ಬೆಳಗಾವಿ 27: ತಾವೆಲ್ಲ 6 ದಿನಗಳ ತರಬೇತಿಯನ್ನು ಪಡೆದಿದ್ದಿರಿ. ಆದರೆ ಕೇವಲ ತರಬೇತಿಯನ್ನು ಮಾತ್ರ ಪಡೆದರೆ ಸಾಲದು, ಆ ತರಬೇತಿಯ ಸದುಪಯೋಗ ಪಡೆಸಿಕೊಂಡು, ಇತರರ ಲೆಕ್ಕ ಬರೆಯುವದಕ್ಕಿಂತ ತಮ್ಮ ಲೆಕ್ಕ ಬರೆಯುವಂತಹ ಸ್ವಂತ ಉದ್ಯೋಗ ಮಾಡಿ ಎಂದು ತಿಳಿಸಿದರು. ಧೈರ್ಯದಿಂದ ಕಾರ್ಯ ನಿರ್ವಹಿಸಿ, ಸ್ವಾವಲಂಬಿಗಳಾಗಿ ಬದುಕಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಬೆಳಗಾವಿ ಜಿಲ್ಲಾ ನಿದರ್ೇಶಕ ಶಿನಪ್ಪ ಎಮ್. ಸಲಹೆ ನೀಡಿದರು.
ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಬೆಳಗಾವಿ ಮತ್ತು ಕೇಂದ್ರ ಸಕರ್ಾರದ ಗ್ರಾಮೀಣ ಅಭಿವೃಧ್ದಿ ಸಚಿವಾಲಯ ಹಾಗೂ ಜಿಲ್ಲಾ ಪಂಚಾಯತ್ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ದಿ. 27ರಂದು ಜರುಗಿದ ಬೆಳಗಾವಿ ಜಿಲ್ಲೆಯ ಸ್ವ ಉದ್ಯೋಗ ಆಸಕ್ತ ಮಹಿಳೆಯರಿಗೆ 6 ದಿನಗಳ ಉಚಿತ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.
ವಿನಾಕಾರಣ ದುಂದುವೆಚ್ಚ ಮಾಡದೇ ನೀವೂ, ಉಳಿತಾಯ ಮಾಡುವ ಮನೊಭಾವನೆಯನ್ನು ಬೆಳೆಸಿಕೊಳ್ಳಿ. ಹಾಗೂ ದೇಶದ ಆಥರ್ಿಕ ಅಭಿವೃದ್ಧಿಯಲ್ಲಿ ನಿಮ್ಮೆಲ್ಲರ ಪಾತ್ರ ಮುಖ್ಯವಾದದ್ದು. ಆದ ಕಾರಣ ಇಲ್ಲಿ ಕಲಿಸಿದ ಎಲ್ಲಾ ವಿಷಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಉತ್ತಮ ಅಭಿವೃದ್ಧಿಶೀಲ ವ್ಯಕ್ತಿಯಾಗಿ ಎಂದು ಶುಭಹಾರೈಸಿದರು.
ತರಬೇತಿಯಲ್ಲಿ ಪಾಲ್ಗೊಂಡ ಶಿಭಿರರ್ಾಥಿಗಳು ಉತ್ಸಾಹದಿಂದ ಕಲಿಕೆಯ ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಂಡರು, ನಂತರ ಮುಖ್ಯ ಅಥಿತಿಗಳಿಂದ ಶಿಬಿರಾಥರ್ಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು, ಸಂಸ್ಥೆಯ ಉಪನ್ಯಾಸಕಿ ರಾಜೇಶ್ವರಿ ದೇವಲಾಪೂರ ಇವರು ನಿರೂಪಿಸಿ ವಂದಿಸಿದರು. ಸಂಸ್ಥೆಯ ಸಿಬ್ಬಂದಿ ಬಸವರಾಜ ಕುಬಸದ ಅಬ್ಬುಲ್ ರಜಾಕ ಉಪಸ್ಥಿತರಿದ್ದರು.