ಸಾರಿಗೆ ಘಟಕದಲ್ಲಿ ಚಾಲಕರ ದಿನ ಆಚರಣೆ
ತಾಳಿಕೋಟೆ, 24: ಪಟ್ಟಣದ ಸಾರಿಗೆ ಘಟಕದಲ್ಲಿ ಚಾಲಕರ ದಿನಾಚರಣೆ ಪ್ರಯುಕ್ತ ಚಾಲಕರ ದಿನವನ್ನು ಶುಕ್ರವಾರ ಆಚರಣೆ ಮಾಡಲಾಯಿತು. ದಿನಾಚರಣೆ ನಿಮಿತ್ಯ ಬಸ್ ಗಳನ್ನು ಸಿಂಗರಿಸಲಾಗಿತ್ತು. ಹಾಜರಿದ್ದ ಪ್ರತಿ ಚಾಲಕರಿಗೂ ಗುಲಾಬಿ ಹೂ ನೀಡಿ ಆರತಿ ಎತ್ತಿ, ಪುಷ್ಪವೃಷ್ಟಿ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಘಟಕ ವ್ಯವಸ್ಥಾಪಕ ಎ.ಬಿ.ಭೋವಿ ಮಾತನಾಡಿ ಈ ನಮ್ಮ ಸಂಸ್ಥೆಯಲ್ಲಿ ಹಗಲಿರುಳೆನ್ನದೆ ದುಡಿಯುವ ಚಾಲಕರ ಸೇವೆ ಅನನ್ಯವಾದುದು ಚಾಲಕರನ್ನು ಗೌರವಿಸಿ ಸನ್ಮಾನಿಸುವುದು ನಮಗೆ ಹೆಮ್ಮೆಯೆನಿಸುತ್ತದೆ ಎಂದರು.
ಈ ಸಂದರ್ಭದಲ್ಲಿ, ಸಂಚಾರಿ ನೀರೀಕ್ಷಕರುಗಳಾದ ಲಿಂಗನಗೌಡ ಬಿರಾದಾರ, ಸುಭಾಸಚಂದ್ರ ಆಲ್ಯಾಳ, ಪಾರುಪತ್ಯೆಗಾರ ತಾರಾಸಿಂಗ ರಾಠೋಡ, ಲೆಕ್ಕಪತ್ರ ಮೇಲ್ವೀಚಾರಕ ಡಿ.ಎಂ.ನಧಾಪ, ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಆಡಳಿತ ಸಿಬ್ಬಂದಿ ಹಾಜರಿದ್ದರು.