ಬಳ್ಳಾರಿ: ಪಿಂಚಣಿ ಅದಾಲತ್ ಸಭೆ ಸಕಾಲಕ್ಕೆ ಪಿಂಚಣಿ ದೊರಕಿಸಲು ಸೂಚನೆ

ಬಳ್ಳಾರಿ 08: ನಿವೃತ್ತಿಯಾದ ಸರಕಾರಿ ನೌಕರರಿಗೆ ಯಾವುದೇ ರೀತಿಯ ಅಡೆತಡೆಗಳಿಲ್ಲದೇ ಸರಿಯಾದ ಸಮಯಕ್ಕೆ ಪಿಂಚಣಿ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. 

ಆ.23ರಂದು ನಡೆಯುವ ಪಿಂಚಣಿ ಅದಾಲತ್ಗೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಚೇರಿಯಲ್ಲಿ ನಿವೃತ್ತರಾಗುವ ನೌಕರರಿಗೆ ಸಂಬಂಧಿಸಿದ ಪಿಂಚಣಿ ಪ್ರಸ್ತಾವಿತ ದಾಖಲಾತಿಗಳನ್ನು 3 ತಿಂಗಳ ಮುಂಚೆ ಸಿದ್ದಪಡಿಸಿ ಪಿಂಚಣಿ ಸಕಾಲದಲ್ಲಿ ಸಿಗುವಂತೆ ನೋಡಿಕೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದರು. 

ನಿವೃತ್ತ ಸರಕಾರಿ ನೌಕರರಿಗೂ ಆರೋಗ್ಯ ಸೇವೆ ವಿಸ್ತರಿಸಿ: 

ರಾಜ್ಯ ಸರಕಾರ ಹಾಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ನೌಕರರಿಗೆ ಕಲ್ಪಿಸಲಾಗಿರುವ ಆರೋಗ್ಯ ಸೇವೆಗಳನ್ನು ನಿವೃತ್ತ ಸರಕಾರಿ ನೌಕರರಿಗೆ ವಿಸ್ತರಿಸಿ ಅನುಕೂಲ ಮಾಡಿಕೊಡಬೇಕು ಎಂದು ನಿವೃತ್ತ ನೌಕರ ವೀರಯ್ಯ ಕೂಡ್ಲಿಗಿ ಅವರು ಮನವಿ ಮಾಡಿದರು. ಸರಕಾರ ಸಾಕಷ್ಟು ಪ್ರಮಾಣದಲ್ಲಿ ಪಿಂಚಣಿ ನೀಡುತ್ತಿದ್ದು,ಇದರಿಂದ ನಮ್ಮ ಜೀವನ ಸುಭದ್ರವಾಗಿ ನಡೆದಿದೆ ಎಂದರು. ಬಸ್ಪಾಸ್ಗಳಲ್ಲಿ ಶೇ.50ರಷ್ಟು ರಿಯಾಯ್ತಿ ಕಲ್ಪಿಸಬೇಕು. ಪಿಂಚಣಿ ಪಡೆಯುವ ನಿವೃತ್ತ ನೌಕರರಿಗಾಗಿಯೇ ತಿಂಗಳ ಮೊದಲ ವಾರದಲ್ಲಿ ಬ್ಯಾಂಕ್ಗಳಲ್ಲಿ ಪ್ರತ್ಯೇಕ ಕೌಂಟರ್ ತೆರೆಯಬೇಕು. ಬ್ಯಾಂಕ್ ಸಿಬ್ಬಂದಿ ಅಗತ್ಯ ಸಹಕಾರ ನೀಡುವಂತೆ ನೋಡಿಕೊಳ್ಳಬೇಕು ಎಂದು ನಿವೃತ್ತ ನೌಕರರು ಮನವಿ ಮಾಡಿದರು. 

ನಿವೃತ್ತ ಸರಕಾರಿ ನೌಕರರಿಗಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿವೇಶನ ಒದಗಿಸುವಂತೆ ಇದೇ ಸಂದರ್ಭದಲ್ಲಿ ಕೋರಿಕೊಂಡರು. 

