ದೇಶದ 18 ರಾಜ್ಯಗಳಲ್ಲಿ ಈಗಾಗಲೇ ಮಡಿವಾಳ ಸಮಾಜವು ಪರಿಶಿಷ್ಟ ಜಾತಿ ( ಎಸ್ .ಸಿ)ಯಲ್ಲಿ ಸೇರೆ್ಡ
ರಾಣೇಬೆನ್ನೂರ 03: ಅತೀ ಹಿಂದುಳಿದ ಜನಾಂಗವಾಗಿರುವ ಮಡಿವಾಳ ಸಮಾಜದ ಏಳ್ಗೆಗಾಗಿಯೇ ರಚಿತವಾಗಿರುವ ಹಾಗೂ ಸಮಗ್ರ ಮಾಹಿತಿ ಒಳಗೊಂಡಿರುವ ಅನ್ನಪೂರ್ಣಮ್ಮ ವರದಿಯನ್ನು ಸರಕಾರವು ಜಾರಿಗೊಳಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ ಎಂದು ಯುವ ನ್ಯಾಯವಾದಿ, ನೋಟರಿ ಕುಮಾರ. ಡಿ. ಮಡಿವಾಳರ ಹೇಳಿದರು.
ಅವರು ಇತ್ತೀಚೆಗೆ ತಹಶೀಲ್ದಾರ್ ಕಾರ್ಯಾಲಯದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಮಡಿವಾಳ ಸಮಾಜದ ವತಿಯಿಂದ ಏರಿ್ಡಸಿದ್ದ ಮಡಿವಾಳ ಮಾಚಿದೇವರ ಜಯಂತೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ದೇಶದ 18 ರಾಜ್ಯಗಳಲ್ಲಿ ಈಗಾಗಲೇ ಮಡಿವಾಳ ಸಮಾಜವು ಪರಿಶಿಷ್ಟ ಜಾತಿ ( ಎಸ್ .ಸಿ)ಯಲ್ಲಿ ಸೇರೆ್ಡಗೊಂಡಿದ್ದು , ಕರ್ನಾಟಕ ಸರಕಾರವು ಶೀಘ್ರವೇ ಈ ಸಮಾಜವನ್ನು ಪ.ಜಾತಿಗೆ ಸೇರೆ್ಡಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದರು.
ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವಪ್ಪರ ಸಹಪಾಠಿಯಾಗಿದ್ದ ತಿರಕಪ್ಪ ಮಡಿವಾಳರವರು ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಅವರ ಸ್ಮಾರಕ, ವೃತ್ತವನ್ನು ಸಹ ಹಾವೇರಿ ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸಿ ಅವರಿಗೆ ಗೌರವ ಸಲ್ಲಿಸಬೇಕು ಎಂದರು. 12ನೇ ಶತಮಾನದಲ್ಲಿ ಅಗ್ರಗಣ್ಯ ಶರಣರಲ್ಲಿ ಓರ್ವರಾಗಿದ್ದ ಮಡಿವಾಳ ಸಮಾಜದ ಆರಾಧ್ಯದೈವರಾಗಿದ್ದ ಮಡಿವಾಳ ಮಾಚಿದೇವರು ಶರಣರ ಮಲೀನವಾದ ಬಟ್ಟೆಗಳನ್ನು ಸ್ವಚ್ಚಗೊಳಿಸುವ ಪ್ರಾಮಾಣಿಕ ಕಾಯಕ ಮಾಡುವುದರ ಜೊತೆಗೆ ಶ್ರೇಷ್ಠ ವಚನಗಾರರಾಗಿ ಮಹಾತ್ಮರೆಸಿಕೊಂಡರು ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ಆರ್. ಎಚ್. ಭಾಗವಾನ್ ಮಾತನಾಡಿ ಮಡಿವಾಳ ಜನಾಂಗದವರು ಕೊಳಕಾದ ಬಟ್ಟೆಗಳನ್ನು ಶುಚಿ ಮಾಡುವ ಶುದ್ಧ ಕೆಲಸದಲ್ಲಿರುವುದು ಒಳ್ಳೆಯ ಸಂಸ್ಕೃತಿ ಹಾಗೂ ವೃತ್ತಿಯಾಗಿರಬಹುದು. ಆದರೆ ಬದಲಾಗುತ್ತಿರುವ ಈ ಸಮಾಜದಲ್ಲಿ ಅವರ ಮಕ್ಕಳಿಗೂ ಸಹ ಈ ಬಟ್ಟೆ ಶುಚಿಗೊಳಿಸುವ ಕಾಯಕವನ್ನು ಅಂಟಿಸದೆ ಅವರುಗಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಕೊಡಿಸಿ ಸತ್ಪ್ರಜೆಗಳನ್ನಾಗಿ ಮಾಡಲು ಮಡಿವಾಳ ಸಮಾಜ ಭಾಂದವರು ಮುಂದಾಗಬೇಕು ಎಂದರು. ತಹಶೀಲ್ದಾರ ಹಾಗೂ ಅವರ ಕಛೇರಿಯ ಸಿಬ್ಬಂದಿ ಹೊರತುಪಡಿಸಿದರೆ ತಾಲೂಕು ಮಟ್ಟದ ಯಾವ ಅಧಿಕಾರಿಗಳು, ಸಿಬ್ಬಂದಿಗಳು ಈ ಜಯಂತ್ಯುತ್ಸವದಲ್ಲಿ ಭಾಗವಹಿಸದೇ ಗೈರು ಉಳಿದದ್ದು ಮಡಿವಾಳ ಸಮಾಜದ ಭಾಂದವರಲ್ಲಿ ಬೇಸರ ಮೂಡಿಸಿತು. ಸಮಾಜದ ಮುಖಂಡರಾದ ಚಂದ್ರಣ್ಣ ಚಳಗೇರಿ, ಹನುಮಂತಪ್ಪ ಮಡಿವಾಳರ, ಎಂ. ಚಿರಂಜೀವಿ, ಶ್ರೀಧರ್ ಚಲವಾದಿ, ನಿಂಗಪ್ಪ ಮಡಿವಾಳರ, ಅನೀಲ ಮಡಿವಾಳರ, ಬಸವರಾಜ್ ಸಾವಕ್ಕಳವರ, ಗುಡ್ಡಪ್ಪ ಮಡಿವಾಳರ, ಮಧು ಮಡಿವಾಳರ, ಪೃಥ್ವಿರಾಜ್ ಸೇರಿದಂತೆ ಕನ್ನಡಪರ ಸಂಘಟನೆಗಳ ಮುಖಂಡರಾದ ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ ಮತ್ತಿತರರು ಇದ್ದರು.