ಗಾನಯೋಗಿ ಪಂಚಾಕ್ಷರಿ ಗವಾಯಿ ಟ್ರಷ್ಟ ಸ್ಥಾಪನೆಗೆ ಒತ್ತಾಯ-ಕಡಣಿ ಶಾಸ್ತ್ರೀ

Ganayogi Panchakshari urges establishment of Gavai Trust - Kadani Shastri

ಗಾನಯೋಗಿ ಪಂಚಾಕ್ಷರಿ ಗವಾಯಿ ಟ್ರಷ್ಟ ಸ್ಥಾಪನೆಗೆ ಒತ್ತಾಯ-ಕಡಣಿ ಶಾಸ್ತ್ರೀ 

ಧಾರವಾಡ 03: ಗದಗು ಸಂಗೀತದಗದ್ದಿಗೆಯನ್ನಾಗಿ ಮಾಡಿದ, ಪಂಡಿತ ಪಂಚಾಕ್ಷರಿ ಗವಾಯಿಗಳವರ ಕುರಿತಾಗಿ ಹುಬ್ಬಳಿ ಧಾರವಾಡ ಪ್ರದೇಶದಲ್ಲಿಯಾವುದೇ ಸ್ಮಾರಕವಿಲ್ಲ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿಗಾನಯೋಗಿ ಪಂಚಾಕ್ಷರಿ ಗವಾಯಿಗಳವರ ಹೆಸರಲ್ಲಿಅಧ್ಯಯನ ಪೀಠ ಸ್ಥಾಪನೆಯಾಗ ಬೇಕು ಎಂಬ ಬೇಡಿಕೆ ಈಡೇರಿಲ್ಲ. ಈಗ ನಾವು ಸ್ಮಾರಕ ಮತ್ತು ಅಧ್ಯಯನ ಪೀಠದೊಂದಿಗೆ ಗದುಗಿನಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿ ಟ್ರಷ್ಟಸ್ಥಾಪಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸುತ್ತೇವೆ ಎಂದುಕಲಾವಿಕಾಸ ಪರಿಷತ್ ಸಂಸ್ಥಾಪಕ ಶ್ರೀ ಸಿ. ಕೆ. ಹೆಚ್‌. ಶಾಸ್ತ್ರೀ (ಕಡಣಿ)ಇವರು ಹೇಳಿದರು. ಅವರು ಕಲಾ ವಿಕಾಸ ಪರಿಷತ್ತು ಮತ್ತುಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಜೊತೆಯಾಗಿ ಹಮ್ಮಿಕೊಂಡಿದ್ದಗಾನಯೋಗಿ ಪಂಚಾಕ್ಷರಿ ಗವಾಯಿಗಳವರ 133 ನೆಯಜಯಂತೋತ್ಸವಅಮರಸ್ವರ ಸಮಾರೋಹಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.  

ಮುಖ್ಯಅತಿಥಿಯಾಗಿಆಕಾಶವಾಣಿಧಾರವಾಡಕೇಂದ್ರದ ನಿವೃತ್ತ ನಿರ್ದೇಶಕಡಾ. ಬಸು ಬೇವಿನಗಿಡದ,ಹಿರಿಯರಂಗ ನಿರ್ದೇಶಕಿ, ಗಾಯಕಿಶ್ರೀಮತಿ ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠ, ಕವಿವಿಲಲಿತಕಲಾ ಹಾಗೂ ಸಂಗೀತ ಮಾಹಾವಿದ್ಯಾಲಯ, ಪ್ರಾಧ್ಯಾಪಕಡಾ. ಎ. ಎಲ್‌. ದೇಸಾಯಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ ಜೀವನ ಸಾಧನೆ ಸಂದೇಶಕುರಿತಾಗಿ ಮಾತನಾಡಿದರು.   