ಇನ್ಮುಂದೆ 5 ಬ್ಯಾಂಕ್ಗಳಲ್ಲಿ ಮಾತ್ರ ಪಿಂಚಣಿ ವಿತರಣೆ:

ಸರಕಾರದ ಆದೇಶದಂತೆ ಇನ್ಮುಂದೆ ಎಸ್ಬಿಐ, ಕೆನರಾಬ್ಯಾಂಕ್, ಕಾಪರ್ೋರೇಶನ್ ಬ್ಯಾಂಕ್, ವಿಜಯ ಬ್ಯಾಂಕ್ ಮತ್ತು ಸಿಂಡಿಕೆಟ್ ಬ್ಯಾಂಕ್ಗಳಲ್ಲಿ ನಿವೃತ್ತ ಸರಕಾರಿ ನೌಕರರಿಗೆ ಪಿಂಚಣಿ ವಿತರಿಸಲಾಗುತ್ತದೆ ಎಂದು ಎಸ್ಬಿಐ ಅಧಿಕಾರಿಯೊಬ್ಬರು ಸಭೆಗೆ ವಿವರಿಸಿದರು. ಬೇರೆ ಬ್ಯಾಂಕ್ಗಳಲ್ಲಿ ಪಿಂಚಣಿ ಪಡೆಯುತ್ತಿರುವವರು ಕೂಡಲೇ ಈ ಬ್ಯಾಂಕ್ಗಳಲ್ಲಿ ತಮ್ಮ ಖಾತೆ ಒಪನ್ ಮಾಡಿ ಪಿಂಚಣಿ ಸೌಲಭ್ಯ ಪಡೆಯಬಹುದು. 

ತಮಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೊಡಿಕೊಳ್ಳಲಾಗುವುದು ಮತ್ತು ಅಗತ್ಯ ಸಹಕಾರ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಈ ಬ್ಯಾಂಕ್ಗಳಲ್ಲಿ ಖಾತೆ ಆರಂಭಿಸಿ ಪಿಂಚಣಿ ಸೌಲಭ್ಯ ಪಡೆಯುವಿಕೆಗೆ 5 ತಿಂಗಳ ಕಾಲಾವಧಿ ಇದೆ ಎಂದು ಅವರು ಸ್ಪಷ್ಟಪಡಿಸಿದರು. ನಿವೃತ್ತ್ತ ನೌಕರರಿಗೆ ಪಿಂಚಣಿ ಸೌಲಭ್ಯ ಸಕಾಲದಲ್ಲಿ ದೊರೆಯುವ ನಿಟ್ಟಿನಲ್ಲಿ ಜಿಲ್ಲಾ ಖಜಾನೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಜಿಲ್ಲಾ ಖಜಾನಾಧಿಕಾರಿ ರವಿ ಅವರು ತಿಳಿಸಿದರು. 

ನಿವೃತ್ತ್ತ ಮಹಿಳಾ ನೌಕರರಾದ ಕಲಾವತಿ ಎನ್ನುವವರು ಮಾತನಾಡಿ ನಾನು ಕಳೆದ ಮೇ 31ರಂದು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದೇನೆ. ಆದರೆ ಇದುವರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪಿಂಚಣಿ ಪ್ರಸ್ತಾವನೆ ಕಳುಹಿಸಿಕೊಟ್ಟಿಲ್ಲ ಎಂಬ ಅಳಲನ್ನು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿ  ಸತೀಶಕುಮಾರ್ ಅವರು ಕೂಡಲೇ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. 

ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಸಹಾಯಕ ನಿದರ್ೇಶಕಿ ಸಾವಿತ್ರಿ ಅವರು ಪಿಂಚಣಿ ಅದಾಲತ್ ಉದ್ದೇಶಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಸಭೆಗೆ ವಿವರಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾನಗರಾಭಿವೃದ್ಧಿ ಯೋಜನಾ ನಿದರ್ೇಶಕ ರಮೇಶ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿದರ್ೇಶಕ ಬಿ.ಕೆ.ರಾಮಲಿಂಗಪ್ಪ, ಮಹಾನಗರ ಪಾಲಿಕೆಯ ಅಧೀಕ್ಷಕ ಶ್ರೀನಿವಾಸ್, ಡಿಯುಡಿಸಿ ಮ್ಯಾನೇಜರ್ ಮಂಜುನಾಥ, ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಅಭಿವೃದ್ಧಿ ಅಧಿಕಾರಿಗಳಾದ ಸುಧೀರ್,ಖೇಮಣ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ನಿವೃತ್ತ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಮತ್ತು ನಿವೃತ್ತ ನೌಕರರು ಇದ್ದರು.