ಅನ್ನದಾನೀಶ್ವರ ಕಲ್ಯಾಣ ಮಂಟಪಕ್ಕೆ ಭೂಮಿ ಪೂಜೆ

Bhumi Puja to Annadaneshwar Kalyan Mandap

ಅನ್ನದಾನೀಶ್ವರ ಕಲ್ಯಾಣ ಮಂಟಪಕ್ಕೆ ಭೂಮಿ ಪೂಜೆ 

ಕುಕನೂರ 03: ತಳಕಲ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸದ್ಬಕ್ತರ ಅನೂಕೂಲಕ್ಕೆ ಅನ್ನದಾನೀಶ್ವರ ಕಲ್ಯಾಣ ಮಂಟಪದ ಅವಶ್ಯಕತೆ ಇದೆ ಎಂದು ತಳಕಲ್ ಅನ್ನದಾನೀಶ್ವರ ಶಾಖಾಮಠದ ಸಮಿತಿ ಸದಸ್ಯ ಮುದಿಯಪ್ಪ ಯೋಗೆಮ್ಮನವರ ಹೇಳಿದರು.  ಅವರು ಕುಕನೂರ ತಾಲೂಕಿನ ತಳಕಲ್ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠಲ್ಲಿ ನೂತನ ಕಲ್ಯಾಣ ಮಂಟಪ ಕಟ್ಟಡ ಕಾರ್ಯದ ಭೂಮಿ ಪೂಜೆ ಮಾಡಿ  ಮಾತನಾಡುತ್ತಾ ಪೂಜ್ಯ  ಅನ್ನದಾನೀಶ್ವರ ಮಹಾಶಿವಯೋಗಿಗಳು ಈ ನಾಡಿನ ಹಿರಿಯ ಪೂಜ್ಯರು ಅಂತವರ ಆಶೀರ್ವಾದದಿಂದ ನಮ್ಮ ಗ್ರಾಮದಲ್ಲಿ ಕಲ್ಯಾಣ ಮಂಟಪ ಕಟ್ಟಲಿಕ್ಕೆ ಭೂಮಿ ಪೂಜೆ ಮಾಡಿದ್ದು ನಮ್ಮ ಗ್ರಾಮದ ಸರ್ವಜನರಿಗೂ ಸಂತಸ ತಂದಿದೆ, ಇಂತಹ ಕಾರ್ಯಕ್ಕೆ ಭಕ್ತರು ತನು ಮನ ಧನದಿಂದ ಸೇವೆ ಸಲ್ಲಿಸಬೇಕು ಎಂದರು.  ನಂತರ ಮಾತನಾಡಿದ ಸಮಿತಿ ಸದಸ್ಯ ಮಲ್ಲಪ್ಪ ಬಂಗಾರಿ ಮಠಗಳು ಅಭಿವೃದ್ಧಿಯಾದಾಗ ಮಾತ್ರ ಭಕ್ತರ ಕಲ್ಯಾಣವಾಗಲು ಸಾಧ್ಯ ಈ ನಿಟ್ಟಿನಲ್ಲಿ ನಮ್ಮ ಗ್ರಾಮ ಜನರು  ಸಂಸ್ಕಾರವಂತರು ಜೊತೆಗೆ ಧರ್ಮವಂತರು ಕೂಡ, ಕುಕನೂರ ತಳಕಲ್ ಶ್ರೀಗಳಾದ ಪೂಜ್ಯ ಮಹಾದೇವ ಸ್ವಾಮೀಜಿ ಯವರ ನೇತೃತ್ವದಲ್ಲಿ    ಕಾರ್ಯ ಬೇಗ ಮುಗಿಯಲಿ ಎಂದರು. ಈ ಸಂದರ್ಭದಲ್ಲಿ  ಶಶಿಧರಯ್ಯ ಹಿರೇಮಠ ಮತ್ತು  ಗ್ರಾಮದ ಪ್ರಮುಖರು ಭೂಮಿ ಪೂಜೆಯಲ್ಲಿ ಪಾಲ್ಗೊಂಡು ತಮ್ಮ ಸಹಾಕರ ನೀಡಿದರು.   ಶ್ರೀಮಠದ ಪೂಜ್ಯ ಮಹಾದೇವ ಸ್ವಾಮೀಜಿ,   ಹಂಚ್ಯಾಲಪ್ಪ   ಚಿಲವಾಡಿಗಿ, ನಿಂಗಪ್ಪ ಬ್ಯಾಳಿ, ಬೀಮಪ್ಪ ಮುರಿಗಿ, ಮಲ್ಲಪ್ಪ ಗೋರಿ, ಗವಿಸಿದ್ದಪ್ಪ ದೊಡ್ಡಮನಿ, ಪಕ್ಕಪ್ಪ ತಂಗೋಡಿ, ರಾಮಪ್ಪ ನಿಟ್ಟಾಲಿ, ಶರಣಪ್ಪ ಗಮಾನಿ, ಮುತ್ತಪ್ಪ ಗೋರಿ, ಶರಣಯ್ಯ ಡಂಬಳಮಠ, ಕಲ್ಲಯ್ಯ ಮತ್ತು ಇತರರು ಇದ್ದರು. ಪೋಟೋ ಪೈಲ್ : ತಳಕಲ್ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ಕಲ್ಯಾಣ ಮಂಟಪ ಪೂಜೆ ನೇರವೇರಿಸಿದ ಕುಕನೂರ ಶ್ರೀಗಳು.