ದಾಂಡೇಲಿ ನಗರಸಭೆ: ಕುತೂಹಲ ಘಟ್ಟದತ್ತ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಲೋಕದರ್ಶನ ವರದಿ

ದಾಂಡೇಲಿ 14: ನಗರಸಭಾ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆ ಅಂತಿಮ ಹಂತಕ್ಕೆ ತಲುಪಿದ್ದು ಉಚ್ಛ ನ್ಯಾಯಾಲಯದ ಆದೇಶದಂತೆ ಸೆ.3 ರ ಆದೇಶದ ಪ್ರಕಾರ ದಾಂಡೇಲಿ ನಗರಸಭಾಧ್ಯಕ್ಷರ ಸ್ಥಾನವು ಸಾಮಾನ್ಯ ಮಹಿಳೆಗೆ ಒಲಿದು ಬಂದಿದೆ ಹಾಗೂ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆಗೆ ಲಭ್ಯವಾಗಲಿದೆ. 16 ಚುನಾಯಿತ ಸದಸ್ಯರನ್ನು ಹೊಂದಿರುವ ಕಾಂಗ್ರೇಸ್ ಹಿಂದಿನಂತೆ ಈ ಬಾರಿಯೂ ಸಹ ಆಡಳಿತ ಚುಕ್ಕಾಣಿ ಹಿಡಿಯಲಿದೆ.

ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಾದ  ಯಾಸ್ಮೀನ್ ಕಿತ್ತೂರ ಹಾಗೂ ಸರಸ್ವತಿ ರಜಪೂತ ನಡುವೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಿರಿಕ್ಷೀಸಬಹುದಾಗಿದೆ. ವಾರ್ಡ ನಂ.8 ರಿಂದ ಸತತವಾಗಿ 5 ಬಾರಿ ಆಯ್ಕೆಯಾಗಿರುವ ಹಾಗೂ ಈ ಬಾರಿ ಅತಿ ಹೆಚ್ಚಿನ 447 ಮತಗಳ ಅಂತರದಿಂದ ಜಯ ಸಾಧಿಸಿದ್ದ ಎರಡು ಬಾರಿ ನಗರಸಭಾಧ್ಯಕ್ಷರಾಗಿಯೂ ಹಾಗೂ ಒಂದು ಬಾರಿ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿರುವ ಅನುಭವವನ್ನು ಹೊಂದಿದ್ದಾರೆ. ರಾಜ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿದರೇಯಾಗಿರುವ ಅನುಭವಿ ಮಹಿಳೆ ಶ್ರೀಮತಿ ಯಾಸ್ಮೀನ್ ರಿಯಾಜ ಕಿತ್ತೂರ ದಾಂಡೇಲಿ ನಗರಸಭಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. 2013 ರಲ್ಲಿ ನಗರಸಭಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳಾ ಮೀಸಲಾತಿ ಬಂದಾಗ  ಯಾಸ್ಮೀನ್ ಕಿತ್ತೂರ ಅವರ ಹೆಸರು ಪ್ರಬಲವಾಗಿ ಕೇಳಿ ಬಂದಿತ್ತು ಆದರೆ ಅಂತಿಮವಾಗಿ ಅಧ್ಯಕ್ಷ ಪಟ್ಟ ನೂತನವಾಗಿ ಆಯ್ಕೆಯಾಗಿದ್ದ ಶ್ರೀಮತಿ ದೀಪಾ ಮಾರಿಹಾಳ ಅವರ ಪಾಲಾಗಿತ್ತು.

ಬಿ.ಎ ಪದವಿದರೆಯಾಗಿರುವ ಸರಸ್ವತಿ ರಜಪೂತ ದಾಂಡೇಲಿ ನಗರಸಭಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನೀಡುತ್ತಿರುವ ಇನ್ನೊಬ್ಬ ಮಹಿಳೆಯಾಗಿದ್ದಾರೆ. ಈಗಾಗಲೇ ಎರಡು ಬಾರಿ ಚುನಾಯಿತ ಸದಸ್ಯೆಯಾಗಿ ಆಯ್ಕೆಯಾಗಿರುವ  ಸರಸ್ವತಿ ರಜಪೂತ ಒಮ್ಮೆ ನಾಮ ನಿದರ್ೇಶಿತ ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿದ್ದಾರೆ. ಹಿರಿತನದ ಆಧಾರದ ಮೇಲೆ ಪಕ್ಷವು ಈಕೆಗೆ ಮಣೆ ಹಾಕುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅಂತಿಮವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯು ಪಕ್ಷದ ವರಿಷ್ಠರ ಸೂಚನೆಯಂತೆ ನಡೆಯಲಿದೆ.

ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಒಲಿದು ಬಂದಿದ್ದು ಅದರ ಪ್ರಕಾರ ಪ್ರಥಮ ಬಾರಿ ಆಯ್ಕೆಯಾಗಿರುವ ವಾರ್ಡ.19 ರ ಬಾಂಬೇಚಾಳದ ನೀಲವ್ವ ಬಂಡಿವಡ್ಡರ ಹಾಗೂ ವಾರ್ಡ.31 ರಲ್ಲಿ ಬೈಲಪಾರನಿಂದ ಆಯ್ಕೆಯಾಗಿರುವ ವೆಂಕಟಮ್ಮ ಮೈಲಕುರಿ ನಡುವೆ ಸ್ಪಧರ್ೆ ನಡೆಯುವುದು ಖಚಿತವಾಗಿದೆ. ಆದರೆ ಅಂತಿಮವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಕಾಂಕ್ಷಿಗಳು ಪಕ್ಷದ ತಿಮರ್ಾನಕ್ಕೆ ಬದ್ದರಾಗಿರುವುದಾಗಿ ತಿಳಿಸಿದ್ದಾರೆ.