ಗಜೇಂದ್ರಗಡಕ್ಕೆ ಸಮರ್ಪಕ ನೀರು ವ್ಯವಸ್ಥೆಗೆ ಡಿಸಿ ಭರವಸೆ: ಪ್ರತಿಭಟನೆ ಹಿಂದಕ್ಕೆ

ಲೋಕದರ್ಶನ ವರದಿ

ಗಜೇಂದ್ರಗಡ 02: ಪಟ್ಟಣದ ಎಲ್ಲ ವಾಡರ್ುಗಳಿಗೆ ತತ್ಕಾಲಿಕ ಸಮರ್ಪಕ ಕುಡಿಯುವ ನೀರು ವ್ಯವಸ್ಥೆ ಮಾಡುವದಾಗಿ ಜಿಲ್ಲಾಧಿಕಾರಿ ಎಮ್.ಜಿ. ಹಿರೇ ಮಠ ಅವರು ಪ್ರತಿಭಟನಾ ನಿರತರ ಸ್ಥಳಕ್ಕೆ ಬೇಟಿ ನೀಡಿ ಭರವಸೆ ನೀಡಿದ ಹಿನ್ನಲೆಯಿಂದ ಎರಡನೇ ದಿನ ಮಂಗಳವಾರ ಪುರಸಭೆ ಬಿಜೆಪಿ ಸದಸ್ಯರು ಮತ್ತು ಮುಖಂಡರು, ಕಾರ್ಯಕರ್ತರು ನಡೆಸಿದ ಪ್ರತಿಭಟನೆ ಹಿಂಪಡೆಯಲಾಯಿತು. 

ಜಿಲ್ಲೆಯಲ್ಲಿ ಎಲ್ಲೂ ಇರದ ನೀರು ಅಭಾವ ಗಜೇಂದ್ರಗಡದಲ್ಲಿ ಇದೆ. ಮೊದಲು ಹಂತವಾಗಿ ಪಟ್ಟಣದ ಎಲ್ಲ ಖಾಸಗಿ ಒಡೆತನದ 20ಕ್ಕೂ ಹೆಚ್ಚು ಕೊಳವೆ ಬಾವಿಗಳಿಂದ ನೀರನ್ನು ಬಾಡಿಗೆ ಪಡೆದು ಎಲ್ಲ ವಾಡರ್ುಗಳಿಗೆ ಸಮರ್ಪಕ ನೀರು ಪೂರೈ ಸಲು ಅಧಿಕಾರಿಗಳಿಗೆ ಆದೇಶಶಿಸಿದ್ದೆನೆ, ಜತಗೆ ಸುತ್ತಲಿನ ಗ್ರಾಮಗಳಿಗೆ ಪೂರೈಸುವ ಬಹುಗ್ರಾಮ ಯೋಜನ ನೀರು ಪಡೆಯಲು ಏಳು ದಿನದಲ್ಲಿ ಯತ್ನಿಸುವದಾಗಿ ಡಿಸಿ ಭರವಸೆ ನೀಡಿದರು. 

ಜಿಲ್ಲಾ ಯೋಜನಾಧಿಕಾರಿ ಕರಲಿಂಗಣ್ಣವರ, ಗಜೇಂದ್ರಗಡ ತಹಶೀಲ್ದಾರ ಗುರುಶಿದ್ದಯ್ಯಾ ಹಿರೇಮಠ, ಪುರಸಭೆ ಮುಖ್ಯಾ ಧಿಕಾರಿ ಎಸ್.ಎಂ. ಹಿರೇಮಠ, ಪಿಎಸ್ಐ ರಮೇಶ ಜಲಗೇರಿ, ಶಿರಸ್ತೆದಾರ ವೀರಣ್ಣಾ ಅಡಗತ್ತಿ, ಗ್ರಾಮ ಲೆಕ್ಕಾಧಿಕರಿ ಶಬ್ಬಿರ್ ನಿಶಾನದಾರ ಜತಗೆ ಪುರಸಭೆ ಸಿಬ್ಬಂದಿ ಜತೆ ಜಿಲ್ಲಾಧಿಕಾರಿ ಎಮ್.ಜಿ. ಹಿರೇಮಠ ಅವರು ಪ್ರತ್ಯೇಕ ಸಭೆ ನಡೆಸಿದರು. 

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಬಿ.ಎಮ್. ಸಜ್ಜನ, ಪ್ರಭು ಚವಡಿ, ವಸಂತರಾವ್ ಮೋಹಿತೆ, ಪ್ರತ್ವಿರಾಜ ಚೆನ್ನುಪಾಟೀಲ, ಅಶೋಕ ವನ್ನಾಲ, ಭವಾನಿ ಬಾಕಳೆ, ಕನಕಪ್ಪ ಅರಳಿಗಿಡದ, ದತ್ತುಸಾ ಬಾಕಳೆ, ಅಂಬರೀಶ ಅರಳಿ, ಶಿದ್ದಪ್ಪ ಬಳಿಗೇರ, ಯಮನೂರ ತಿರಕೋಜಿ, ಎಸ್.ಎಸ್. ವಾಲಿ, ದ್ರಾಕ್ಷಾಯಣಿ ಚೋಳಿನ, ಲೀಲಾವತಿ ಸವಣೂರ, ರೂಪಲೇಶ ರಾಟೋಡ, ಲಕ್ಷ್ಮಿ ಮುಧೋಳ, ರವಿ ಕಲಾಲ, ಮುತ್ತಣ್ಣಾ ಚೆಟ್ಟೇರ್, ಬಸವರಾಜ ಬಂಕದ, ದುರ್ಗಪ್ಪ ಮುಧೋಳ, ಸಂತೋಷ ವಸ್ತ್ರದ, ಭಾಸ್ಕರ್ ರಾಯಬಾಗಿ, ಶರಣಪ್ಪ ರೇವಡಿ, ಶರಣಪ್ಪ ಉಪ್ಪಿನಬೆಟಗೇರಿ, ಸುಭಾಸ ಮ್ಯಾಗೇರಿ, ಮೂಕಪ್ಪ ನಿಡಗುಂದಿ, ಮುದಿಯಪ್ಪ ಮುಧೋಳ, ಶಂಕರ್ ಇಂಜಿನಿ, ಸುಜಾತಾಬಾಯಿ ಶೀಂಗ್ರಿ, ಕೌಸರಬಾನು ಹುನಗುಂದ, ದಾ ವಿಜಯಾ ಮಾಳಗಿ, ಲಕ್ಷ್ಮಿ ಮುಧೋಳ, ವೀರಪ್ಪ ಪಟ್ಟಣ ಶೆಟ್ಟಿ, ಕಳಕಪ್ಪ ಪಟ್ಟಣಶೆಟ್ಟಿ, ವೀರಭದ್ರಪ್ಪ ನಿಟ್ಟಾಲಿ, ಕಳಕಪ್ಪ ಸಂಗನಾಳ, ಮುತ್ತಣ್ಣಾ ಚೆಟ್ಟೇರ್, ಇನ್ನಿತರ ಪುರಸಭೆ ಸದಸ್ಯರು, ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.