೀರು ಪೋಲ್ ಆಗುವುದನ್ನು ತಡೆಗಟ್ಟಿ ಕೆರೆ ತುಂಬಿಸುವ ಕಾರ್ಯ ಆಗಬೇಕು. ಅಂಕಲಗಿ, ಜಂಬಗಿ, ಆಹೇರಿ, ಹೊನ್ನಳ್ಳಿ, ಹುಣಶ್ಯಾಳ ಮತ್ತು ನಾಗಠಾಣ ಈ ಭಾಗದ ಎಲ್ಲಾ ರೈತರಿಗೆ, ಜನ-ಜಾನುವಾರುಗಳಿಗೆ ಕುಡಿಯುವ ನೀರು ಅವಶ್ಯಕವಾಗಿದ್ದು, ಜಲ ಮೂಲಗಳಿಗೆ ನೀರು ವೃದ್ಧಿಯಾಗಬೇಕು. 2025 ನೇ ಸಾಲಿನ ಎರಡು ತಿಂಗಳ ಹಿಂದೆ ಕೆರೆಗೆ ಬಿಟ್ಟದ್ದ ನೀರು ಕೆರೆಗೆ ಬಂದಿರುವುದಿಲ್ಲ ಅರ್ಧದಲ್ಲೇ ನೀರು ಪೋಲ್ ಆಗಿದ್ದು, ಕೆರೆಗೆ ತಲುಪಿರುವುದಿಲ್ಲ. ಆದ ಕಾರಣ ನೀರು ಪೋಲಾಗುವುದನ್ನು ತಡೆಗಟ್ಟಿ ಈ ವರ್ಷ ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಇಲ್ಲಿಯವರೆಗೆ ಕೆರೆಗೆ ನೀರು ಹರಿಸಿರುವುದಿಲ್ಲ, ತಕ್ಷಣ ನೀರಿನ ಆಹಾಕಾರವನ್ನು ತನ್ನಿಸಬೇಕೆಂದು ಸಂಬಂದಿಸಿದ ಅಧಿಕಾರಿಗಳಿಗೆ ಸೂಚಿಸಿ ಕೆರೆ ತುಂಬಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಸಂಚಾಲಕರಾದ ರಾಜೇಸಾ ನದಾಫ್, ಅಂಕಲಗಿ ಗ್ರಾಮ ಘಟಕದ ಖಜಾಂಚಿ ನಜೀರ ನದಾಫ್, ತಾಲೂಕ ಸಮೂಹ ಮಾದ್ಯಮ ಪ್ರತಿನಿಧಿ ಜಯಸಿಂಗ ರಜಪೂತ, ತೌಸೀಪ್ ಎಲ್. ಮುಲ್ಲಾ, ಟಿ.ಎಲ್. ಮುಲ್ಲಾ, ಸಂತೋಷ ಛಲವಾದಿ, ರಫೀಕ ನದಾಫ್, ಹಣಮಂತ ವಾಲಿಕಾರ ಮುಂತಾದವರು ಇದ್ದರು.