ವಿಸ್ಲಿಂಗ್ ವುಡ್ ರೆಸಾರ್ಟ ಮಾಡಿದ ಅತಿಕ್ರಮಣ ಪ್ರದೇಶ ತೆರವು ಪ್ರಾರಂಭ
ಕಾರವಾರ, 22 : ಹೈಕೋರ್ಟ್ ಆದೇಶದ ಹಿನ್ನೆಲೆ ವಿಸ್ಲಿಂಗ್ ವುಡ್ ರೆಸಾರ್ಟನವರು ಮಾಡಿದ ಅತಿಕ್ರಮಣ ಪ್ರದೇಶ ಖುಲ್ಲಾ ಪಡಿಸುವ ಕ್ರಿಯೆಯನ್ನು ಅರಣ್ಯ ಇಲಾಖೆ ಆರಂಭಿಸಿದೆ . ಜೊಯಿಡಾ ತಾಲೂಕಿನ ಅವೇಡಾ ಪಂಚಾಯತಗೆ ಸೇರಿದ ಬಾಡ ಗುಂದ ಗ್ರಾಮದ ವ್ಯಾಪ್ತಿಯ ವಿಸ್ಲಿಂಗ್ ವುಡ್ ರೆಸಾರ್ಟನಲ್ಲಿಕಳೆದ ಮೂರು ದಿನಗಳಿಂದ ತೆರವು ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ. ವಿಸ್ಲಿಂಗ್ ವುಡ್ ರೆಸಾರ್ಟನವರು ಅರಣ್ಯ ಇಲಾಖೆಗೆ ಸೇರಿದ 1.30 ಎಕರೆ, ಕೆಪಿಸಿಗೆ ಸೇರಿದ ಮೂರು ಎಕರೆ, ಕಾಳಿ ನದಿ ಪಾತ್ರದ ಒಂದರೆಡು ಎಕರೆ ಅತಿಕ್ರಮಣ ಮಾಡಿ , ಪಾಕಿಂರ್ಗ್, ವಸತಿ ಗೃಹ, ಎಂಟ್ರಿ ಪಾಯಿಂಟ್, ಸೆಕ್ಯುರಿಟಿ ಗಾರ್ಡ ಹೌಸ್ ನಿರ್ಮಿಸಿದ್ದರು ಎನ್ನಲಾಗಿದೆ. ನದಿ ಪಾತ್ರ ಅತಿಕ್ರಮಿಸಿ ಸೇತುವೆ, ದೋಣಿ ನಿಲ್ಲಲು ಧಕ್ಕೆ ,ರೂಪಿಸಿ, ಮಿಡ್ ರಾಫ್ಟ ಅನಧಿಕೃತ ವಾಗಿ ನಡೆಸುತ್ತಿದ್ದರು .ಅಲ್ಲದೆ ನದಿ ದಂಡೆಗೆ ವಿವ್ಯು ಪಾಯಿಂಟ್, ವಿಶ್ರಾಂತಿ ಪ್ಲಾಟ್ ಫಾರಂ ನಿರ್ಮಿಸಲಾಗಿತ್ತು. ಒಟ್ಟಾರೆ ಅತಿಕ್ರಮಣ ಏರಿಯಾ ತೆರವುಮಾಡಿ, ಸಿಮೆಂಟ್ ಗೋಡೆ ಹಾಕಲು ಅರಣ್ಯ ಇಲಾಖೆ, ಕಂದಾಯ ಇಲಾಖೆಗೆ ಹೈಕೋರ್ಟ್ ಸೂಚಿಸಿದೆ. ಈಗ ಕೆಪಿಸಿಗೆ ಸೇರಿದ ಅತಿಕ್ರಮಣ ಖುಲ್ಲಾ ಆಗುತ್ತಿದ್ದು, ಇದರ ಬೆನ್ನಿಗೆ ಸಿಮೆಂಟ್ ಗೋಡೆ ಹಾಕಲು ಅರಣ್ಯ ಇಲಾಖೆ ಪ್ರಾರಂಭಿಸಿದೆ. ಈ ಕ್ರಿಯೆ ಇನ್ನು ಹದಿನೈದು ದಿನ ನಡೆಯುವ ಸಾಧ್ಯತೆ ಇದೆ. ಅರಣ್ಯ ಇಲಾಖೆಗೆ ಸೇರಿದ ಅತಿಕ್ರಮಣ, ನದಿ ಪಾತ್ರದ ಕಟ್ಟಡ, ಸೇತುವೆ ಖುಲ್ಲಾ ಪಡಿಸುವ ಕ್ರಿಯೆ ಆಗಬೇಕಿದೆ. ಅತಿಕ್ರಮಣ ತೆರವಿನ ನಂತರ ಗೋಡೆ ಹಾಕಿದ ಬಗ್ಗೆ ಅರಣ್ಯ ಇಲಾಖೆಯ ಹೈಕೋರ್ಟ್ ಗೆ ವರದಿ ಸಲ್ಲಿಸಬೇಕಿದೆ. ಡಿಸಿಎಫ್ ಪ್ರಶಾಂತ ಹಾಗೂ ಸಿಸಿಎಫ್ ವಸಂತ ರೆಡ್ಡಿ ಅವರ ಮಾರ್ಗದರ್ಶನ ಹಾಗೂ ಕಂದಾಯ ಇಲಾಖೆಯ ಸಹಕಾರದ ಜೊತೆಗೆ ಅತಿಕ್ರಮಣ ಖುಲ್ಲಾ ಪಡಿಸುವ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ಶ್ರೀಮಂತ ಕುಳದ ರೆಸಾರ್ಟ ನವರು ಮಾಡಿದ ಅತಿಕ್ರಮಣ ತೆರವು ಕಾರ್ಯ ಹೈಕೋರ್ಟ್ ಆದೇಶದ ಮೇರಗೆ ನಡೆಯುತ್ತಿದೆ......