ಬಳ್ಳಾರಿ: 15 ಬಾಲಕಾರ್ಮಿಕ ಮಕ್ಕಳ ರಕ್ಷಣೆ

ಬಳ್ಳಾರಿ 08: ನಗರದ ಮುಂಡರಗಿ ಪ್ರದೇಶದ ವಿಜಯ ಹನುಮಾನ್ ಕೋಲ್ಡ್ ಸ್ಟೋರೆಜ್ ಹಾಗೂ ಖಾಜಾ ಗರೀಬ್ ಜಿನ್ನಿಂಗ್ನಲ್ಲಿ ದುಡಿಯುತ್ತಿದ್ದ 15 ಜನ ಬಾಲ ಕಾರ್ಮಿಕ ಮಕ್ಕಳನ್ನು  ತಹಶೀಲ್ದಾರ್ ಯು.ನಾಗರಾಜ್ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆಯ ಚಂದ್ರಶೇಖರ್ ಐಲಿ ಹಾಗೂ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಡಿವೈಎಸ್ಪಿ ಜಾವೀದ್ ಇನಾಂದರ್ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದೆ. 

ನಗರದ ಮುಂಡ್ರಿಗಿ ಪ್ರದೇಶದಲ್ಲಿರುವ ವಿಜಯ್ ಹನುಮಾನ್ ಕೋಲ್ಡ್ ಸ್ಟೋರೇಜ್ ಕೈಗಾರಿಕೆಯಲ್ಲಿ 7 ಮಕ್ಕಳು ಹಾಗೂ ಖಾಜಾ ಗರೀಬ್ನ ಮೇಣಸಿನಕಾಯಿ ಘಟಕದಲ್ಲಿ 5 ಜನ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಕಾಮರ್ಿಕ ಇಲಾಖೆಯ ಅಧಿಕಾರಿಗಳ ನೇತೃತ್ವದ ತಂಡ ಜಂಟಿ ಕಾಯರ್ಾಚರಣೆ ನಡೆಸಿ ಬಾಲ ಕಾಮರ್ಿಕರನ್ನು ರಕ್ಷಿಸಿದ್ದಾರೆ. 

ಕಾರ್ಯಚರಣೆ ತಂಡದಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಡಿವೈಎಸ್ಪಿ ಜಾವೀದ್ ಇನಾಂದರ್, ಬಾಲಕಾಮರ್ಿಕ ಯೋಜನಾ ನಿರ್ದೇಶಕ ಎ.ಮೌನೇಶ್, ಕಾರ್ಮಿಕ ನಿರೀಕ್ಷಕರಾದ ರವಿದಾಸ್, ರಾಜೇಶ್, ಕ್ಷೇತ್ರಾಧಿಕಾರಿ ಈಶ್ವರಯ್ಯ, ದುರುಗೇಶ್ ಮಾಚನೂರು, ಭೋಜರಾಜು ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಸೇರಿದಂತೆ ಇತರರು ಇದ್ದರು.