ಕಾರು ಪಲ್ಟಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು
ಸಂಬರಗಿ 03: ವಿಜಯಪುರ ಕಾಗವಾಡ ರಾಜ್ಯ ಮಾರ್ಗ ರಸ್ತೆ ಮಂಗಸೂಳಿ ನವನಿಹಾಳ ಅಂಬಾಸಿಡರ್ ಕಾರು ಪಲ್ಟಿಯಾಗಿ ವಾಹನ ನಜ್ಜುಗುಜ್ಜಾಗಿದ್ದು, ಯಾರಿಗೂ ಗಾಯಗಳಾಗಿಲ್ಲ. 3 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ವಿವರ : ಜಮಖಂಡಿಗೆ ಗ್ರಾಮದ ನಿವಾಸಿಗಳಾದ ಅನಂತ್ ಪಂಕೋಶ್, ರಾಜು ಪಂಕೋಶ್ ಮತ್ತು ಅವರ ಮಗ ಅಥಣಿ ಮೀರಜ್ ಮಾರ್ಗದಿಂದ ಚಿಪಳುನಗೆ ಹೋಗುತ್ತಿದ್ದಾಗ, ಮಂಗಸೂಳಿ ಬಳಿ ವಾಹನವು ಅತಿವೇಗದಲ್ಲಿ ಚಲಿಸುತ್ತಿದ್ದಾಗ ನಾಯಿ ಅಡ್ಡ ಬಂದು ನಾಯಿಯ ಪ್ರಾಣ ಉಳಿಸಲು ಹೋಗಿ ವಾಹನ ಪಲ್ಟಿಯಾಗಿ ವಾಹನ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ವಾಹನವು ಎರಡು ಬಾರಿ ಪಲ್ಟಿಯಾಗಿದೆ ವಾಹನ ಜಖಂಗೊಂಡಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಅಪಘಾತ ತಿಳಿದ ನಂತರ ಸುತ್ತಮುತ್ತಲಿನ ನಿವಾಸಿಗಳು ಜನರು ಅವರನ್ನು ಸುರಕ್ಷಿತವಾಗಿ ನುಜ್ಜಾಗಿರುವ ವಾಹನದಿಂದ ಹೊರತೆಗೆದು ಉಪಚರಿಸಿದರು. ವಾಹನ ನಂಬರ ಕೆ.ಎ. 48 ಎಮ್ 1885 ಈ ಕುರಿತು ಕಾಗವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.