ಧಾರವಾಡ: ಮಕ್ಕಳು ಈ ದೇಶದ ಆಸ್ತಿ ಸಂಪತ್ತು. ಮಕ್ಕಳು ತಮ್ಮಲ್ಲಿರುವ ಸೂಪ್ತ ಪ್ರತಿಭೆಗಳನ್ನು ಹೊರ ಹಾಕುವುದು ಅವಶ್ಯಕ. ಇಂದಿನ ಕಾಲದಲ್ಲಿ ಮಕ್ಕಳು ಟಿ.ವಿ, ಮೊಬೈಲ್ ಬಳಕೆಯಲ್ಲಿಯೇ ತಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂಥ ಪ್ರವೃತ್ತಿ ಹೋಗಲಾಡಿಸಬೇಕು. ಸ್ಪಧರ್ೆಗಾಗಿ ದೊರೆತ ಇಂಥ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಯಾವುದೇ ಒಂದು ಸ್ಪಧರ್ೆಯಲ್ಲಿ ಭಾಗವಹಿಸಬೇಕಾದರೆ ಆಸಕ್ತಿಯೊಂದಿಗೆ ಪೂರ್ವ ತಯಾರಿ ಇರಬೇಕು. ಮತ್ತು ಸ್ಪಧರ್ೆಯ ನಿಯಮಗಳನ್ನು ಪಾಲಿಸಬೇಕು ಸ್ಪಧರ್ೆಯಲ್ಲಿ ಸೋಲು ಗೆಲವು ಮುಖ್ಯವಲ್ಲ ಸೋಲೆ ಗೆಲುವಿನ ಸೋಪಾನ, ಎಂದು ಧಾರವಾಡ ವಿದ್ಯಾರಣ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಸವಿತಾ ಕುಸುಗಲ್ ತಿಳಿಸಿದರು.
ಜಿಲ್ಲಾ ಬಾಲಭವನದ ವತಿಯಿಂದ ಜಿಲ್ಲಾ ಬಾಲಭವನದಲ್ಲಿ ದಿ.03ರಂದು ಏರ್ಪಡಿಸಲಾತದ್ದ 2018-19 ನೇ ಸಾಲಿನ ಜಿಲ್ಲಾ ಮಟ್ಟದ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.
ಸಭೆಯ ಮುಖ್ಯ ಅತಿಥಿಗಳಾದ ಕೆ.ಎಚ್. ನಾಯಕ ರವರು ಶಿಬಿರದ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಮಕ್ಕಳಲ್ಲಿ ಚಿತ್ರಕಲೆ, ಜೇಡಿಮಣ್ಣಿನ ಕಲೆ, ಕರಕುಶಲ ಕಲೆ, ಕಥೆ, ಕವನ, ಪ್ರಬಂಥ, ಸೃಜನಾತ್ಮಕ ಪ್ರದರ್ಶನ ಕಲೆ ಇಂಥಹ ಅನೇಕ ಕಲೆಗಳಿರುತ್ತವೆ ಅವುಗಳನ್ನು ಹೊರಹಾಕಲು ಈ ವೇದಿಕೆ ತುಂಬಾ ಅವಶ್ಯಕ, ಮಕ್ಕಳು ಸ್ಪಧರ್ೆಯಲ್ಲಿ ಭಾಗವಹಿಸುವುದು ತುಂಬಾ ಮುಖ್ಯ. (ರಾಜ್ಯಮಟ್ಟಕ್ಕೆ) ಜಿಲ್ಲಾ ಮಟ್ಟದಿಂದ ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ವಿಜಯಗಳಿಸಲೆಂದು ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದರ್ೆಶಕ ಬಸವರಾಜ ವರವಟ್ಟಿ ವಹಿಸಿ ಮಾತನಾಡಿ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ನೀವೆಲ್ಲರೂ ತಾಲೂಕು ಮಟ್ಟದ ಸ್ಫಧರ್ೆಯಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದೀರಿ, ಜೀವನ ತುಂಬಾ ವಿಶಾಲವಾಗಿದೆ, ಅಷ್ಟೆ ಗುರಿಯು ಮುಖ್ಯ ಎಂದು ತಿಳಿಸಿದರು. ಜೊತೆಗೆ ನಿಣರ್ಾಯಕರು ಯಾವುದೇ ಪಕ್ಷ ಭೇದವಿಲ್ಲದೇ ಸ್ಪಧರ್ೆಯಲ್ಲಿ ನಿಮ್ಮನ್ನು ಸೂಕ್ತ ರೀತಿಯಲ್ಲಿ ಆಯ್ಕೆ ಮಾಡುತ್ತಾರೆ. ಮತ್ತು ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಮಕ್ಕಳು ಸ್ಫೂತರ್ಿಯಿಂದ ರಾಜ್ಯ ಮಟ್ಟದ ಕಲಾಶ್ರೀ ಸ್ಪಧರ್ೆಯಲ್ಲಿ ಭಾಗವಹಿಸಿ ವಿಜಯಶಾಲಿಗಳಾಗಲೆಂದು ಹಾರೈಸಿದರು.