ಇದೇ ಸಂದರ್ಭದಲ್ಲಿ, ಬೆಂಗಳೂರಿನ ಡಾ. ಗೋಪಾಲ ಕೆ. ರಾಯಚೂರ. ಧಾರವಾಡದ, ಡಾ. ಪರಶುರಾಮಕಟ್ಟಿಸಂಗಾವಿ. ಹಳಿಯಾಳದ ಸುಮಾ ಹಡಪದ, ಡಂಬಳದ ಬಸವರಾಜಎನ್‌. ಸಿದ್ದಣ್ಣನವರ ಜ್ಞಾನಜ್ಯೋತಿ ಕಲಾ ಬಳಗ, ಹುಬ್ಬಳ್ಳಿ. ರಾಜರಾಜೇಶ್ವರಿ ಸಂಗೀತ ಕಲಾ ಪಾಠ ಶಾಲೆ, ಇಟ್ಟಿಗಿ. ಸುಸ್ವರ ಸಂಗೀತ ವಿದ್ಯಾ ಸಂಸ್ಥೆ, ದಾಂಡೇಲಿ. ದುರ್ಗಾದೇವಿ ನಾಟ್ಯ ಶಾಲೆ, ಹಳಿಯಾಳ. ಇವರುಗಳಿಗೆ, ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ‘ಸುವರ್ಣ ಸಿರಿ ಸಮ್ಮಾನ’ ರಾಜ್ಯ ಪ್ರಶಸ್ತಿ ನೀಡಿಗೌರವಿಸಲಾಯಿತು. ಬಸವರಾಜಹಡಪದ ಸರ್ವರಿಗೂ ಸ್ವಾಗತಿಸಿದರು. ಸುಮಂಗಲಾ ಚಕ್ರಸಾಲಿ ಹಳಿಯಾಳ ನಿರೂಪಣೆ ಮಾಡಿ ವಂದನಾರೆ​‍್ಣ ಸಲ್ಲಿಸಿದರು. 

ಬೆಳಗ್ಗೆ, ‘ಗಾನಯೋಗಿ’ ಪಂ. ಪಂಚಾಕ್ಷರಿ ಗವಾಯಿಗಳವರ 133 ನೆಯಜಯಂತೋತ್ಸವ ‘ಅಮರಸ್ವರ ಸಮಾರೋಹ’ 

ಉದ್ಘಾಟನೆಯನ್ನು, ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಗಾಯಕರಾದಡಾ. ಶಾಂತಾರಾಮ ಹೆಗಡೆಇವರುತಬಲಾ ವಾದ್ಯ ನುಡಿಸುವ ಮೂಲಕ ಉದ್ಘಾಟನೆ ಮಾಡಿ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಕ್ಷೇತ್ರಕ್ಕೆಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳವರು ನೀಡಿದಕೊಡುಗೆ ಸ್ಮರಣೀಯ. ಕರ್ನಾಟಕಿ ಸಂಗೀತದ ಪ್ರಭಾವದಕಾಲದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನುದೊಡ್ಡ ಮಟ್ಟದಲ್ಲಿ ಬೆಳೆಸಿದವರು ಪಂ. ಪಂಚಾಕ್ಷರಿ ಗವಾಯಿಗಳವರುಎಂದರಲ್ಲದೆ. ಪಂಚಾಕ್ಷರಿ ಗವಾಯಿಗಳವರಿಗೆ ಉಭಯಸಂಗೀತ ಶಿಕ್ಷಣ ಕೊಡಿಸುವಲ್ಲಿ ಹಾನಗಲ್‌ಕುಮಾರ ಶಿವಯೋಗಿಗಳ ಪಾತ್ರದೊಡ್ಡದಾಗಿದೆ. ದೇಶದ ಪ್ರಸಿದ್ಧ ಗಾಯಕರನ್ನು ಕರೆಸಿಕೊಂಡು ಶಿಕ್ಷಣವನ್ನು ಕೊಡಿಸುವ ಮೂಲಕ ತನ್ನಂತೆಇರುವಅಂದಅನಾಥರ ಬಾಳಿಗೆ ಬೆಳಕಾಗುವಂತೆ ಆಶಿರ್ವದಿಸಿದರು. ಅವರಕೃಪೆಯಿಂದಕರ್ನಾಟಕ ಮಾತ್ರವಲ್ಲದೇಶ ವಿದೇಶದಲ್ಲಿಯೂ ವೀರೇಶ್ವರ ಪುಣ್ಯಾಶ್ರಮದ ಸಂಗೀತ ಪರಂಪರೆ ವಿಸ್ತರಿಸಿಕೊಂಡಿದೆಎಂದುಹೇಳಿದರು. 

ಧಾರವಾಡದ ಹಿರಿಯರಂಗಕರ್ಮಿಡಾ. ಶಶಿಧರ ನರೇಂದ್ರಇವರು ಸಮಾರಂಭದಅಧ್ಯಕ್ಷೀಯ ನುಡಿಗಳನ್ನು ನುಡಿಯುತ್ತ ನಮ್ಮ ಸ್ವರಅಮರವಾಗ ಬೇಕು, ಸ್ವರಆರಾಧನೆಯಾಗ ಬೇಕು ನಮ್ಮ ಸ್ವರಅಮರತ್ವ ಪಡೆಯಬೇಕುಎಂದರಲ್ಲದೆ; ಗಾನಯೋಗಿ ಪಂಚಾಕ್ಷರಿ ಗವಾಯಿಗಳವರು ನಡೆದಾಡುವ ಸಂಗೀತ ವಿಶ್ವವಿದ್ಯಾಲಯವಾಗಿದ್ದರುಎಂದು ಹೇಳುತ್ತಾ ಧಾರವಾಡದಲ್ಲಿ ಸಂಗಿತ ಪರಂಪರೆಬೆಳಸಿದ ಭಾಸ್ಕರ ಬುವಾ, ಸಿತಾರ ರತ್ನರಹಿಮತ್‌ಖಾನ್ ಭೀಮಸೇನಜೋಷಿ ಗಂಗೂಬಾಯಿ ಹಾನಗಲ್ ಇವರುಗಳ ಕೊಡುಗೆ ಸ್ಮರಿಸಿದರು.  

