ಮುಂಬೈ 03: ಹುಡುಗಿಯರ ಅಂಡರ್ 19 ಟಿ20 ವಿಶ್ವಕಪ್ ಗೆದ್ದ ಭಾರತೀಯ ತಂಡಕ್ಕೆ ಬಿಸಿಸಿಐ ನಗದು ಪುರಸ್ಕಾರ ಘೋಷಣೆ ಮಾಡಿದೆ.
ರವಿವಾರ ಮಲೇಶ್ಯಾದ ಕೌಲಾಲಂಪುರದಲ್ಲಿ ನಡೆದ ಅಂಡರ್ 19 ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನಾಯಕಿ ನಿಕಿ ಪ್ರಸಾದ್ ನೇತೃತ್ವದಲ್ಲಿ, ಭಾರತೀಯ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಒಂಬತ್ತು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಸೋಲಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
“ಮಲೇಷ್ಯಾದಲ್ಲಿ ನಡೆದ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ 2025 ರಲ್ಲಿ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡ ಭಾರತ ಅಂಡರ್-19 ಮಹಿಳಾ ತಂಡಕ್ಕೆ ಬಿಸಿಸಿಐ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಈ ಗಮನಾರ್ಹ ಸಾಧನೆಯನ್ನು ಗೌರವಿಸಲು, ಬಿಸಿಸಿಐ ಮುಖ್ಯ ಕೋಚ್ ನೂಶಿನ್ ಅಲ್ ಖದೀರ್ ನೇತೃತ್ವದ ವಿಜೇತ ತಂಡ ಮತ್ತು ಸಹಾಯಕ ಸಿಬ್ಬಂದಿಗೆ 5 ಕೋಟಿ ರೂಪಾಯಿ ನಗದು ಮಾಡಿದ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ ಕೇವಲ 82 ರನ್ ಮಾಡಿದರೆ, ಭಾರತವು ಒಂದು ವಿಕೆಟ್ ಕಳೆದುಕೊಂಡು 11.2 ಓವರ್ ಗಳಲ್ಲಿ ಗುರಿ ಬೆನ್ನತ್ತಿ ಜಯ ಸಾಧಿಸಿತು.
ಕೂಟದಲ್ಲಿ ಒಂದು ಶತಕದೊಂದಿಗೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಗೊಂಗಾಡಿ ತ್ರಿಷಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.