ಇಲಾಖೆಯ ನಿರೂಪಣಾಧಿಕಾರಿ ಡಾ. ಎಚ್.ಎಚ್.ಕುಕನ್ರರ, ಮಕ್ಕಳ ಸಾಹಿತಿ ಕೆ.ಎಚ್.ನಾಯಕ್, ಪತ್ರಕರ್ತ ರವಿ ಕಗ್ಗಣ್ಣವರ ಸಭೆಯಲ್ಲಿ ಉಪಸ್ಥಿತರಿದ್ದರು.
ಧಾರವಾಡ ಜಿಲ್ಲೆಯ 6 ತಾಲೂಕುಗಳಿಂದ ಮಕ್ಕಳು ಸೃಜನಾತ್ಮಕ ಕಲೆ, ಸೃಜನಾತ್ಮಕ ಬರವಣಿಗೆ, ಸೃಜನಾತ್ಮಕ ಪ್ರದರ್ಶನ ಕಲೆ, ವಿಜ್ಞಾನದಲ್ಲಿ ನೂತನ ಆವಿಷ್ಕಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಥಮ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟದಲ್ಲಿ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರದಲ್ಲಿ ಭಾಗವಹಿಸಿದ್ದರು.
ಮಧ್ಯಾಹ್ನ 4ಗಂಟೆಗೆ ಸ್ಪಧರ್ೆಯಲ್ಲಿ ಆಯ್ಕೆಯಾದ ಮಕ್ಕಳಿಗೆ ಬಹುಮಾನ ವಿತರಣೆಯ ಸಮಾರೋಪ ಸಮಾರಂಭ ನೆರವೇರಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದರ್ೆಶಕ ಬಸವರಾಜ ವರವಟ್ಟಿ ಇವರು ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು. ಶಿಬಿರದ ನಿಣರ್ಾಯಕರಾಗಿ ವಿಜಯ ದೊಡಮನಿ, ಗಂಗಾ ಕಾಲೆನವರ, ಪ್ರಕಾಶ ಮಾಧನಭಾವಿ, ಪ್ರಭು ಕುಂದರಗಿ, ಪ್ರೇಮಾನಂಧ ಶಿಂಧೆ ಕಾರ್ಯ ನಿರ್ವಹಿಸಿದರು. ಮಂಜುನಾಥ ಕುಂಬಾರ ಸ್ವಾಗತಿಸಿದರು. ತ್ರಿವೇಣಿ ಎಸ್. ಮುರಗಿ ನಿರೂಪಿಸಿದರು. ಕಮಲಾಪೂರ ವಂದಿಸಿದರು.
ಜಿಲ್ಲಾಮಟ್ಟದ ಕಲಾಶ್ರೀ ಸ್ಪಧರ್ೆಯಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾಥರ್ಿಗಳು
ಸೃಜನಾತ್ಮಕ ಕಲೆಯಲ್ಲಿ ನವಲಗುಂದ ಆರ್.ಜಿ.ಎಮ್.ಸಿ ಹೈಸ್ಕೂಲ್ನ ಪ್ರಜ್ವಲ್ ಪಾಟೀಲ, ಬೆಂಗೇರಿ ರೋಟರಿ ಹೈಸ್ಕೂಲನ ಬಸವರಾಜ ನರಸಾಪೂರ, ಸೃಜನಾತ್ಮಕ ಬರವಣಿಗೆಯಲ್ಲಿ ಸುಳ್ಳ ಶಿವಾನಂದ ಭಾರತಿ ಮಾಧ್ಯಮಿಕ ಶಾಲೆಯ ಕಾವ್ಯಾ ವಂಟಿ, ನವಲಗುಂದ ಜಗದ್ಗುರು ಅಜಾತನಾಗಲಿಂಗಸ್ವಾಮಿ ವಿದ್ಯಾಪೀಠ ಪ್ರೌಢಶಾಲೆಯ ಗಾಯತ್ರಿ ಪತ್ತಾರ, ಸೃಜನಾತ್ಮಕ ಪ್ರದರ್ಶನ ಕಲೆಯಲ್ಲಿ ಉಣಕಲ್ ಜೆ.ಎಸ್.ಎಸ್ ಶಾಲೆಯ ರಕ್ಷಾ ಆರ್. ಜೋಶಿ, ಹುಬ್ಬಳ್ಳಿ ಕೆ.ವಿ.ನಂ-1 ಶಾಲೆಯ ಶಶಾಂಕ ಪುಟ್ಟಪ್ಪನವರ, ವಿಜ್ಞಾನದಲ್ಲಿ ನೂತನ ಆವಿಷ್ಕಾರದಲ್ಲಿ ನವಲಗುಂದ ಎಚ್.ಪಿಎಸ್. ಬೆನ್ನೂರು ದೇವರಾಜ ಎಸ್. ಕಣವಿ, ಹುಬ್ಬಳ್ಳಿ ಜಿ.ಎಚ್.ಎಸ್ ಅದರಗುಂಚಿ ಆದರ್ಶಗೌಡ ವಿ. ಭರಮಗೌಡರ ಆಯ್ಕೆಯಾಗಿದ್ದಾರೆ.