ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣಕ್ಕೆ ಚನ್ನರಾಜ ಹಟ್ಟಿಹೊಳಿ ಚಾಲನೆ
ಹಿರೇಬಾಗೇವಾಡಿ 3 : ಗ್ರಾಮದ ಎಸ್.ಸಿ.ಕಾಲೋನಿಯಲ್ಲಿ ಸುಮಾರು 70 ಲಕ್ಷ ರೂ,ಗಳ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೋಮವಾರ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಶ್ರೀ ಜಪ್ತಿ, ಉಪಾಧ್ಯಕ್ಷರಾದ ಶೃತಿ ಸಿದ್ದಣ್ಣವರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಸಿ.ಪಾಟೀಲ, ಶ್ರೀಕಾಂತ್ ಮಾಧುಭರಮಣ್ಣವರ, ಬಸನಗೌಡ ಪಾಟೀಲ, ಅನಿಲ ಪಾಟೀಲ, ಸಲೀಂ ಸತ್ತಿಗೇರಿ, ನಿಂಗಪ್ಪ ತಳವಾರ್, ಅಬು ಖತೀಬ್, ಅಡಿವೇಶ್ ಇಟಗಿ, ಆನಂದ ಪಾಟೀಲ, ಬಿ.ಎನ್.ಪಾಟೀಲ, ಮಹಾಂತೇಶ್ ಹಂಚಿನಮನಿ, ಪ್ರಕಾಶ್ ಜಪ್ತಿ, ಅನಿಲ್ ಪಾಟೀಲ, ರವಿ ಗಾಣಗಿ, ಗೌಡಪ್ಪ ಜಿರಲಿ, ಸಮಿನಾ ನದಾಫ್, ಸುನಂದ ಹೊರಗಿನಮನಿ, ಯಲ್ಲಪ್ಪ ಕೆಳಗೇರಿ, ನಿಂಗಪ್ಪ ತಳವಾರ, ಗೌಸ್ ಜಾಲಿಕೊಪ್ಪ ಮುಂತಾದವರು ಉಪಸ್ಥಿತರಿದ್ದರು.