ಧಾರವಾಡದ ಸಾಯಿ ಪ. ಪೂ. ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾಲಯಅಧ್ಯಕ್ಷರಾದಅತಿಥಿ, ಡಾ. ವೀಣಾ ಬಿರಾದಾರಮಾತನಾಡಿದರು. ಸಿ. ಕೆ. ಹೆಚ್‌. ಶಾಸ್ತ್ರೀ (ಕಡಣಿ) ಸಂಸ್ಥಾಪಕರು ಕಲಾ ವಿಕಾಸ್ ಪರಿಷತ್, ಗದಗಇವರುಪ್ರಾಸ್ತಾವಿಕವಾಗಿ ಮಾತನಾಡುವರು. ಇದೇ ಸಂದರ್ಭದಲ್ಲಿ, ಖ್ಯಾತತಬಲಾ ವಾದಕರುಧಾರವಾಡಆಕಾಶವಾಣಿ ನಿಲಯದಕಲಾವಿದರುಆಗಿರುವ ಕಲಬುರ್ಗಿಯ ಪಂ. ಶಾಂತಲಿಂಗಪ್ಪ ಹೂಗಾರ (ದೇಸಾಯಿಕಲ್ಲೂರ) ಇವರಿಗೆ, ಹಾಗೂ ಧಾರವಾಡದ ಪ್ರತಿಷ್ಠಿತ ಕಲಾ ಪೋಷಕ ಸಂಸ್ಥೆಯಾದ ಕುಮಾರೇಶ್ವರಕಲ್ಚರಲ್ ಸೊಸೈಟಿ ಮತ್ತು ಶಿರಸಿಯ, ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಮಂಡಳಿಯಾದ ಯಕ್ಷ ಕಲಾಸಂಗಮ ಕಲಾ ಪೋಷಕ ಮತ್ತು ಕಲಾ ಶಿಕ್ಷಣ ಸಂಸ್ಥೆಗಳಿಗೆ ಕಲಾ ವಿಕಾಸ ಪರಿಷತ್‌ನ 2023-24 ನೆಯ ಸಾಲಿನ ವಾರ್ಷಿಕ ಪ್ರಶಸ್ತಿ ‘ಗಾನಯೋಗಿ ಪಂಚಾಕ್ಷರಿಅನುಗ್ರಹ’ ರಾಷ್ಟ್ರೀಯ ಪ್ರಶಸ್ತಿ ಪ್ರದಾನಿಸಲಾಯಿತು.ದೇವಿಕಾ ಕೆ. ಜೋಗಿ, ಹೊಸಪೇಟೆ ಸರ್ವರಿಗೂ ಸ್ವಾಗತಿಸಿದರು. ಸ್ವರ ಸಂವಾದಿನ ಸಂಗೀತ ಪಾಠಶಾಲೆಯ ಮಕ್ಕಳು ಪ್ರಾರ್ಥನಾ ಸಂಗೀತ ನಡೆಸಿಕೊಟ್ಟರು. ಕುಮಾರಿಐಶ್ವರ್ಯಅಮೂಲ್ಯ ಹಡಪದ ಸಹೋದರಿಯರು ಸ್ವಾಗತ ನೃತ್ಯ ಸೇವೆಸಲ್ಲಿಸಿದರು. ಪ್ರೊ. ಪಿ. ಆರ್‌. ನಾಗರಾಳ ನಿರೂಪಣೆ ಮಾಡುವರುಡಾ. ಎ. ಎಲ್‌.ದೇಸಾಯಿ ವಂದನಾರೆ​‍್ಣ ಮಾಡಿದರು. ಆಮಂತ್ರಿತ, ಆಹ್ವಾನಿತ ಮತ್ತು ಪ್ರಶಸ್ತಿ ಪುರಸ್ಕೃತಕಲಾವಿದರು; ದಿನಪೂರ್ತಿ ಸಂಗೀತ ನೃತ್ಯ ಕಲಾ ಸೇವೆ ಸಲ್ಲಿಸಿದರು.