ಬೆಳಗಾವಿ : ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನೂರಾರು ವರ್ಷಗಳಿಂದ ಇದ್ದ ಹಳೆಯ ದರ್ಗಾ ತೆರವು ಕಾರ್ಯಾಚರಣೆ ನಡೆಯುತ್ತಿದ್ದು ಸಾವಿರಾರು ಭಕ್ತರು ಜಮಾವಣೆ ಯಾಗಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಂಚಿನಾಳ ಕ್ರಾಸ್ ಬಳಿ ನಡೆದಿದೆ.
ಬೆಳಗಾವಿಯಿಂದ ಕೊಲ್ಲಾಪುರ ವರೆಗೆ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಜಿಲ್ಲೆಯ ಹಂಚಿನಾಳ ಕ್ರಾಸ್ ಬಳಿಯ ಪುನಾ ಬೆಂಗಳೂರು ರಾಷ್ಟ್ರೀಯ ಪಕ್ಕದಲ್ಲಿದ್ದ ನೂರಾರು ವರ್ಷಗಳ ಇತಿಹಾಸ ಇರುವ ಗುಲಾಬ್ ಶಾ ದರ್ಗಾ ತೆರವು ಕಾರ್ಯಾಚರಣೆಯು ಶನಿವಾರ ಸಂಜೆ ನಡೆಯುತ್ತಿದೆ.
ಆದರೆ ಈ ದರ್ಗಾ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ದರ್ಗಾ ತೆರವಿಗಾಗಿ ರಸ್ತೆ ನಿರ್ಮಾಣ ಕಾಮಗಾರಿಯವರು ಮುಂದಾಗಿದ್ದರು. ಇದಕ್ಕೆ ಈ ದರ್ಗಾದ ಭಕ್ತರು ಹಾಗೂ ಪೂಜಾರಿಗಳು ವಿರೋಧ ವ್ಯಕ್ತಪಡಿಸಿದರು.
ಆದರೆ ಈ ದರ್ಗಾ ತೆರವಿಗೆ ರಸ್ತೆ ನಿರ್ಮಾಣ ಕಾಮಗಾರಿಯವರು ಏಕಾಏಕಿ ಮುಂದಾಗಿದ್ದಾರೆ. ತಮಗೆ ಯಾವುದೇ ರೀತಿಯ ನೋಟಿಸು ನೀಡದೆ ಯಾವದೇ ಸುಳಿವು ಕೂಡಾ ನೀಡದೆ ದರ್ಗಾ ತೆರವು ಮಾಡುತ್ತಿದ್ದಾರೆ ಎಂದು ಆರೋಪಿಸಿ ಅಲ್ಲಿನ ಪೂಜಾರಿಗಳು ಹಾಗೂ ಸಾವಿರಾರು ಸಂಖ್ಯೆಯ ಭಕ್ತರು ಶನಿವಾರ ತಡರಾತ್ರಿ ವರೆಗೆ ಜಮಾವಣೆಗೋಂಡರು. ಅಲ್ಲದೆ ಈ ತೆರವು ಕಾರ್ಯಾಚರಣೆಕ್ಕೆ ವಿರೋಧ ವ್ಯಕ್ತಪಡಿಸಿದರು.
ಆದರೆ ಶನಿವಾರ ತಡರಾತ್ರಿ ವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯವರು ಹಲಾವರು ಯಂತ್ರಗಳ ಮೂಲಕ ದುರ್ಗಾ ಕಾರ್ಯಾಚರಣೆ ನಡೆಸುವ ಮೂಲಕ ತಮ್ಮ ಕಾರ್ಯ ಮುಂದೆ ವರೆಸಿದ್ದಾರೆ.