ಬೆಳಗಾವಿ : ಗ್ಯಾಸ್ (ಅಡುಗೆ ಅನಿಲ) ತುಂಬಿದ ಟ್ಯಾಂಕರ್ ಲಾರಿಯೊಂದು ಉರುಳಿಬಿದ್ದ ಪರಿಣಾಮ ಭಾರಿ ಅನಾಹುತ ತಪ್ಪಿದ್ದು, ಸ್ಥಳದಲ್ಲಿ ಕೆಲಹೊತ್ತು ಆತಂಕ ಸೃಷ್ಟಿಸಿದ ಘಟನೆ ಜಿಲ್ಲೆಯ ನಿಪ್ಪಾಣಿ ಬಳಿಯ ಸ್ಥವನಿಧಿ ಘಾಟದಲ್ಲಿ ನಡೆದಿದೆ.
ರವಿವಾರ ಸಂಜೆ ಈ ಘಟನೆ ನಡೆದಿದ್ದು, ಗ್ಯಾಸ್ ತುಂಬಿಕೊಂಡು ಸಾಗುತ್ತಿದ್ದ ಟ್ಯಾಂಕರ್ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಉರುಳಿ ಬಿದ್ದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸಂಕೇಶ್ವರ ಸಿಪಿಐ ಶಿವಶಂಕರ ಅವಜಿ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಉರುಳಿ ಬಿದ್ದಿರುವ ಟ್ಯಾಂಕರ್ ತೆರವು ಮಾಡುವ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ. ಅಲ್ಲದೆ ಗ್ಯಾಸ್ ಸೊರಿಕೆ ಆಗಿದ್ದರೆ ದೊಡ್ಡ ಅನಾಹುತವೇ ಸಂಭವಿಸತಿತ್ತು. ಆದರೆ ಸೊರಿಕೆಯಾಗದೆ ಇರುವದು ಸುದೈವ ಎನ್ನಲಾಗಿದೆ.