ಕಿರ್ಲೋಸ್ಕರ್ ಕಾರ್ಖಾನೆಯಿಂದ ಇನ್ನರ್ ವೀಲ್ ಕ್ಲಬ್ ದತ್ತಕ ಶಾಲೆಗೆ ನೀರು ಶುದ್ದೀಕರಣ ಯಂತ್ರ ವಿತರಣೆ
ಕೊಪ್ಪಳ 04 : ಶಿಕ್ಷಣ ಮತ್ತು ಸಮುದಾಯ ಕಲ್ಯಾಣಕ್ಕಾಗಿ, ಕಿರ್ಲೋಸ್ಕರ್ ಇಂಡಸ್ಟ್ರೀಸ್ ಲಿಮಿಟೆಡ್, ಕೊಪ್ಪಳ, ರೂ.2,00,000 ಮೌಲ್ಯದ ವಾಣಿಜ್ಯ ಆರ್ ಓ,ನೀರಿನ ಶುದ್ಧೀಕರಣ ಯಂತ್ರವನ್ನು ಇನ್ನರ್ ವೀಲ್ ಕ್ಲಬ್ ಆಫ್ ಕೊಪ್ಪಳದ ದತ್ತಕ ಸಿಪಿಎಸ್ ಶಾಲೆಗೆ ಜನವರಿ 1, 2025 ರಂದು ಹೊಸ ವರ್ಷದ ಪ್ರಯುಕ್ತ ದಾನ ವಾಗಿ ನೀಡಲಾಗಿದೆ . ಈ ಶುದ್ಧೀಕರಣ ಯಂತ್ರದ ಸ್ಥಾಪನೆಯಿಂದ 315 ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ಸ್ವಚ್ಛ ಶುದ್ಧ ಕುಡಿಯುವ ನೀರನ್ನು ಲಭ್ಯಗೊಳಿಸಲು ಸಹಾಯವಾಗಿದೆ.ಇದಕ್ಕೂ ಮುನ್ನ, ಕಿರ್ಲೋಸ್ಕರ್ ಇಂಡಸ್ಟ್ರೀಸ್ ಶಾಲೆಗೆ 25 ಬೆಂಚುಗಳನ್ನು ದಾನ ಮಾಡಿದ್ದು, ವಿದ್ಯಾರ್ಥಿಗಳ ಪಾಠ ವಾತಾವರಣವನ್ನು ಸುಧಾರಿಸಲು ಅನುಕೂಲ ಮಾಡಿಕೊಟ್ಟಿತ್ತು. ಶಿಕ್ಷಣ ಹಾಗೂ ಸಮುದಾಯ ಅಭಿವೃದ್ಧಿಗಾಗಿ ಕಿರ್ಲೋಸ್ಕರ್ ಇಂಡಸ್ಟ್ರೀಸ್ನ ನಿರಂತರ ಕೊಡುಗೆ ಶ್ಲಾಘನೀಯವಾಗಿದೆ. ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಬಣ್ಣಿಸಿದರು,ಶಾಲೆಯಲ್ಲಿ ನೀರು ಶುದ್ದೀಕರಣ ಯಂತ್ರ ಸ್ಥಾಪನೆ ಮಾಡುವ ಕಾರ್ಯಕ್ರಮದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳಾದ ಸುಜಾತಾ ಪಟ್ಟಣಶೆಟ್ಟಿ ನಾಗವೇಣಿ ಗರೂರು ಅಲ್ಲದೆರೋ ಹಿತ್ ಅಗರವಾಲ್. ಗುರುರಾಜ ಹೆಚ್ಚ ಎಸ್ ಉಪಸ್ಥಿತರಿದ್ದು ಮಹತ್ವದಾಯಿ ಕಾರ್ಯಕ್ರಮದ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರುಆರೋಗ್ಯ ಹಾಗೂ ಶಿಕ್ಷಣ ಅಭಿವೃದ್ಧಿಗಾಗಿ ಮಹತ್ವದ ಯೋಜನೆಈ ಮಹತ್ವದ ಯೋಜನೆಯಿಂದ ಇನರ್ ವೀಲ್ ಕ್ಲಬ್ ಆಫ್ ಕೊಪ್ಪಳದ ಸಮಾಜ ಸೇವಾ ಕಾರ್ಯಗಳು ಮತ್ತಷ್ಟು ಬಲಪಡಿತ್ತಿದ್ದು, ಸ್ವಚ್ಛ ಕುಡಿಯುವ ನೀರಿನ ಲಭ್ಯತೆ ಮೂಲಕ 315 ವಿದ್ಯಾರ್ಥಿಗಳ ಆರೋಗ್ಯ ಮತ್ತು ಕಲಿಕೆಯ ಗುಣಮಟ್ಟ ಹೆಚ್ಚಾಗಲು ಸಹಾಯವಾಗಿದೆ. ಎಂದು ಶಿಕ್ಷಕ ವರ್ಗದವರು ಕರ್ತೃಘ್ನತೆ ಸಲ್ಲಿಸಿದರುಇನರ್ ವೀಲ್ ಕ್ಲಬ್ ಆಫ್ ಕೊಪ್ಪಳವು ಕಿರ್ಲೋಸ್ಕರ್ ಇಂಡಸ್ಟ್ರೀಸ್ ಲಿಮಿಟೆಡ್ಗೆ ಅವರ ಉತ್ಸಾಹಭರಿತ ಬೆಂಬಲಕ್ಕಾಗಿ ಹಾಗೂ ಈ ಸಮಾಜಮುಖಿ ಕಾರ್ಯವನ್ನು ಯಶಸ್ವಿಗೊಳಿಸಿದ ಎಲ್ಲಾ ಸದಸ್ಯರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸುವೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಹೇಳಿದರು.